________________
ಜಹಾ ರಯ ಅಪಾಯಪೀಡಂ, ತಹಾ ಸಮೃದ್ವಂಸಣಂ ಜಹಾ ರಯಣಾಣಿ, ತಹಾ ಮಹತ್ವಯಾಣಿ, ಜಹಾ ರಯಣವಿಣಿಓಗೋ ತಹಾ ನಿಪ್ಪಾಣಸುಹಲಾಭೋ ."-ವಸುದೇವಹಿಂಡಿ, ಪು.4.
ವಿಂಟರ್ ನಿಸ್ಸನು ಸಹ ಪ್ರಾಕೃತ ಕಥಾ ಸಾಹಿತ್ಯದ ಪ್ರಶಂಸೆ ಮಾಡುತ್ತಾ ಹೀಗೆ ಹೇಳಿದ್ದಾನೆ - 'ಪ್ರಾಕೃತ ಕಥಾಸಾಹಿತ್ಯ ನಿಜವಾಗಿಯೂ ವಿಶಾಲವಾಗಿದೆ. ಇದರ ಮಹತ್ವ ಕೇವಲ ತುಲನಾತ್ಮಕ ಪರಿಕಥಾ (ಉಪಕಥಾ) ಸಾಹಿತ್ಯದ ವಿದ್ಯಾರ್ಥಿಗಳಿಗಾಗಿಯೇ ಇಲ್ಲ, ಆದರೆ ಸಾಹಿತ್ಯದ ಅನ್ಯ ಶಾಖೆಗಳ ಆಪೇಕ್ಷೆಯಿಂದ ನಮಗೆ ಇದರಲ್ಲಿ ಜನಸಾಧಾರಣರ ವಾಸ್ತವಿಕ ಜೀವನದ ನೋಟಗಳು ಸಹ ಸಿಗುತ್ತವೆ. ಯಾವ ಪ್ರಕಾರ ಈ ಕಥೆಗಳ ಭಾಷೆ ಮತ್ತು ಜನರ ಭಾಷೆಯಲ್ಲಿ ಅನೇಕ ಸಾಮ್ಯಗಳಿವೆ, ಅದೇ ಪ್ರಕಾರ ಅವುಗಳ ವರ್ಣ್ಯ ವಿಷಯವು ಸಹ ವಿಭಿನ್ನ ವರ್ಗಗಳ ವಾಸ್ತವಿಕ ಜೀವನದ ಚಿತ್ರ ನಮ್ಮ ಮುಂದೆ ಹಾಜರುಪಡಿಸುತ್ತದೆ. ಕೇವಲ ರಾಜರ ಮತ್ತು ಪುರೋಹಿತ ಜೀವನವೇ ಈ ಕಥಾಸಾಹಿತ್ಯದಲ್ಲಿ ಚಿತ್ರಿತವಾಗಿಲ್ಲ, ಅಲ್ಲದೆ ಸಾಧಾರಣ ವ್ಯಕ್ತಿಗಳ ಜೀವನವೂ ಸಹ ಅಂಕಿತಗೊಂಡಿದೆ.
ವಾಸ್ತವಾಗಿ ಪ್ರಾಕೃತಕಥೆಗಳ ಪಾತ್ರ ಕಲಾತ್ಮಕ ದೃಷ್ಟಿಯಿಂದ ಯಾವುದಾದರೂ ಸಮಸ್ಯೆಯನ್ನು ತೆಗೆದುಕೊಂಡು ಉಪಸ್ಥಿತವಾಗುತ್ತವೆ. ಅವು ಕಥೆಯ ಪ್ರಾರಂಭದಿಂದ ಉಪಸಂಹಾರದವರೆಗೆ ತಮ್ಮ ಜೀವನದ ಅನಂತ ಕಷ್ಟಗಳ ಜೊತೆ ಆ ಸಮಸ್ಯೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತುಕೊಂಡು ಹೋಗುತ್ತವೆ. ಇತಿವೃತ್ತಗಳ ಹೆಚ್ಚು ದಟ್ಟಣೆಯಿದ್ದರೂ ಸಹ ಕಥಾಪ್ರವಾಹದಲ್ಲಿ ಯಾವುದೇ ತಡೆ ಆಗುವುದು ಕಂಡುಬರುವುದಿಲ್ಲ. ಕಥಾನಕಗಳ ತಿರುವುಗಳು ರೋಚಕತೆಯನ್ನುಂಟು ಮಾಡುವುದರಲ್ಲಿ ಸಹಾಯಕವಾಗಿವೆ. ಮುಖ್ಯ ಕಥೆಯ ಸಿದ್ದಾಂತವನ್ನು (ಅಭಿಪ್ರಾಯವನ್ನು) ಅವಾಂತರ ಕಥೆಗಳ ಮೂಲಕ ಸ್ಪಷ್ಟಪಡಿಸಲಾಗಿದೆ. ಪ್ರಾಕೃತದ ಸಣ್ಣಕಥೆಗಳಲ್ಲಿ ಘಟನೆ ಮತ್ತು ಉದ್ದೇಶ್ಯ - ಈ ಎರಡೂ ತತ್ತ್ವಗಳು ದೊರಕುತ್ತವೆ. ಸೂಕ್ತಿ ಮತ್ತು ಲೋಕೋತ್ತಿಗಳ ಮೂಲಕ ಸಣ್ಣಕತೆಗಳನ್ನು ಮನೋರಂಜಕವಾಗಿ ಮಾಡಲಾಗಿದೆ. ಪ್ರಾಕೃತ ಕಥೆಗಳಲ್ಲಿ ವ್ಯವಹೃತ ಪ್ರಮುಖ ಕಥಾನಕ - ರೂಢಿಗಳು (ಕಥಾಶಯಗಳು) :
ಕಥೆಗಳಲ್ಲಿ ಮತ್ತೆ ಮತ್ತೆ ಬಳಸಲ್ಪಡುವ ಒಂದೇ ರೀತಿಯಿರುವ ಘಟನೆಗಳು ಅಥವಾ ಒಂದರ ಹಾಗೇ ಇರುವ ವಿಚಾರಗಳನ್ನು ಕಥಾನಕ- ರೂಢಿ (ಕಥಾಶಯ) ಎಂದು ಗುರುತಿಸಲಾಗಿದೆ. ಈ ಶಬ್ದ ಇಂಗ್ಲೀಷಿನ ಫಿಕ್ಸನ್ ಮೋಟಿಫ್ ಶಬ್ದದ ಪರ್ಯಾಯವಾಗಿದೆ. ಆಚಾರ್ಯ ಹಜಾರಿಪ್ರಸಾದ್ ದ್ವಿವೇದಿ ಅವರು, ''ನಮ್ಮ ದೇಶದ ಸಾಹಿತ್ಯದಲ್ಲಿ ಕಥಾನಕಗಳಿಗೆ ಗತಿ ಮತ್ತು ಸುತ್ತಾಡಿಸಲು ಕೆಲವೊಂದು ಅಭಿಪ್ರಾಯಗಳು ಬಹಳ ದೀರ್ಘಕಾಲದಿಂದ ಬಳಕೆಯಾಗುತ್ತ ಬಂದಿದೆ, ಅವು ಬಹಳ ದೂರದವರೆಗೆ ಯಥಾರ್ಥವಾಗುತ್ತವೆ, ಮತ್ತವೇ ಮುಂದುವರೆದು ಕಥಾನಕರೂಢಿಯಾಗಿ ಬದಲಾಗುತ್ತವೆ'3 ಕಥಾನಕರೂಢಿಗಳನ್ನು ಪ್ರಯೋಗಿಸಿ ಸಂಸ್ಕೃತಿಯ ಜೊತೆ ಕಥಾತತ್ವವನ್ನು ಯೋಜಿಸಬೇಕಾಗಿದೆ. ಸಾಮಾನ್ಯವಾಗಿ ಕಥಾನಕರೂಢಿಗಳ ಮೂಲಕ ಕೆಳಗೆ ಕಾಣಿಸುವ ಗುಣಗಳನ್ನು ಸೇರಿಸಲಾಗುವುದು -
- 294 -
Jain Education International
For Private & Personal Use Only
www.jainelibrary.org