________________
ಸೊನಿ (ಮಾರವರ್ಗ, ಜರ್ಮನಿ), ಪ್ರೊ.ಹರ್ಮನ್ ಟಿಕನ್ (ನೆದರಲಂಡ್), ಪ್ರೊ.ರಾಬರ್ಟ್ ಜೆಡಿನ್ ಬೋಸ್ (ಜರ್ಮನಿ), ಡಾ.ಲ್ಯೂಟಗಾರ್ಡ ಸೋನಿ (ಜರ್ಮನಿ), ಶ್ರೀಮತಿ ಸಾರಾ ಫಿಕ್ (ಯು.ಎಸ್.ಎ.) ಹಾಗೂ ಡಾ.ಏವಾ ಮಾರಿಯಾ (ಮ್ಯೂನಿಕ್, ಜರ್ಮನಿ) ಮುಂತಾದವರು ಹಾಗೂ ಭಾರತದೇಶದಿಂದ ಸುಮಾರು ಅರವತ್ತು ವಿದ್ವಾಂಸರುಗಳು ಆಗಮಿಸಿದ್ದರು. ಅವರುಗಳಲ್ಲಿ ಪ್ರಮುಖವಾಗಿ ಪ್ರೊ.ಹಂಪ ನಾಗರಾಜಯ್ಯ (ಬೆಂಗಳೂರು), ರಾಜಸ್ತಾನದ ಲಾಡನೂ ಜೈನ ವಿಶ್ವಭಾರತಿ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರಮಣಿ ಡಾ.ಮಂಗಲಪ್ರಜ್ಞಾ, ಪ್ರೊ.ದಯಾನಂದ ಭಾರ್ಗವ (ಜಯಪುರ ), ಪ್ರೊ.ರಾಜಾರಾಮ್ ಜೈನ (ನೊಯಿಡಾ, ದಿಲ್ಲಿ), ಪ್ರೊ.ಮಹಾವೀರ ರಾಜ ಗೆಲಡಾ (ಜಯಪುರ), ಪ್ರೊ.ಸಾಗರಮಲ್ ಜೈನ (ಶಾಜಾಪುರ), ಪ್ರೊ.ಕಮಲಾ ಹಂಪನಾ (ಬೆಂಗಳೂರು), ಪ್ರೊ.ರಾಮಪ್ರಕಾಶ ಪೊದ್ದಾರ (ಪುನಾ),ಪ್ರೊ.ಶುಭಚಂದ್ರ (ಮೈಸೂರು), ಪ್ರೊ.ನಲಿನಿ ಜೋಶಿ (ಪುನಾ), ಪ್ರೊ.ಪದ್ಮಾ ಶೇಖರ್ (ಮೈಸೂರು), ಪ್ರೊ.ವಿಜಯಕುಮಾರ ಜೈನ (ಲಖನ್), ಪ್ರೊ.ಶ್ರೇಯಾಂಸಕುಮಾರ ಜೈನ್ (ಜಯಪುರ), ಡಾ.ಕಲ್ಪನಾ ಜೈನ (ದೆಹಲಿ), ಡಾ.ಬ್ರ.ಧರ್ಮೇಂದ್ರ ಜೈನ್ (ಜಯಪುರ), ಡಾ.ಅನೇಕಾಂತ ಜೈನ್ (ದೆಹಲಿ), ಡಾ.ರಜನೀಶ ಶುಕ್ಲಾ(ದೆಹಲಿ), ಡಾ.ಎನ್.ಸುರೇಶಕುಮಾರ್ (ಮೈಸೂರು) ಮುಂತಾದ ಅನೇಕ ವಿದ್ವಾಂಸರುಗಳು ಆಗಮಿಸಿದ್ದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಅನೇಕ ವಿದ್ವಾಂಸರುಗಳು ಸಂಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ರಾಜಸ್ತಾನದ ಲಾಡನೂವಿನ ಜೈನವಿಶ್ವಭಾರತಿ ವಿಶ್ವವಿದ್ಯಾಲಯ ಕುಲಪತಿಗಳಾದ ಶ್ರಮಣಿ ಪ್ರೊ.ಮಂಗಲಪ್ರಜ್ಞಾ ಹಾಗೂ ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದ ಶೈಕ್ಷಣಿಕಾಧಿಕಾರಿಗಳಾದ ಪ್ರೊ.ರಾಬರ್ಟ ಜೆಡಿನಬೋಸ್ ಅವರುಗಳು ತಮ್ಮ ಉದ್ಯೋದನೆಯಲ್ಲಿ ಈ ಸಂಗೋಷ್ಠಿಯು ಪ್ರಾಕೃತ ಅಧ್ಯಯನದ ವಿಕಾಸಕ್ಕೆ ಪ್ರಚೋದನೆ ನೀಡುವಂಥ ಒಂದು ಶಾಶ್ವತವಾದ ಹೆಜ್ಜೆಯಾಗಿದೆ, ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸ್ಮರಣ - ಸಂಚಿಕೆ, ಪ್ರೊ.ಪ್ರೇಮ್ ಸುಮನ್ ಜೈನ ಅವರ ಪ್ರಾಕೃತ ಪೈಮರ್ ಮತ್ತು ಜರ್ಮನಿಯ ವಿದುಷಿ ಪ್ರೊ.ವಿಲಿಯಮ್ ಬೊಲಿ ಅವರ ಆಂಗ್ಲಭಾಷಾನುವಾದಿತ ರತ್ನಕರಂಡಶ್ರಾವಕಾಚಾರ ಕೃತಿಗಳು ಲೋಕಾರ್ಪಣೆಗೊಂಡವು.
ಸಂಗೋಷ್ಠಿಯಲ್ಲಿ ಪೂಜ್ಯಶ್ರೀಗಳವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಕೃತ ಭಾಷೆಯ ಮಹತ್ವವನ್ನು ವಿವರಿಸುತ್ತ, ಶ್ರವಣಬೆಳಗೊಳವು ಪ್ರಾಕೃತ ಭಾಷೆಯ ಮೂರು ಸಾವಿರ ಮೂರು ನೂರು ವರ್ಷಗಳ ಪ್ರಾಚೀನವಾದ ಪರಂಪರೆಯನ್ನು ಹೊಂದಿದೆ. ಶ್ರುತಕೇವಲ ಭದ್ರಬಾಹು ಮಹಾಮುನಿಗಳ ಕಾಲದಿಂದ ಈ ಶ್ರವಣಬೆಳಗೊಳದ ಭೂಮಿಯ ಮೇಲೆ ಪ್ರಾಕೃತ ಭಾಷೆ ಮತ್ತು ಸಾಹಿತ್ಯದ ಸಂರಕ್ಷಣೆಯ ಕಾರ್ಯಗಳು ನಡೆಯುತ್ತ ಬಂದಿವೆ. ಸಿದ್ಧಾಂತಚಕ್ರವರ್ತಿಗಳಾಗಿದ್ದ ಆಚಾರ್ಯ ಶ್ರೀ ನೇಮಿಚಂದ್ರ ಮುನಿಮಹಾರಾಜರು ವಿರಚಿಸಿದ ಪ್ರಾಕೃತ ಗ್ರಂಥ ಮತ್ತು ಧವಲಾ ಟೀಕೆಯ ತಾಳೆಗರಿಯ ಗ್ರಂಥಗಳನ್ನು ಇಲ್ಲಿ ಸಂರಕ್ಷಿಟ್ಟಿರುವುದು ಈ ಭೂಮಿಯ ಪ್ರಾಕೃತ ಭಾಷಾ ಪ್ರೇಮವನ್ನು ಸೂಚಿಸುತ್ತದೆ. ಆದ್ದರಿಂದ ಈ ಅಂತರರಾಷ್ಟ್ರೀಯ ಪ್ರಾಕೃತ ಸಂಗೋಷ್ಠಿಯು ಪ್ರಾಕೃತದ ಪರಂಪರಾಗತ ವೈಭವವನ್ನು ಪ್ರಕಾಶಿಸುವಂಥದ್ದಾಗಿದೆ. ವಿದೇಶಿಯ ವಿದ್ವಾಂಸರ ಪ್ರಾಕೃತ ಅಧ್ಯಯನದ ಬಗೆಗಿನ ಸಮರ್ಪಣೆ
(xxviii)
Jain Education International
For Private & Personal Use Only
www.jainelibrary.org