________________
ಈ ಪ್ರಕಾರ ಪ್ರಾಕೃತ ಕಥೆಗಳಲ್ಲಿ ವಿಭಿನ್ನ ಕಥಾನಕ ರೂಢಿಗಳ ಪ್ರಯೋಗವಾಗಿರುವುದರಿಂದ ಅವುಗಳ ಪರಂಪರೆ ಪ್ರಾಚೀನತೆ ಸಿದ್ದವಾಗುತ್ತದೆ ಹಾಗೂ ಸಾಹಿತ್ಯದ ಮಹತ್ವವೂ ಪ್ರಕಟವಾಗುತ್ತದೆ. ಸಾಮಾಜಿಕ ಪರಂಪರೆ, ರೀತಿ-ರಿವಾಜು, ಕಲಾಕೌಶಲ, ವಿದ್ಯಾ-ಬುದ್ದಿ, ಜ್ಞಾನ-ವಿಜ್ಞಾನ ಮೊದಲಾದ ನೂರಕ್ಕಿಂತಲೂ ಹೆಚ್ಚು ಕಥಾನಕ ರೂಢಿಗಳು (ಆಶಯಗಳು) ಪ್ರಾಕೃತಕಥಾ ಸಾಹಿತ್ಯದಲ್ಲಿ ಸಮ್ಮಿಳಿತವಾಗಿವೆ. ಭಾರತೀಯ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಾಚೀನ ಪರಿಸ್ಥಿತಿಗಳ ಪರಿಜ್ಞಾನಕ್ಕೆ ಪ್ರಾಕೃತ ಕಥಾ ಸಾಹಿತ್ಯ ಅತ್ಯಧಿಕವಾಗಿ ಉಪಯೋಗಿ ಆಗುದರಲ್ಲಿ ಯಾವ ಅನುಮಾನವೂ ಇಲ್ಲ.
ಅಡಿಟಿಪ್ಪಣಿ 1. ಆನ್ ದಿ ಲಿಟರೇಚರ್ ಆಫ್ ದಿ ಶ್ವೇತಾಂಬರಾಸ್ ಆಫ್ ಗುಜರಾತ್, ಪು.8. 2. ದಿ ಹಿಸ್ಟರಿ ಆಫ್ ಇಂಡಿಯನ್ ಲಿಟರೇಚರ್, ಭಾಗ-2, ಪು. 545 3. ಹಿಂದಿ ಸಾಹಿತ್ಯ ಕಾ ಆದಿಕಾಲ್, ಪಟ್ನಾ, ಪ್ರ.ಮು, ಪು.74
-0-0-0
-297 -
Jain Education International
For Private & Personal Use Only
www.jainelibrary.org