________________
ಮತ್ತು ಸಂಶೋಧನೆಯ ಪದ್ಧತಿ ಅನುಕರಣೀಯವಾಗಿದೆ. ಪ್ರಾಕೃತ ವಿದ್ವಾಂಸರು ನಿರ್ಮಾಣಗೊಳ್ಳುವುದು ಇಂದಿನ ಪ್ರಾಥಮಿಕ ಅವಶ್ಯಕತೆಯಾಗಿದೆ ಎಂದರು. ಈ ಅವಧಿಯಲ್ಲಿ ಕಾರ್ಯಕ್ರಮಗಳನ್ನು ಪ್ರೊ.ಪ್ರೇಮ್ ಸುಮನ್ ಜೈನ್ ನಿರೂಪಿಸಿದರು ಹಾಗೂ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಡಾ.ರಜನೀಶ ಶುಕ್ಲಾ ಅವರು ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂಗೋಷ್ಠಿಯಲ್ಲಿ ಐದು ಅವಧಿಗಳು ನಡೆದವು. ಅವುಗಳ ಅಧ್ಯಕ್ಷತೆಯನ್ನು ಪ್ರೊ.ನಲಿನಿ ಬಲಬೀರ್, ಡಾ.ಟಗಾರ್ಡ ಸೊನಿ, ಪ್ರೊ.ಸಾಗರಮಲ್, ಪ್ರೊ.ಏಡೆಲಹೆಡ್ ಮೊಟ್ಟೆ ಹಾಗೂ ಪ್ರೊ.ಹಂಪ ನಾಗರಾಜಯ್ಯ ಅವರುಗಳು ವಹಿಸಿದ್ದು, ಅವುಗಳಲ್ಲಿ ಪ್ರೊ.ದಯಾನಂದ ಭಾರ್ಗವ, ಪ್ರೊ.ಮಹಾವೀರ ರಾಜ್ ಗೆಲಡಾ, ಪ್ರೊ. ರಾಮ್ ಪ್ರಕಾಶ್ ಪೊದ್ದಾರ, ಪ್ರೊ.ರಾಬರ್ಟ ಜೆಡಿನಬೋಸ್, ಶ್ರಮಣಿ ಮಂಗಲಪ್ರಜ್ಞಾ, ಪ್ರೊ.ಕಮಲಾ ಹಂಪನಾ ಮುಂತಾದ ಸನ್ಮಾನಿತ ಅತಿಥಿ ವಿದ್ವದ್ವರ್ಯರು ಉಪಸ್ಥಿತರಿದ್ದರು. ಪ್ರೊ. ವಿಜಯ ಕುಮಾರ್ ಜೈನ್, ಪ್ರೊ.ಜಯಂಡ್ರ ಸೊನಿ, ಪ್ರೊ.ಪ್ರೇಮ್ ಸುಮನ್ ಜೈನ್, ಪ್ರೊ. ಶ್ರೇಯಾಂಸಕುಮಾರ್ ಜೈನ್ ಮುಂತಾದ ವಿದ್ವಾಂಸರು ಆ ಅವಧಿಯ ಸಂಯೋಜನೆ ಮಾಡಿದರು.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಕೆ.ಎಸ್.ಪ್ರಭಾಕರ್, ಐ.ಎ.ಎಸ್. ಅವರು ಐದನೇ ಅವಧಿಯಲ್ಲಿ ಪ್ರಮುಖ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀಮಾನ್ ಪ್ರಭಾಕರ್ ಅವರು ತಮ್ಮ ಭಾಷಣದಲ್ಲಿ ಜೈನಾಚಾರ್ಯರು ಭಾರತೀಯ ಸಂಸ್ಕೃತಿಯ ವಿಕಾಸದಲ್ಲಿ ಮಹತ್ವಪೂರ್ಣವಾದ ಕೊಡುಗೆ ನೀಡಿದ್ದಾರೆ. ಪ್ರಾಕೃತ ಭಾಷೆಯು ಜನಸಾಮಾನ್ಯರ ಭಾಷೆಯಾಗಿದ್ದಿತ್ತು . ಅದರ ಸಾಹಿತ್ಯವು ದೇಶದ ನಿಧಿಯಾಗಿದೆ. ಅದರ ಸಂರಕ್ಷಣೆ ಮತ್ತು ಪ್ರಚಾರ - ಪ್ರಸಾರವಾಗಬೇಕು. ಈ ನಿಟ್ಟಿನಲ್ಲಿ ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠವು ಪರಮಪೂಜ್ಯ ಶ್ರೀಗಳವರ ದಿವ್ಯ ಮಾರ್ಗದರ್ಶನದಲ್ಲಿ ಮಹತ್ವಪೂರ್ಣವಾದ ಕಾರ್ಯ ಮಾಡುತ್ತಿದೆ. ಇಂತಹ ಕಾರ್ಯಗಳಿಗೆ ಸರ್ಕಾರದ ಸಹಾಯ ದೊರೆಯಬೇಕಿದೆ, ಎಂದು ಹೇಳಿದರು. ಈ ಸಂಸ್ಥೆಗೆ ಸರ್ಕಾರವು ನೀಡುತ್ತಿರುವ ವಾರ್ಷಿಕ ಅನುದಾನವನ್ನು ಹೆಚ್ಚಿಸುವ ಮತ್ತು ಪ್ರಾಕೃತ ಯೋಜನೆಗಳಿಗೆ ಸಹಾಯ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಈ ಅವಧಿಯ ಅಧ್ಯಕ್ಷತೆಯನ್ನು ವಹಿಸಿರುವ ಪೂಜ್ಯ ಶ್ರೀಗಳವರು ತಮ್ಮ ಮಂಗಲ ಉದ್ಯೋದನೆಯಲ್ಲಿ ಪ್ರೊ. ಆದಿನಾಥ ನೇಮಿನಾಥ, ಉಪಾಧ್ಯೆ, ಪ್ರೊ. ಮಾಲವಣಿಯಾ ಹಾಗೂ ಪ್ರೊ.ಹೀರಾಲಾಲ ಜೈನರಂಥ ವಿದ್ವಾಂಸರ ಸಾಹಿತ್ಯಕ ಸೇವೆಯಿಂದ ಪ್ರೇರಣೆ ಪಡೆಯುವ ಅಗತ್ಯವಿದೆ. ಪ್ರಾಕೃತ ಸಾಹಿತ್ಯ ಕಾ ಇತಿಹಾಸ ಎಂಬ ಕೃತಿಯು ಆಂಗ್ಲ ಮತ್ತು ಅನ್ಯ ಭಾಷೆಗಳಲ್ಲಿಯು ಅನುವಾದಗೊಳ್ಳುವುದು ಉಪಯುಕ್ತವಾಗಿದೆ. ಪ್ರಾಕೃತ - ಕನ್ನಡ - ಆಂಗ್ಲ ಶಬ್ದಕೋಶದ ಅವಶ್ಯಕತೆಯೂ ಇದೆ. ಪ್ರಾಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದರಲ್ಲಿ ಸರ್ಕಾರದ ಸಹಾಯ ಮತ್ತು ಸಹಕಾರ ಅಪೇಕ್ಷಿತವಾಗಿದೆ. ಸಾಮಾಜಿಕ ಸಂಸ್ಥೆಗಳು ವಿಶ್ವವಿದ್ಯಾಲಯವನ್ನು ನಿರ್ವಹಿಸಿಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಸಂಸ್ಥೆಗಳು ಈ ದಿಶೆಯಲ್ಲಿ ಕ್ರಿಯಾಶೀಲರಾಗಿರುವ ಅಗತ್ಯವಿದೆ ಎಂದು ನುಡಿದರು.
(xxix )
Jain Education International
For Private & Personal Use Only
www.jainelibrary.org