SearchBrowseAboutContactDonate
Page Preview
Page 328
Loading...
Download File
Download File
Page Text
________________ ಕನ್ನಡ ವಿಭಾಗ (as as) 35. ಪ್ರಾಕೃತ ಕಥಾ ಸಾಹಿತ್ಯದ ವಿಶೇಷತೆಗಳು ' Special Features of Prakrit Narrative Literature - ಡಾ. ಎಂ.ಎ. ಜಯಚಂದ್ರ, ಬೆಂಗಳೂರು ಸ್ಕೂಲ ರೂಪದಲ್ಲಿ ಕಥಾಸಾಹಿತ್ಯವನ್ನು ಎರಡು ವರ್ಗಗಳಲ್ಲಿ ವಿಂಗಡಿಸಬಹುದು ಜಾನಪದ ಕಥಾಸಾಹಿತ್ಯ ಮತ್ತು ಅಭಿಜಾತ್ಯ(ಶಿಷ್ಟ) ಕಥಾಸಾಹಿತ್ಯ, ಜಾನಪದ ಕಥೆಗಳಲ್ಲಿ ಜಾನಪದ ಮನಸ್ಸಿನ ಸಹಜ ಮತ್ತು ಸ್ವಾಭಾವಿಕ ಅಭಿವ್ಯಕ್ತಿಯಿರುವುದು. ಕಥೆಗಾರ ಯಾವುದನ್ನು ಹೇಳುವನೋ ಕೇಳುವನೋ, ಅದು ಸಮೂಹದ ವಾಣಿಯಾಗಿ, ಸಮೂಹದಲ್ಲಿ ಬೆರತುಹೋಗಿರುವುದು. ಈ ಕಥೆಗಳು ಜಾನಪದರ ಚಿತ್ತದಿಂದ ನೇರವಾಗಿ ಹುಟ್ಟಿ ಸರ್ವಸಾಧಾರಣರನ್ನು ಆಂದೋಲಿತ, ಚಲಿತ ಹಾಗೂ ಪ್ರಭಾವಿತಗೊಳಿಸುವುದು. ಅಲ್ಲದೆ ಜನತೆಯ ಆಡು ಮಾತಿನಲ್ಲಿ ಬರೆಯಲ್ಪಡುತ್ತವೆ. ಈ ಕಥೆಗಳಲ್ಲಿ ಮಾನವಜಾತಿಯ ಆದಿಮ ಪರಂಪರೆಗಳು, ಪದ್ಧತಿಗಳು ಮತ್ತು ಅವರ ವಿವಿಧ ಪ್ರಕಾರದ ನಂಬಿಕೆಗಳು ಒಟ್ಟಾಗಿ ಪಡೆಯಬಹುದಾಗಿದೆ. ನೃತ್ಯ, ಮಂತ್ರ-ಮಾಟ, ಸಮ್ಮೋಹನ, ವಶೀಕರಣ, ಭಾಗ್ಯ, ಶಕುನ, ರೋಗ, ಮೃತ್ಯು, ಕೃಷಿಯ ಸಾಧನ-ಪ್ರಕಾರಗಳು, ಸಾಮಾಜಿಕ ರೀತಿರಿವಾಜುಗಳು ಮೊದಲಾದವುಗಳು ಜಾನಪದ ಕಥೆಗಳ ತತ್ತ್ವ(ಗುಣ)ಗಳಾಗಿವೆ. ಅಭಿಜಾತ್ಯ (ಶಿಷ್ಟ) ಕಥೆಗಳಲ್ಲಿ ಶಿಕ್ಷಿತ, ಸಂಪನ್ನ ಹಾಗೂ ಸುಸಂಸ್ಕೃತದ ವಿಲಾಸ, ವೈಭವ, ಪರಂಪರೆ, ರೀತಿರಿವಾಜು ಹಾಗೂ ಆಚಾರ-ವಿಚಾರದ ನಿರೂಪಣೆಯಿರುತ್ತದೆ. ಅಭಿಜಾತ್ಯ ಕಥೆಗಳು ಸಮಸ್ತ ಸಮಾಜದ್ದಲ್ಲ, ಕೇವಲ ಅಭಿಜಾತ್ಯ ವರ್ಗದ್ದಾಗುತ್ತದೆ. ಈ ಪ್ರಕಾರ ಕಥೆಗಳನ್ನು ಜನರ ಆಡುನುಡಿಯಲ್ಲಿ ಬರೆಯುವುದಿಲ್ಲ, ಬದಲಾಗಿ ಯಾವುದಾದರೂ ಸಾಮಂತೀಯ (ಪ್ರಾಂತೀಯ) ಪರಿಷ್ಕೃತ ಭಾಷೆಯಲ್ಲಿ ಬರೆಯುತ್ತಾರೆ. ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿರುವ ಕಥೆಗಳು ಭಾಷೆ ಮತ್ತು ಸಾಮಂತೀಯ ವರ್ಗವಿಶೇಷದ ಚಿತ್ರಣವಾಗಿರುವುದರಿಂದ ಅವು ಅಭಿಜಾತ್ಯ (ಶಿಷ್ಟ) ವರ್ಗದ್ದಾಗಿದೆ. ಇವುಗಳಲ್ಲಿ ಚಿತ್ರಿತ ಸಮಾಜ ಮತ್ತು ಸಂಸ್ಕೃತಿ ಉನ್ನತ ವರ್ಗದ್ದಾಗಿದೆ, ಜನ ಸಾಮನ್ಯರ ಚಿತ್ರಣ ಈ ಕಥೆಗಳಲ್ಲಿ ಇಲ್ಲ. Jain Education International ಪ್ರಾಕೃತ ಕಥೆ ಮತ್ತು ಅದರ ಸಾಮಾನ್ಯ ಭೇದ : ಪ್ರಾಕೃತ ಕಥೆಗಳನ್ನು ಜಾನಪದ ಕಥೆಗಳ ಸಂಸ್ಕರಣ ರೂಪದಲ್ಲಿ ಸ್ವೀಕರಿಸಲಾಗುತ್ತಿದೆ. ಇದರಲ್ಲಿ ನಿಮ್ಮ ಮತ್ತು ಉನ್ನತ ಎರಡೂ ಪ್ರಕಾರದ ಸಮಾಜದ ಚಿತ್ರ ಪಡೆಯಬಹುದಾಗಿದೆ. ಪ್ರಾಕೃತ ಭಾಷೆಯೂ ಜನತೆಯ ಭಾಷೆಯಾಗಿತ್ತು, ಸಂಸ್ಕೃ ಭಾಷೆ ಶಿಷ್ಟವರ್ಗದ್ದಾಗಿರುವಾಗ. ಆದ್ದರಿಂದ ಭಾಷೆಯ ದೃಷ್ಟಿಯಿಂದಲೂ ಈ ಕಥೆಗಳನ್ನು ಜಾನಪದಕಥೆಗಳಿಗೆ ನಿಕಟವಾದುವು ಎಂದು ತಿಳಿಯುವುದು ತರ್ಕಸಂಗತವಾಗಿದೆ. ಪ್ರತೀತವಾಗುವುದೇನೆಂದರೆ ಪ್ರಾಕೃತಕಥೆಗಾರರು ಜಾನಪದ ಕಥೆಗಳನ್ನು ಧಾರ್ಮಿಕ ಕಥೆಗಳ ಎರಕದ ಅಚ್ಚಿನಲ್ಲಿ * ಡಾ|| ನೇಮಿಚಂದ್ರ ಜೈನ್ ಅವರ ಒಂದು ದೀರ್ಘ ಲೇಖನದ ಮುಖ್ಯ ಭಾಗವನ್ನು ಸಂಗ್ರಹಿಸಿ ಸಂಪಾದಿಸಿ ಕೊಡಲಾಗಿದೆ. 286 - For Private & Personal Use Only www.jainelibrary.org
SR No.006701
Book TitleUniversal Values of Prakrit Texts
Original Sutra AuthorN/A
AuthorPrem Suman Jain
PublisherBahubali Prakrit Vidyapeeth and Rashtriya Sanskrit Sansthan
Publication Year2011
Total Pages368
LanguageEnglish
ClassificationBook_English
File Size19 MB
Copyright © Jain Education International. All rights reserved. | Privacy Policy