________________
वीर ज्ञानोदय ग्रन्थमाला
ಹುಣ್ಣಿಮೆಯ ಚಂದ್ರನಂತೆ ಆರ್ಯಿಕಾ ಜ್ಞಾನಮತಿ ಮಾತಾಜೀ.
ಲೇ. ಚಂದ್ರಸಾಗರ ವರ್ಣಿಜೀ ಪ್ರಧಾನ ಸಂಪಾದಕರು. ಸಮಂತ ಭದ್ರವಾಣೀ ನಾ.ರಾ. ಪುರ, ಕರ್ನಾಟಕ
ಭಾರತ ದೇಶದಲ್ಲಿ ಉತ್ತರಪ್ರದೇಶ ರಾಜ್ಯದ ಬಾರಾಬಂಕಿ ಜಿಲ್ಲೆಯ ಟಿಕೃತ ನಗರದ ವಾಸಿ ಶ್ರೀ ಧನಕುಮಾರ್ ಶ್ರೇಫ್ಟಿ ಎಂಬ ಹೆಸರಿನ ಒಬ್ಬ ವರ್ತಕನು ವಾಸವಾಗಿದ್ದನು. ಅವನು ಬಹಳ ಧರ್ಮಿಷ್ಟನು, ಜನಾನುರಾಗಿಯು ಆಗಿದ್ದನು. ಈ ಶ್ರೇಷ್ಮೆಗೆ ಯೋಗ್ಯ ಪುತ್ರನೊಬ್ಬ ಇದ್ದನು. ಅವನೇ ಛೋಟೆಲಾಲ್ ಎಂಬವನು. ಇವನೂ ಸಹ ತಂದೆಯಂತೆ ಧರ್ಮಾತನೂ, ಬುದ್ದಿಶಾಲಿಯೂ ಆಗಿದ್ದನು.
ಛೋಟೆಲಾಲನು ಕಾಲಕ್ರಮೇಣ ಲೌಕಿಕ ಹಾಗೂ ಪಾರಮಾರ್ಥಿಕವಾಗಿ ವಿದ್ಯಾಭ್ಯಾಸವನ್ನು ಮುಗಿಸಿ ಯೌವನಾವಸ್ಥೆಗೆ ಕಾಲಿಟ್ಟನು. ಇದನ್ನು ಅರಿತ ಶ್ರೀ ಧನಕುಮಾರ ಶ್ರೇಷ್ಠಿಯು ಯೋಗ್ಯ ಕನ್ಯಯಾದ ಮೋಹಿನಿ ದೇವಿಯೊಡನೆ ವಿವಾಹವನ್ನು ಮಾಡಿಸಿದನು. - ಕೆಲವು ದಿನ ತಿಂಗಳು ಕಳೆದ ಬಳಿಕ ಮೋಹಿನಿ ದೇವಿಯು ಗರ್ಭಿಣಿಯಾದಳು. ಒಂಬತ್ತನೆ ತಿಂಗಳಲ್ಲಿ ಸತಿ ಶಿರೋಮಣಿ ಮೋಹಿನಿ ದೇವಿಯು ಣಮೋಕಾರ ಮಂತ್ರವನ್ನು ಸ್ಮರಿಸುತ್ತಾ ಪ್ರಥಮ ಸಂತಾನವನ್ನು ಕರ್ಮಭೂಮಿಗೆ ಕೊಡುಗೆಯಾಗಿ ಕೊಟ್ಟಳು. ಅವಳೇ ಮೈನಾದೇವೀ. ಮೈನಾಳ ಜನ್ಮ ನಕ್ಷತ್ರ, ಯೋಗ ಇತ್ಯಾದಿ. ಎಲ್ಲಾ ಶುಭ ಲಕ್ಷಣಗಳಾಗಿದ್ದವು.
- ಈ ಮಗುವು ಜನ್ಮತಾಳಿದಾಗಂದಿನಿಂದ ಆ ಉರಿನಲ್ಲಿ ಜನರಿಗೆ ಎಲ್ಲಿಲ್ಲದ ಆನಂದವೇ ಆನಂದ, ಈ ಕನೈಯ ಹೊಳೆಯುತ್ತಿರುವ ಮುಖವನ್ನು ನೋಡಿದ ಒಬ್ಬ ಮಹಿಳೆ ಇಂತೆಂದಳು. ಮೋಹಿನಿ ದೇವಿಯ ಹೊಟ್ಟೆಯಲ್ಲಿ ಯಾವುದೊ ಒಂದು ದೇವಿಯೇ ಬಂದು ಹುಟ್ಟಿದೆ ಎಂದು ಹೇಳಿದಳು. ಊರಿನ ಜನರು ಈ ಮಗುವನ್ನು ಎತ್ತಿಕೊಂಡು ಆಟವಾಡಿಸುತ್ತಾ ಇರುತ್ತಿದ್ದರು, ಮಗುವು ಕೂಡ ತನ್ನ ಪೂರ್ವ ಜನ್ಮದ ಸಂಸ್ಕಾರದಿಂದ ದಿನೇ-ದಿನೇ ವಿದ್ಯಾ ಬುದ್ದಿ ಇತರ ಎಲ್ಲಾ ಗುಣಗಳನ್ನು ಪಡೆದು, ಎಲ್ಲರ ಕಣ್ಣಿಗು ಎಲ್ಲರ ಬಾಯಲ್ಲೂ ಪ್ರೀತಿಯ ಪ್ರಶಂಸೆಗೆ ಒಳಗಾಗಿತ್ತು.
ಈ ರೀತಿಯ ಮಗಳ ವರ್ತನೆ ಹಾಗೂ ಜನಗಳ ಪ್ರೀತಿ ವಿಶ್ವಾಸವನ್ನು ಗಳಿಸಿದ ಮಗುವನ್ನು ನೋಡಿ, ತಾಯಿ ಮೋಹಿನೀದೇವಿಯು ತನ್ನ ಮನಸ್ಸಿನಲ್ಲಿ ಈ ರೀತಿ ಯೋಚಿಸುತ್ತಿದ್ದಳು. ನಾನು ನನ್ನ ಪ್ರಥಮ ಬಾರಿಗೆ ಈ ಕನೈಗೆ ಜನ್ಮ ಕೊಟ್ಟಿದ್ದು ಒಳ್ಳೆಯ ಸಾರ್ಥಕವಾಯಿತು. ನಾನೇ ಧನ್ಯಳು ಎಂದು ತಿಳಿದಳು.
ತಾಯಿ ಮೋಹಿನೀದೇವಿಯು ತನ್ನ ಸಂಸಾರ ಜೀವನದಲ್ಲಿ ಕೇವಲ ಇಂದ್ರಿಯಗಳ ವಾಸನೆಗೆ ಮಗಳಾಗದೆ ಭಗವಾನ್ ಜಿನೇಂದ್ರರ ಆರಾಧನೆ ಪೂಜೆ ಹಾಗೂ ಭಕ್ತಿಗಳಲ್ಲಿ ಸಮಯವನ್ನು ಕಳೆಯುತ್ತಿದ್ದಳು. ತನ್ನ ತಂದೆಯು ಅಳಿಯನೊಡನೆ ಬೀಳ್ಕೊಡುವಾಗ 'ಪದ್ಮನಂದೀ ಪಂಚ ವಂಶಿತಿಕಾ' ಎಂಬ ಧರ್ಮ ಗ್ರಂಥವನ್ನು ಕೊಟ್ಟು ಇಂತೆಂದರು. ಮಗಳೇ ನೀನು ಪ್ರತಿದಿನ ತಪ್ಪದೆ ಓದಮ್ಮ ಎಂದು ಕಳುಹಿಸಿದರಂತೆ. ಅವಳೂ ಸಹ ತಂದೆಯ ವಚನದಂತೆ ಭಕ್ತಿ ಶ್ರದ್ದೆಯಿಂದ ಓದಿ ತಿಳಿದುಕೊಳ್ಳುತ್ತಿದ್ದಳು. ಈ ಸಂಸ್ಕಾರವೇ ಮಗಳ ಮೇಲೆ ಬೀಳಲು ಕಾರಣವಾಯಿತು.
ಮನೆಯ ಜವಾಬ್ದಾರಿಯನ್ನು ತಾಯಿ ಮೋಹಿನೀ ದೇವಿಯು ನೋಡಿಕೊಳ್ಳುತ್ತಿದ್ದಳು, ಈ ಮಗುವಿಗೆ ಹಾಲು ಕುಡಿಸುವಾಗ ನಿದ್ರೆ ಮಾಡಿಸುವಾಗ ತೊಟ್ಟಿಲು ತೂಗುವಾಗ ಭಕ್ತಾಮರ, ಅನುಪ್ರೇಕ್ಷೆ ಶೀಲಕಥೆ, ಇತ್ಯಾದಿ ಜೋಗುಳಗಳನ್ನು ಹಾಡಿ ಮಲಗಿಸುತ್ತಿದ್ದಳು. ಹೀಗೆನೆ ದಿನ ಕಳೆದು ಮೈನಾದೇವಿಯು 8ನೇ ವರ್ಷಕ್ಕೆ ಕಾಲಿಟ್ಟಳು.
ಅನಾದಿ ಕಾಲದಿಂದಲೂ ಮನೆಯಲ್ಲಿ ಮಿಥ್ಯಾತ್ವ ಎಂಬುದು ತುಂಬಿ ತುಳುಕಾಡುತ್ತಿತ್ತು. ಇದನ್ನು ಅರಿತ ಮೈನೆಯು ಮಿಥ್ಯಾತ್ವದ ಕ್ರಿಯೆಗಳನ್ನೆಲ್ಲ ಒಂದೊಂದೆಯಾಗಿ ಬಂದು ಮಾಡಿಸುತ್ತಾ ಬಂದಳು. ಮನೆಯಲ್ಲಿ ಒಂದು ಅಜ್ಜಿ ಇದ್ದಳು. ಅಜ್ಜಿಗೆ ಈ ಮೊಮ್ಮಗಳ ಸಮ್ಯಕ್ಷದ ಕ್ರಿಯೆಗಳು ಸರಿಹೋಗುತ್ತಿರಲಿಲ್ಲ ಅದಕ್ಕಾಗಿ ಒಂದು ದಿನ ಇಂತೆಂದಳು-ಮೊಮ್ಮಗಳೇ ನೀನು ನಮ್ಮ ವಂಶ ಪರಂಪರೆಯಿಂದ ಬಂದಂತಹ ಕ್ರಿಯೆಗಳನ್ನು ನಿಲ್ಲಿಸುವುದು ಬೇಡ ಅಂತ ಹೇಳುತ್ತಿದ್ದಾಗ ಮೈನೆಯು ಸಮಾಧಾನದಿಂದ ಎಲ್ಲವನ್ನು ತಿಳಿಸಿ ಹೇಳುತ್ತಿದ್ದಳು, ಅಜ್ಜಿಯವರೇ “ಈ ಜೀವವು ಅನಂತಕಾಲದಿಂದ ಈ ಒಂದು ಮಿಥ್ಯಾತ್ವದ ಕಾರಣದಿಂದ ನಾಲ್ಕು ಗತಿಯಲ್ಲಿ ಎಷ್ಟೋ ಸಲ ಅನೇಕ ರೀತಿಯ ದುಃಖಗಳನ್ನು ಸಹನೆ ಮಾಡುತ್ತಾ ಬಂದಿದೆ. ಒಂದು ವಿಶೇಷ ಪುಣ್ಯದಿಂದ ಚಿಂತಾಮಣಿ ರತ್ನಕ್ಕೆ ಸಮಾನವಾದ ಮನುಷ್ಯ ಜನ್ಮವು ಸಿಕ್ಕಿದೆ. ಈ ಜನ್ಯದಿಂದ ಸಮ್ಯಕ್ಷ ಪ್ರಾಪ್ತಿಮಾಡಿಕೊಂಡು ಆತನನ್ನು ಉದ್ಧಾರ ಮಾಡಿಕೊಳ್ಳಿ' ಎಂದಳು ಮೈನಾದೇವಿ.
ಮೈನಾಳ ಸಿಹಿ ಹಾಗೂ ಹಿತಮಿತವಾದ ಮಾತುಗಳನ್ನು ಕೇಳಿ ಅಜ್ಜಿ ತಾಯಿ ಮೊದಲಾದವರು ಮಿಥ್ಯಾತ್ವವನ್ನು ಆ ದಿನವೇ ತ್ಯಜಿಸಿ
ಎಲ್ಲೋ ಒಂದು ದಿನ ತನ್ನ ಗೆಳತಿಯರೊಡನೆ ಮೈನಾಳು ಆಟವಾಡುತ್ತಿದ್ದಳು. ಆಗ ತಾಯಿ ಮೋಹಿನಿದೇವಿಯು ಮಗಳನ್ನು ಕರೆದು ಇಂತೆಂದಳು. “ಮಗು ಈ ಆಟದಿಂದ ಏನು ಪ್ರಯೋಜನ, ಬಾ ನೀನು ಶೀಲ, ದರ್ಶನದ ಕಥೆಗಳನ್ನು ಓದಿ ಆನಂದ ಪಡು” ಎಂದಳು. ಮೈನಾಳು ತಾನೇ ಸ್ವಯಂ ಜ್ಞಾನಿಯಾಗಿದ್ದರಿಂದ ಇಂತಹದನ್ನೆಲ್ಲ ಜಲ್ಲಿ ತಿಳಿದುಕೊಂಡಳು.
Jain Educationa international
For Personal and Private Use Only
www.jainelibrary.org