________________
ಸತ್ಯವಾದುದೇನೆಂದರೆ, ಆಗಮ-ಸಾಹಿತ್ಯದಲ್ಲಿ ಪ್ರಯುಕ್ತ ಕಥೆಗಳಲ್ಲಿ ಘಟನಾವಿಹೀನತೆ, ಮನೋವೈಜ್ಞಾನಿಕ ಸೂಕ್ಷ್ಮತೆ ಹಾಗೂ ಶೀಲನಿರೂಪಣಕ್ಕಾಗಿ ಆವಶ್ಯಕ ವಾತಾವರಣ ಮತ್ತು ಕಥನೋಪಕಥನ ಕಡಿಮೆಯಿದ್ದರೂ, ಧಾರ್ಮಿಕತೆಯ ಸಮಾಹಾರ ಇರುವುದರಿಂದ ಜೀವನವನ್ನು ಆದರ ಸಮಸ್ತ ವಿಸ್ತಾರದೊಂದಿಗೆ ನೋಡುವ ಪ್ರವೃತ್ತಿ ವರ್ತಮಾನವಾಗಿದೆ, ಇದರಿಂದ ಈ ಕಥೆಗಳಲ್ಲಿ ಸ್ಥಾಪತ್ಯದ ದೃಷ್ಟಿಯಿಂದ ಯಾವ ವಿರೂಪತೆಯೂ ಇಲ್ಲ. ಇವುಗಳಲ್ಲಿ ಪೂರಾ ಚರಿತ್ರ, ಯಾವುದೋ ಪೂರ್ಣವ್ರತ, ಯಾವುದೋ ವರ್ಜನಾ, ಯಾವುದೋ ಆಚಾರ ಹಾಗೂ ಸಜೀವ ಕ್ರಮಯುಕ್ತತೆ ವರ್ತಮಾನವಾಗಿದೆ. ಜಾತೀಯ ಸಂಸ್ಕೃತಿಯ ಆಧಾರದ ಮೇಲೆ ಚರಿತ್ರೆಗಳ ವ್ಯಕ್ತಿತ್ವದ ಸಂಘಟನೆ, ಅವುಗಳ ನಿಯಮನ ಈ ವಿಶಿಷ್ಟತೆಯಿಂದ ಈ ಕಥೆಗಳಲ್ಲಿ ಚರಿತ್ರೆಯ ನಿಶ್ಚಯಾತ್ಮಕ ಪ್ರಭಾವ ಅಂತತಃ ಬಿದ್ದೇ ಇರುತ್ತದೆ. ಉಪಮೆಗಳು, ದೃಷ್ಟಾಂತಗಳ ಅವಲಂಬನೆಯನ್ನು ಹಿಡಿದು, ಜನತೆಯನ್ನು ಧರ್ಮ- ಸಿದ್ದಾಂತದ ಕಡೆ ಸೆಳೆದಿರುವುದೇ ಆಗಮಕಾಲದ ಕಥೆಗಾರರ ವಿಶೇಷತೆಯಾಗಿದೆ. ಅಲ್ಲಿ ಹೇಳಿರುವ ಕಥೆಗಳ ಉತ್ಪತ್ತಿ ಉಪಮಾನ, ರೂಪಕ ಮತ್ತು ಪ್ರತೀಕಗಳ ಆಧಾರದ ಮೇಲೆ ಆಗಿದೆ.
ಆಗಮಕಾಲೀನ ಕಥೆಗಳ ನಂತರ ಪಾಕೃತ ಕಥಾ ಸಾಹಿತ್ಯದ ಎರಡನೆಯ ಯುಗ, ಟೀಕಾಯುಗವಾಗಿದೆ. ಆಗಮ ಕಥೆಗಳು “ವಣ್ಣ'ದ ಮೂಲಕ ಭಾರವಾಗಿದ್ದವು. ಚಂಪಾ ಅಥವಾ ಅನ್ಯ ಯಾವುದಾದರು ನಗರದ ವರ್ಣನೆಯ ಮೂಲಕ ಸಮಸ್ತ ವರ್ಣನೆಯನ್ನು ಅವಗತ ಮಾಡಿಕೊಳ್ಳುವ ಕಡೆ ಸಂಕೇತವನ್ನು ನೀಡಲಾಗುತ್ತಿತ್ತು . ಆದರೆ ಟೀಕಾ ಗ್ರಂಥಗಳಲ್ಲಿ ಈ ಪ್ರವೃತ್ತಿ ಇಲ್ಲ , ಹಾಗೂ ಕಥೆಗಳಲ್ಲಿ ವರ್ಣನೆ ಆಗತೊಡಗಿತು. ಮತ್ತೊಂದು ಕಾಣಿಸಿಕೊಂಡದ್ದು ಏನೆಂದರೆ ಏಕರೂಪತೆಗಳ ಸ್ಥಾನದಲ್ಲಿ ವಿವಿಧತೆ ಹಾಗೂ ನವೀನತೆಯ ಪ್ರಯೋಗ ಆಗ ತೊಡಗಿತು. ನವೀನತೆಯ ದೃಷ್ಟಿಯಿಂದ ಪಾತ್ರ, ವಿಷಯ, ಪ್ರವೃತ್ತಿ , ವಾತಾವರಣ, ಉದ್ದೇಶ್ಯ, ರೂಪಘಟನೆ ಹಾಗೂ ನೀತಿಸಂಶ್ಲೇಷ ಮೊದಲಾದವು, ಆಗಮ ಕಥೆಗಳ ದೃಷ್ಟಿಯಿಂದ ಟೀಕಾ-ಕಥೆಗಳಲ್ಲಿ ಹೆಚ್ಚು ನವೀನತೆಯನ್ನು ಗುರುತಿಸಬಹುದಾಗಿದೆ. ಈ ಯುಗದ ಕಥೆಗಳ ಪರಿವೇಶ (ಪ್ರಭಾಪರಿಧಿ) ಸಾಕಷ್ಟು ವಿಸ್ತ್ರತವಾಗಿದೆ. ವಾಸ್ತವವಾಗಿ ಕಥೆಯ ರೂಪ ಅಥವಾ ಸ್ಥಾಪತ್ಯ ಎರಡು ಸಂಗತಿಗಳ ಮೇಲೆ ನಿರ್ಭರವಾಗಿರುತ್ತದೆ. - ಮೊದಲನೆಯದು, ಒಂದು ಕಥೆ ಯಾವ ವಾತಾವರಣದಲ್ಲಿ ಘಟಿತವಾಗುತ್ತಿದೆ, ಇದರ ವಿಸ್ತಾರ ಸೀಮೆ ಮತ್ತು ನಿರ್ಣಾಯಕ ತ ಯಾವುವು ಆಗಿವೆ ? ವಿಷಯದೊಂದಿಗೆ ಪಾತ್ರಗಳ ಉದ್ದೇಶ ಯಾವ ಪ್ರಕಾರ ಘಟಿತಗೊಳಿಸಿದೆ ? ಕಥೆಗಳ ರೂಪಾಕೃತಿಯನ್ನು ಪ್ರಭಾವಿತಗೊಳಿಸುವ ನಿರ್ಧಾರಕ ತತ್ತ್ವದ ಉದ್ದೇಶದ ಬಗ್ಗೆ ಎಷ್ಟು ಎಚ್ಚರಿಕೆಯಿಂದ ಮತ್ತು ಪ್ರಭಾವವನ್ನು ಉಂಟು ಮಾಡುವವಲ್ಲಿ ಎಷ್ಟು ಕ್ಷಮತೆ (ಸಾಮರ್ಥ್ಯವಿದೆ ?
ಕಥೆಯ ರೂಪವನ್ನು ನಿರ್ಧರಿಸುವ ಎರಡನೆಯ ಸಂಗತಿ, ಅದರ ಆವಶ್ಯಕತೆ, ಜೀವನದ ಯಾವ ಆವಶ್ಯಕತೆಯ ಪೂರ್ತಿಗಾಗಿ ಕಥೆಯನ್ನು ಬರೆಯಲಾಗಿದೆ, ಅದರ ಪ್ರತಿಪಾದನೆಯ ಉದ್ದೇಶವೇನು ?ಹಾಗೂ ಆ ಉದ್ದೇಶದ ಅಭಿವ್ಯಕ್ತಿ ಯಾವ ಪ್ರಕಾರವಾಗಿ ಸಂಪನ್ನವಾಗಿದೆ. ಇವೆಲ್ಲವೂ ಕಥಾಸಾಹಿತ್ಯದ ರೂಪ-ವಿಧಾನದಲ್ಲಿ ಸಮ್ಮಿಳಿತವಾಗಿವೆ. ಟೀಕಾ-ಯುಗದ ಕಥೆಗಳ ಆವಶ್ಯಕತೆಯು ಸ್ಪಷ್ಟವಾಗಿ ಭಾಷ್ಯ ಅಥವಾ
- 288 -
Jain Education International
For Private & Personal Use Only
www.jainelibrary.org