________________
6. ಕಠಿನ ಕಾರ್ಯಗಳನ್ನು ಸಾಧಿಸುವಾಗ ಸಹಾಯಮಾಡಲು ದೇವತೆಗಳು ಆಗಮಿಸುವುದು, ವಿಶಿಷ್ಟ ಸಂದರ್ಭಗಳಲ್ಲಿ ದೇವನು ಪ್ರಕಟವಾಗಿ ನಾಯಕ ಅಥವಾ ನಾಯಿಕೆಯ ಪ್ರಾಣ ರಕ್ಷಿಸುವುದು.
7. ಯಾವುದಾದರು ವಿಶೇಷ ಕಾರಣದಿಂದ ಪೂರ್ವಜನ್ಮದ ಸರಣೆಯುಂಟಾಗಿ ನಾಯಕ ಅಥವಾ ನಾಯಿಕೆ ತನ್ನ ಪೂರ್ವಭವದ ಪ್ರೇಮಿಯನ್ನು ಪಡೆಯಲು ಪ್ರಯತ್ನಿಸುವುದು; ಮಂತ್ರ ಔಷಧಿ ಚಿತ್ರಪಟ- ಯಾತ್ರೆ ಮೊದಲಾದವುಗಳ ಚಮತ್ಕಾರ ಪ್ರಯೋಗ ಮತ್ತು ಅವುಗಳ ಮೂಲಕ ವಿಲಕ್ಷಣ ಕಾರ್ಯಗಳನ್ನು ಸಾಧಿಸುವುದು ಹಾಗೂ ಯಾವುದಾದರೂ ನಗರದ ರಾಜನ ಮೃತ್ಯುವಾದಾಗ ದೇವಾಧಿಷ್ಠಿತ ವಸ್ತುಗಳ ಮೂಲಕ ಹೊಸ ರಾಜನನ್ನು ಸ್ಥಾಪಿಸುವುದು.
8. ವೈರಾಗ್ಯ ಪ್ರಾಪ್ತಿಗಳ ನಿಮಿತ್ತಗಳ ಯೋಜನೆ, ನಿರ್ಜನ ಸ್ಥಾನದಲ್ಲಿ ಧ್ವಸ್ತ ನಗರ ಅಥವಾ ಭವನ ದೊರೆಯುವುದು, ಅಲ್ಲಿ ರಾಕ್ಷಸ ಅಥವಾ ವ್ಯಂತರನ ಉಪದ್ರವ, ಯಾವಳಾದರು ರೂಪವತಿ ರಾಜಕುಮಾರಿ ಅಥವಾ ಶ್ರೇಷ್ಠ ಕನೈಯ ಸದ್ಭಾವ, ನಾಯಕನು ಆ ಕನ್ಯಯೊಂದಿಗೆ ವಿವಾಹವಾಗುವುದು, ಹಾಗೂ ತಮ್ಮ ನಗರದ ಕಡೆ ಪ್ರಯಾಣಿಸುವುದು. ಖಳನಾಯಕನಿಂದ ನಾಯಕನನ್ನು ಸಮುದ್ರಕ್ಕೆ ಬೀಳಿಸುವುದು, ನಾಯಕನು ಪಾರಾಗಿ ಬರುವುದು. ನಾಯಿಕೆಯ ಶೀಲದ ಮೇಲೆ ಖಳನಾಯಕನ ಆಕ್ರಮಣ, ಆದರೆ ನಾಯಿಕೆ ದೃಢತೆ ಮತ್ತು ಅಂತ್ಯದಲ್ಲಿ ಯಾವುದಾದರು ಜಿನಮಂದಿರ ಅಥವಾ ಅನ್ಯ ಧರ್ಮಸ್ಥಾನದಲ್ಲಿ ಆರ್ಯಿಕೆಯ ಸಮ್ಮುಖದಲ್ಲಿ ಸಾಧನೆಯಲ್ಲಿ ತೊಡಗುವುದು, ಕಾಲಾಂತರದಲ್ಲಿ ನಾಯಕನೊಂದಿಗೆ ಮಿಲನ ಮತ್ತು ಅವನ ವಿಪತ್ತಿಗಳು ಕೊನೆಗೊಳ್ಳುವುದು.
9. ಚಿತ್ರಪಟದ ಮುಖಾಂತರ ಪೂರ್ವಭವದ ನಾಯಿಕೆ ಅಥವಾ ನಾಯಕನ ಅನ್ವೇಷಣೆ, ವಿವಾಹದಲ್ಲಿ ವಿಘ್ನು ಹಾಗೂ ಸಂಘರ್ಷದನಂತರ ವಿವಾಹ ನೆರವೇರುವುದು. ಅಣ್ಣ-ತಮ್ಮಂದಿರಲ್ಲಿ ಈರ್ಷ್ಯ, ಅವನ ನಗರ ತ್ಯಾಗ, ಶುಭೋದಯದಿಂದ ತಮ್ಮನಿಗೆ ಧನಾರ್ಜನೆ, ಅನಂತರ ಅಣ್ಣಂದಿರು ಸಹ ಅಲ್ಲಿಗೆ ಆಗಮಿಸುವುದು.
10. ಜನ್ಮ ಜನ್ಮಾಂತರದ ಶೃಂಖಲೆಯಲ್ಲಿ ಒಂದು ಜನ್ಮದಲ್ಲಿ ಶತ್ರುವಾದವನು ಮುಂದಿನ ಜನ್ಮದಲ್ಲಿ ಶತ್ರುವಾಗಿ ಅವತರಿಸುವುದು, ಪ್ರತಿಶೋಧ (ಮುಖ್ಯ) ತೀರಿಸಲು ಅನೇಕ ಪ್ರಕಾರದ ಕಷ್ಟಗಳನ್ನು ಉಂಟುಮಾಡುವುದು ಹಾಗೂ ಕಷ್ಟಸಹಿಷ್ಣುವಾಗಿ ಜನರ ಸಹಾನುಭೂತಿ ಹೊಂದುವುದು.
11. ಕಿರಿಯ ರಾಣಿಯಲ್ಲಿ ಪ್ರೇಮಾಸಕ್ತನಾದ ರಾಜನ ಮೂಲಕ ಅನ್ಯರಾಣಿಯರಿಗೆ ಹಾಗೂ ಅವರ ಮಕ್ಕಳಿಗೆ ಅನ್ಯಾಯ ಮಾಡುವುದು, ಪುತ್ರರ ವಿದೇಶ ಗಮನ, ಅಲ್ಲಿ ಧನಾರ್ಜನೆ ಮತ್ತು ಶಕ್ತಿ ಸಂಪಾದನೆ. ಹಿಂತಿರುಗಿದ ನಂತರ ರಾಜನಿಂದ ಸ್ವಾಗತ ಮತ್ತು ಯಥೋಚಿತ ಸನ್ಮಾನ.
- 296 -
Jain Education International
For Private & Personal Use Only
www.jainelibrary.org