________________
ಹಾಕುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಇವುಗಳಲ್ಲಿ ಜಾನಪದ ಸಂಸ್ಕೃತಿ ಪೂರ್ಣವಾಗಿ ಪ್ರತಿಫಲನಗೊಂಡಿದೆ. ಪ್ರಾಕೃತ ಕಥೆಗಳ ಲಕ್ಷ್ಯ ಮೂಲತಃ ಕರ್ಮಫಲ, ಪುನರ್‌ಜನ್ಮ ಆತ್ಮಶುದ್ದಿ ವ್ರತಸಾಧನೆ ಹಾಗೂ ತಪಶ್ಚರಣದ ಮೂಲಕ ಮಾನವನಿಂದ ಭಗವಂತನಾಗುವ ಸಂದೇಶವನ್ನು ನೀಡುವುದಾಗಿದೆ. ಆತ್ಮಸಾಧನೆ ಯಾವುದೇ ಒಂದು ಭವ(ಜನ್ಮದಲ್ಲಿ ಸಂಪನ್ನವಾಗುವುದಿಲ್ಲ . ಇದಕ್ಕಾಗಿ ಅನೇಕ ಜನ್ಮ-ಜನ್ಮಾಂತರದವರೆಗೆ ಪ್ರಯತ್ನಮಾಡಬೇಕು. ಯಾವ ವ್ಯಕ್ತಿಯು ಯಾರೊಂದಿಗಾದರು ಶತ್ರುತ್ವ, ಮಿತ್ರತ್ವ ಅಥವಾ ಅನ್ಯ ಯಾವುದೇ ಪ್ರಕಾರದ ಭಾವವನ್ನಿಡುವನೋ, ಈ ಭಾವನೆಯ ನಿರ್ಜರೆ ಯಾವುದೇ ಒಂದೇ ಭವದಲ್ಲಿ ಸಂಪನ್ನವಾಗುವುದಿಲ್ಲ. ವೈರ- ವಿರೋಧ ಅನೇಕ ಜನ್ಮಗಳವರೆಗೆ ಸಾಗಿ ಬರುತ್ತಿರುತ್ತವೆ, ಇದರಿಂದ ವ್ಯಕ್ತಿಗೆ ಶುದ್ಧಿಯಾಗಲು ಭವ-ಭವಾಂತರದವರೆಗೆ ಸಾಧನೆ ಮಾಡುವ ಆವಶ್ಯಕತೆಯಿರುವುದು. ಕರ್ಮಫಲ ಎಷ್ಟು ಪ್ರಬಲವಾಗಿದೆ ಎಂದರೆ, ಯಾವ ಪ್ರೇಮ, ರಾಗ, ದ್ವೇಷ, ಮಮತೆ- ಮೋಹ, ಮೃಣಾ-ಕಲಹ ಮೊದಲಾದ ಭಾವಗಳ ಸಮಾಪ್ತಿ ಯಾವುದೇ ಒಂದು ಜನ್ಮದಲ್ಲಿ ಸಂಭವವಿಲ್ಲ, ಅಗಣಿತ ಜನಗಳವರೆಗೆ ಉಕ್ತ ಸಂಸ್ಕಾರಗಳ ಪರಂಪರೆ ಸಾಗುತ್ತಾ ಬರುತ್ತದೆ. ಪುನರ್‌ಜನ್ಮದ ಉದ್ಘಾಟನೆಗಳು ಜೈನಮುನಿ ಹಾಗೂ ಕರ್ಮವಾದದ ಭೋಕ್ತಾರಾದ ನಾಯಕ-ನಾಯಿಕೆಯರ ಶೀಲಸ್ಥಾಪತ್ಯದ ಸಂದರ್ಭದಲ್ಲಿ , ಜಾನಪದ ಕಥೆಗಳ ಅನೇಕ ರೂಪ ಪ್ರಕಟಗೊಳ್ಳುತ್ತವೆ.
ಪ್ರಾಕೃತ ಭಾಷೆಯಲ್ಲಿ ಲಿಖಿತಗೊಂಡಿರುವ ಕಥಾ ಸಾಹಿತ್ಯ ಗುಣ ಮತ್ತು ಪರಿಮಾಣ ಎರಡು ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿವೆ. ಕಥೆಗಾರರು ಇದರಲ್ಲಿ ಜನಜೀವನವನ್ನು ಪೂರ್ತಿಯಾಗಿ ಚಿತ್ರಿಸಿ, ಸಾಹಿತ್ಯಕ್ಕೆ ಅಪೂರ್ವನಿಧಿಯನ್ನು ಪ್ರದಾನ ಮಾಡಿದ್ದಾರೆ.
ಪ್ರಾಕೃತ ಕಥಾಸಾಹಿತ್ಯದ ಬೀಜ ಆಗಮ ಗ್ರಂಥಗಳಲ್ಲಿ ಉಪಲಬ್ದವಾಗುತ್ತವೆ. ನಿರ್ಯುಕ್ತಿ, ಭಾಷ್ಯ, ಚೂರ್ಣಿ ಮೊದಲಾದ ವ್ಯಾಖ್ಯಾಗ್ರಂಥಗಳಲ್ಲಿ ಚಿಕ್ಕ-ದೊಡ್ಡ ಎಲ್ಲ ಪ್ರಕಾರದ ಸಾವಿರಾರು ಕಥೆಗಳು ದೊರೆಯುತ್ತವೆ. ಆಗಮ ಸಾಹಿತ್ಯದಲ್ಲಿ ಧಾರ್ಮಿಕ ಆಚಾರ, ಆಧ್ಯಾತ್ಮಿಕ ತತ್ರ- ಚಿಂತನ ಹಾಗೂ ನೀತಿ-ಸದಾಚಾರದ ನಿರೂಪಣೆಯನ್ನು ಕಥಾ ಮಾಧ್ಯಮದಲ್ಲಿ ಮಾಡಲಾಗಿದೆ. ಸಿದ್ದಾಂತ ನಿರೂಪಣೆ, ತತ್ವ ನಿರ್ಣಯ ಹಾಗೂ ದರ್ಶನದ ಗೂಢ ಸಮಸ್ಯೆಗಳನ್ನು ಕಥೆಯ ಮಾಧ್ಯಮದಿಂದ ಪರಿಹರಿಸುವ ಪ್ರಯತ್ನ ಆಗಮಗ್ರಂಥಗಳಲ್ಲಿ ಕಂಡುಬರುವುದು. ಅಂಗ ಮತ್ತು ಉಪಾಂಗ ಸಾಹಿತ್ಯದಲ್ಲಿ ಇಂಥ ಸಂವೇದನಾಶೀಲ ಅನೇಕ ಆಖ್ಯಾನಗಳು ಬಂದಿವೆ, ಇವು ಐತಿಹಾಸಿಕ ಮತ್ತು ಪೌರಾಣಿಕ ತಥ್ಯಗಳ ತಿಳಿವಳಿಕೆಯೊಂದಿಗೆ ಬರ್ಬರತೆಯ ನಿರ್ಮಮ ಘಾಟಿ(ಕಣಿವೆ)ಯಲ್ಲಿ ನಿರುಪಾಯವಾಗಿ ಉರುಳುತ್ತಿರುವ ಮಾನವತೆಯನ್ನು ನೈತಿಕ ಮತ್ತು ಆಧ್ಯಾತ್ಮಿಕ ಭಾವ-ಭೂಮಿಯ ಮೇಲೆ ತಂದು, ಮಾನವನನ್ನು ಮಹಾನ್ ಮತ್ತು ನೈತಿಕ ಅಧಿಷ್ಠಾತನನ್ನಾಗಿ ಮಾಡಲು ಸಕ್ಷಮವಾಗಿವೆ. ಪ್ರಾಕೃತದ ಕಥೆಗಾರರು ಸಮಾಜ ಮತ್ತು ವ್ಯಕ್ತಿಗಳ ಜೀವನದ ವಿಕೃತಿಗಳ ಎಷ್ಟು ಪ್ರಹಾರ ಮಾಡಿರುವರೋ ಅಷ್ಟನ್ನು ಅನ್ಯ ಭಾಷೆಯ ಕಥೆಕಾರರು ಮಾಡಿಲ್ಲ.
- 287 -
Jain Education International
For Private & Personal Use Only
www.jainelibrary.org