________________
1. ಕಥೆಗಳಲ್ಲಿ ಗತಿಮತ್ವ (ಚಲನಶೀಲತೆ)- ಕರ್ಮದ ನಿಷತ್ತಿ
2. ಕಥಾನಕಗಳು ಮತ್ತು ಘಟನೆಗಳಲ್ಲಿ ಹೊಸ ತಿರುವು ಉಂಟುಮಾಡವುದು.
3. ಕಥೆಯನ್ನು ವಿಸ್ತರಿಸುವುದು.
4. ಸಂಕೇತಗಳ ಮೂಲಕ ಕಥೆಯ ಉದ್ದೇಶದ ಸ್ಪಷ್ಟಿಕರಣ.
5. ಪ್ರಕ್ಷೇಪಗಳಿಂದ ಕಥಾಸೂತ್ರದ ಅಧ್ಯಾಹಾರ ಮಾಡುವುದು.
6. ಪುರಾತನ ಸಂಸ್ಕೃತ ಮತ್ತು ಪ್ರವೃತ್ತಿಗಳ ಸಂಯೋಜನೆ.
7. ಭಾವಿ ಘಟನೆಗಳ ಸಂಸೂಚನೆ.
8. ಘಟನೆಗಳ ಆವೃತ್ತಿಯಿಂದ ಉತ್ಪನ್ನ ನೀರಸತೆಯನ್ನು ಹೋಗಲಾಡಿಸುವುದು.
ಪ್ರಾಕೃತ ಕಥಾ-ಸಾಹಿತ್ಯದಲ್ಲಿ ಪ್ರಯುಕ್ತ ಸಮಸ್ತ ಕಥಾನಕರೂಢಿಗಳ ವಿಶ್ಲೇಷಣೆ ಮಾಡುವುದು ಈ ಲಘು ಗಾತ್ರದ ನಿಂಬಂಧದಲ್ಲಿ ಸಂಭವವಿಲ್ಲ, ಆದುದರಿಂದ ಕೆಲವು ಪ್ರಮುಖ ಕಥಾನಕರೂಢಿಗಳ ಪಟ್ಟಿಯನ್ನು ಪ್ರಸ್ತುತಪಡಿಸಲಾಗಿದೆ -
1. ಕುದುರೆಯ ಬೇಟೆ ಸಮಯದಲ್ಲಿ ನಿರ್ಜನ-ವನವನ್ನು ಪ್ರವೇಶಿಸುವುದು, ದಾರಿ ಮರೆತು ಹೋಗುವುದು; ಸಮುದ್ರ ಪ್ರಯಾಣದ ಸಮಯದಲ್ಲಿ ಯಾನ ಭಂಗಗೊಳ್ಳುವುದು ಮತ್ತು ಮರದಹಲಗೆಯ ಸಹಾಯದಿಂದ ನಾಯಕ-ನಾಯಿಕೆಯರ ಪ್ರಾಣರಕ್ಷಣೆ - ಇಂಥ ಘಟನಾತ್ಮಕ ಆಶಯಗಳು ಈ ಶ್ರೇಣಿಯಲ್ಲಿ ಸೇರುತ್ತವೆ.
2. ಮಹಾನ್ ಶಕ್ತಿಶಾಲಿ ವ್ಯಕ್ತಿ ಜನಿಸುವ ಮೊದಲು ಸ್ವಪ್ನವಾಗುವುದು ಹಾಗೂ ಭವಿಷ್ಯಸೂಚಕ ಶುಭ ಶಕುನಗಳು ಗೋಚರಿಸುವುದು.
3. ಸ್ವಪ್ನಗಳಲ್ಲಿ ಯಾವನೋ ಒಬ್ಬ ಪುರುಷ ಅಥವಾ ಸ್ತ್ರೀಯನ್ನು ಕಂಡು ಅವರಲ್ಲಿ ಮೋಹಗೊಳ್ಳುವುದು ಅಥವಾ ಅಭಿಶಾಪ, ಯಂತ್ರ-ಮಂತ್ರ, ಮಾಟ-ಮಂತ್ರದ ಬಲದಿಂದ ರೂಪ-ಪರಿವರ್ತನಗೊಳಿಸುವುದು ಮೊದಲಾದ ವಿಚಾರ ಹಾಗೂ ನಂಬಿಕೆಗಳು ಸೇರುವುದು.
4. ಭವಿಷ್ಯವಾಣಿ ಮತ್ತು ಆಕಾಶವಾಣಿಯ ಯೋಜನೆ, ನಾಯಕ ನಾಯಕಿಯರ ಗುಟ್ಟಿನ ಘಟನೆಗಳ ಸೂಚನೆ ನೀಡಲು ಉಕ್ತ ವಾಣಿಗಳ ಪ್ರಯೋಗ, ಅವರ ಕರ್ತವ್ಯದ ಸೂಚನೆ ಹಾಗೂ ಭಾವಿ-ಫಲಾಫಲ.
5. ರಾಕ್ಷಸ ಮತ್ತು ವ್ಯಂತರರ ಮಾತುಕತೆ, ವ್ಯಂತರಿಯ ಪ್ರೇಮಯಾಚನೆ, ರೂಪಾಂತರ ಮೂಲಕ ನಾಯಕನಿಗೆ ಮೋಸ ಮಾಡುವುದು ಹಾಗೂ ವಿದ್ಯಾಧರರ ಮೂಲಕ ನಾಯಕನ ಕಾರ್ಯಗಳಲ್ಲಿ ಸಹಯೋಗ ನೀಡುವುದು.
Jain Education International
295 -
For Private & Personal Use Only
www.jainelibrary.org