SearchBrowseAboutContactDonate
Page Preview
Page 429
Loading...
Download File
Download File
Page Text
________________ गणिनी आर्यिकारत्न श्री ज्ञानमती अभिवन्दन ग्रन्थ [३६७ ಮಹಾರಾಜರು ಜೋತಿಷ್ಯದಲ್ಲಿಯೂ ಸಹ ಬಲ್ಲವರಾಗಿದ್ದರು. “ಇವಳ ಕೈ ನೋಡಿ ಹೀಗೆ ಎಂದರು-ಇವಳಿಗೆ ರಾಜಯೋಗವಿದೆ.” ಇವಳು ಮನೆಯನ್ನು ಬೇಗ ಬಿಡುತ್ತಾಳೆ ಮತ್ತು ಇವಳ ಮರಣವು ಸನ್ಯಾಸದಲ್ಲಿ ಇದೆ.” ಮೋಹಿನಿಗೆ ಜೋತಿಷಿಗಳ ಹೆಸರು ಕೇಳಿದರೆ ಸಿಟ್ಟು ಬರುತ್ತಿತ್ತು. ಆದರೆ ಮುನಿಗಳ ಮಾತಿನಲ್ಲಿ ವಿಶ್ವಾಸ ಬಂತು, ಮುನಿಮಹಾರಾಜರು ಮೈನಾಳಿಗೆ 3-4 ಪ್ರಶ್ನೆಗಳನ್ನು ಕೇಳಿದರು. ಆಗ ಮೈನಾಳು 'ಪದ್ಮನಂದಿ ಪಂಚವಿಂಶತಿಕಾ' ಗ್ರಂಥದ ಕೆಲವು ಶ್ಲೋಕಗಳನ್ನು ಹೇಳಿದಳು. ಆಗ ಮಹಾರಾಜರು ಹೀಗೆ ಹೇಳಿದರು. "ಒಳ್ಳೆಯದು, ನಿನ್ನ ಮನಸ್ಸು ನಿಜವಾಗಿಯೂ ವಿರಕ್ತಿಯ ಕಡೆಗೆ ತಿರುಗಿದೆ. ಪುರುಷಾರ್ಥವನ್ನು ಮಾಡು” ಎಂದರು. ಇದೇ ರೀತಿಯಲ್ಲಿ ಮುನಿಶ್ರೀಗಳ ಆಹಾರ, ದರ್ಶನ, ಪ್ರವಚನ-ಇತ್ಯಾದಿ ಕ್ರಿಯೆಗಳು ಮೈನಾಳಿಗೆ ಹಿಡಿಸಿದವು. ಒಂದು ದಿನ ಬಸ್ತಿಯ ಹೊರಗಡೆ ದೊಡ್ಡ ಪಂಡಾಲಿನಲ್ಲಿ ಮುನಿಗಳ ಕೇಶಲೋಚದ ಕಾರ್ಯಕ್ರಮ ನಡೆದಿತ್ತು. ಈ ಕೇಶಲೋಚನವು ಶರೀರದ ಮಮತೆಯನ್ನು ತ್ಯಜಿಸುವ ಸೂಚನೆಯನ್ನು ತೋರಿಸುತ್ತಿತ್ತು. ಇದನ್ನು ನೋಡಲು ಜೈನ ಅಜೈನರೆಲ್ಲರೂ ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಕೆಲವರು ಆಶ್ಚರ್ಯವನ್ನು ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮನದಲ್ಲಿ ದುಖಃಪಡುತಿದ್ದರು. ಒಬ್ಬರ ಕಷ್ಟದಲ್ಲಿ ಇನ್ನೊಬ್ಬರು ಪಾಲ್ಗೊಳ್ಳುವುದು ಮಾನವನ ಸಹಜವಾದ ಸ್ವಭಾವವೇ ಸರಿ. ಈ ಕಾರ್ಯಕ್ರಮದಲ್ಲಿ ಮೈನಾಳು ಕುಳಿತಿದ್ದಳು, ಅವಳು ವೈರಾಗ್ಯದಲ್ಲಿ ಮುಳುಗಿದ್ದಳು, ಮನಸ್ಸಿನಲ್ಲಿ ಹೀಗೆ ಯೋಚಿಸುತ್ತಿದ್ದಳು, “ಎಲೈ ದೇವರೆ! ಮೂರು ಲೋಕದ ಒಡೆಯನೆ! ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿ ಯಾವಾಗ ಬರುತ್ತದೆ? ಅಂತ ಹೀಗೆ ಮೈನಾ ಯೋಚಿಸುತ್ತಿದ್ದಂತೆ, ಅವಳ ಎಡಭುಜ ಹಾಗು ಕಣ್ಣುಗಳು ಹಾರಲಿಕ್ಕೆ ಪ್ರಾರಂಭಿಸಿದವು. ಮೈನಾಳು ಇವು ಶುಭ ಶಕುನಗಳು ಎಂದು ತಿಳಿದು ಆನಂದಪಟ್ಟಳು. ಕೆಲವು ದಿನಗಳ ಬಳಿಕ ಆಚಾರ್ಯರ ಸಂಘವು ಬೇರೊಂದು ಕಡಿಗೆ ವಿಹಾರ ಮಾಡಿತು. ಮೈನಾಳ ಪರಿವಾರದವರೆಲ್ಲರೂ ಸಂಘದೊಡನೆ ಹೋಗಲು ನಿರಾಕರಿಸಿದರು. ಆದರೆ ಆಚಾರ್ಯ ಶ್ರೀಗಳು ಮೈನಾಳಿಗೆ ಹೀಗೆ ಹೇಳಿ ಸಮಾಧಾನ ಮಾಡಿ ಆಶೀರ್ವಾದಿಸಿದರು, “ಇವರು ಅವರ ಕರ್ತವ್ಯವನ್ನು ಮಾಡುತ್ತಾರೆ. ನೀನು ನಿನ್ನ ಕರ್ತವ್ಯದಲ್ಲಿ ತಲ್ಲೀನಳಾಗು. ಬಹಳ ಬೇಗನೇ ನಿನ್ನ ಕಾರ್ಯವು ಫಲಕಾರಿಯಾಗುವುದು' ವಿಧಿಯ ನಿಯಮವು ಯಾರಿಂದಲೂ ತಡೆಯಲಿಕ್ಕೆ ಸಾಧ್ಯವಾಗುವುವಿಲ್ಲ ಸನ್ 1952 ರಲ್ಲಿ ಆಚಾರ್ಯರ ಸಂಘವು ಬಾರಾಬಂಕಿಯ” ನಗರದಲ್ಲಿ ಚಾತುರ್ಮಾಸ ಮಾಡಿತು. ಮೈನಾಳೂ ಕೂಡ ವಿರಕ್ತಿಯ ಕಡೆಗೆ ಮನಸ್ಸನ್ನು ಹರಿಸುತ್ತಿದ್ದಳು. ಮೈನಾ ಮನೆಯಲ್ಲಿ ವಿರಕ್ತಳಾಗಿ ಇದ್ದುಕೊಂಡು ತನ್ನ ತಮ್ಮ ತಂಗಿಯರನ್ನು ಸ್ನೇಹದಿಂದ ಸಿಂಪಡಿಸುತ್ತಾ ಇದ್ದಳು. ಆ ಸಮಯದಲ್ಲಿ ತಾಯಿ ಮೋಹಿನಿಯು ಗರ್ಭವತಿಯಾಗಿದ್ದಳು. ಆದುದರಿಂದ ಮುನಿಗಳ ದರ್ಶನ ಪಡೆಯಲು ಯಾವಾಗ ಹೋಗಬೇಕು ಅಂತ ಯೋಚಿಸುವಷ್ಟರಲ್ಲಿ ತಾಯಿಯ ಈ ಅವಸ್ಥೆಯನ್ನು ನೋಡಿ ಮನದಲ್ಲಿಯೇ ಬೇಸರಗೊಳ್ಳುತ್ತಿದ್ದಳು. ಒಂದು ದಿನ ತಾಯಿಗೆ ಹೊಟ್ಟೆನೋವು ಬಹಳ ಜೋರಾಯಿತು. ಆಗ ಮೈನಾಳು ಸಹಸ್ರನಾಮ ಸ್ತೋತ್ರವನ್ನು ಓದಿ ಒಂದು ಲೋಟದಲ್ಲಿ ಮಂತ್ರಿಸಲ್ಪಟ್ಟ ನೀರನ್ನು ಕುಡಿಸಿದಳು. ಸ್ವಲ್ಪ ಹೊತ್ತಿನಲ್ಲಿಯೇ ರೂಂನಿಂದ ದಾದಿಯ ಶಬ್ದವು ಬಂದಿತು. “ಮೈನಾ! ಕೈ ಚಪ್ಪಾಳೆ ಹೊಡಿ, ನಿನ್ನ ತಂಗಿ ಹುಟ್ಟಿದ್ದಾಳೆ,” ಹೀಗೆ ದಾದಿ ಅಂದಳು, “ಈ ಹುಡುಗಿಯು ಏನು ಕುಡಿಸಿದಳು ತಿಳಿಯಲಿಲ್ಲ ಎಷ್ಟು ಬೇಗ ಮಗು ಹುಟ್ಟಿತ್ತು. ನನಗಂತೂ ಈ ದಿನ ಹೆರಿಗೆ ಆಗುವ ಲಕ್ಷಣಗಳೇ ಕಾಣಿಸಲಿಲ್ಲ” ಮೈನಾಳಿಗಂತೂ ಈಗ ಒಂದೊಂದು ದಿನವೂ ಸಹ ವಜ್ರಕ್ಕೆ ಸಮಾನವಾಗಿದ್ದವು. ಆದರೆ ತಾಯಿಯ ಬಲವಂತಕ್ಕೆ ನಿಂತಿದ್ದಳು. ರಕ್ಷಾ ಬಂಧನ ಪರ್ವವು ಬಂತು. ತಾಯಿಯವರಿಗೆ ಹೆರಿಗೆಯಾಗಿ 22 ದಿನ ಆಗಿತ್ತು, ಮೈನಾಳು ಆ ದಿನ ತನ್ನ ತಂಗಿಗೆ ಸ್ನಾನ ಮಾಡಿಸಿ ಬಸ್ತಿಗೆ ಕರೆದುಕೊಂಡು ಹೋಗಿ ತನ್ನ ಮನಸ್ಸಿಗೆ ಒಪ್ಪುವಂತಹ “ಮಾಲತಿ” ಎಂದು ಹೆಸರನ್ನಿಟ್ಟಳು, ಮತ್ತು ತಂಗಿಯಿಂದ ಎಲ್ಲರಿಗೂ (ತಮ್ಮಂದಿರಿಗೆ) ರಾಖಿ ಕಟ್ಟಿಸಿದಳು. ಈ ಎಲ್ಲಾ ಕಾರ್ಯಗಳು ಮುಗಿದ ನಂತರ ಕೈಲಾಸಚಂದ್ರನೆಂಬ ತಮ್ಮನನ್ನು ಕರೆದುಕೊಂಡು ಆಚಾರ್ಯ ಪುಂಗವರ ದರ್ಶನದ ನೆಲೆಯಿಂದ ಬಾರಾಬಂಕಿಗೆ ಹೋದಳು. ಈಗ ಅವಳನ್ನು ತಾಯಿ, ತಂದೆಯವರ ಮಮತೆಯು ತಡೆಯಲಿಕ್ಕೆ ಆಗಲಿಲ್ಲ ಬಾರಾಬಂಕಿಗೆ ಹೋದ ಮೇಲೆ ಮೈನಾದೇವಿಯು ತನ್ನ ಮನಸ್ಸನ್ನು ಕಲ್ಲುಮಾಡಿ ತಮ್ಮನಲ್ಲಿ ಇಂತೆಂದಳು ನಾನು ಮನೆಗೆ ತಿರುಗಿ ಬರಲಾರೆ, ನನ್ನ ಆತ್ಮಕಲ್ಯಾಣ ಮಾಡಿಕೊಳ್ಳಬೇಕು.” ಈ ಮಾತನ್ನು ಕೇಳಿ ಸಹೋದರ ಕೈಲಾಶಚಂದ್ರನು ಅಳಲಿಕ್ಕೆ ಪ್ರಾರಂಭಿಸಿದನು. ಎಷ್ಟು ಅತ್ತರು ಫಲಕಾರಿಯಾಗಲಿಲ್ಲ. ಕೊನೆಗಂತೂ ತಾನೊಬ್ಬನೇ ಮನೆಗೆ ಹೋಗಬೇಕಾಯಿತು. ಮೈನಾಳ ಮನಸ್ಸಂತು ವಿರಕ್ತಿಯ ಕಡೆಗೆ ತಿರುಗಿತ್ತು. ಯಾರು ಬಂದರೂ ಅವಳ ವಜ್ರದಂತಹ ಮನವನ್ನು ಬದಲಾಯಿಸಲು ಆಗಲಿಲ್ಲ. ಮೈನಾಳು ಮನೆಗೆ ಬಾರದೆ ಇದ್ದದ್ದನ್ನು ಕಂಡು ತಂದೆ ತಾಯಿ ಇತರ ಬಂಧುಗಳೆಲ್ಲರೂ ಬಾರಾಬಂಕಿಗೆ ಬಂದರು, ಮತ್ತು ಮೈನಾಳ ಜೊತೆಯಲ್ಲಿ ಸಂಸಾರಕ್ಕೆ ಸಂಬಂಧಪಟ್ಟ ಮಾತುಗಳನ್ನಾಡಿದರು. ಅವೆಲ್ಲವೂ ವ್ಯರ್ಥವಾದವು. ಆಗ ಮೈನಾಳಿಗೆ ಏನೋ ಒಂದು ಉಪಾಯ ಹೊಳೆಯಿತು. ಅಲ್ಲಿಂದ ಎದ್ದು ಬಸ್ತಿಗೆ ಹೋಗಿ ಭಗವಂತನ ಮುಂದೆ ಹೀಗೆ ಹೇಳಿದಳು, “ಎಲೇ ದೇವರೆ! ಎಷ್ಟರವರೆಗೆ ನನಗೆ ಬ್ರಹ್ಮಚರ್ಯ ವ್ರತವನ್ನು ಪಡೆಯುವುದಿಲ್ಲವೋ ಅಷ್ಟರವರೆಗೆ ನಾಲ್ಕು ರೀತಿಯ ಆಹಾರವು ತ್ಯಾಗವಿರಲಿ.” ಎಂದು ಹೇಳಿ ಅಲ್ಲಿಯೇ ಕುಳಿತಳು. ಆಗ ಅಲ್ಲಿಗೆ ಬಂದ ಜನರು ಒಂದು ಜಾತ್ರೆಯೇ ಆಗಿತ್ತು. Jain Educationa international For Personal and Private Use Only www.jainelibrary.org
SR No.012075
Book TitleAryikaratna Gyanmati Abhivandan Granth
Original Sutra AuthorN/A
AuthorRavindra Jain
PublisherDigambar Jain Trilok Shodh Sansthan
Publication Year1992
Total Pages822
LanguageHindi
ClassificationSmruti_Granth
File Size26 MB
Copyright © Jain Education International. All rights reserved. | Privacy Policy