________________
ಶ್ರವಣಬೆಳಗೊಳದಲ್ಲಿ ಪ್ರಥಮ ಅಂತರರಾಷ್ಟ್ರೀಯ ಪ್ರಾಕೃತ ಸಂಗೋಷ್ಠಿ
ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠ ಅಂತರ್ಗತ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದಿಂದ ಸ್ವಾಯತ್ತ ವಿಶ್ವವಿದ್ಯಾಲಯ ಮಾನ್ಯತೆ ಪಡೆದಿರುವ ಹೊಸದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ - ಇವುಗಳ ಸಂಯುಕ್ತ ಆಶ್ರಯದಲ್ಲಿ 12,13 ಮತ್ತು 14, ಅಕ್ಟೋಬರ್, 2010 ರಲ್ಲಿ “ ಪ್ರಾಚೀನ ಪ್ರಾಕೃತ ಗ್ರಂಥಗಳ ಜಾಗತಿಕ ಮೌಲ್ಯ ” ಎಂಬ ವಿಷಯದ ಬಗ್ಗೆ ಶ್ರವಣಬೆಳಗೊಳದಲ್ಲಿ ಮೊಟ್ಟಮೊದಲ ಅಂತರರಾಷ್ಟ್ರೀಯ ಪ್ರಾಕೃತ ಸಂಗೋಷ್ಠಿ ಆಯೋಜಿತಗೊಂಡಿತು.
ಶ್ರವಣಬೆಳಗೊಳದ ಧರ್ಮ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ, ಧರ್ಮಜ್ಯೋತಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಈ ಸಂಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವ ಮೂಲಕ ಪಾವನ ಸಾನ್ನಿಧ್ಯವನ್ನು ದಯಪಾಲಿಸಿದ್ದರು. ಈ ಸಂಗೋಷ್ಠಿಯನ್ನು ಸಂಗೋಷ್ಠಿಯ ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಕುಲಪತಿಗಳಾದ ಪ್ರೊ.ರಾಧಾವಲ್ಲಭ ತ್ರಿಪಾಠಿ ಅವರು ಉದ್ಘಾಟಿಸಿದರು. ಪ್ರೊ. ತ್ರಿಪಾಠಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಾಕೃತ ಭಾಷೆ ಮತ್ತು ಅದರ ಸಾಹಿತ್ಯವು ಭಾರತದೇಶದ ಲೋಕ ಜೀವನದ ಸಂಸ್ಕೃತಿಯನ್ನು ಪ್ರಕಾಶಿಸುವಂಥದ್ದಾಗಿದೆ. ಪ್ರಾಕೃತ ಭಾಷೆಯು ಭಾರತೀಯ ಭಾಷೆಗಳೊಂದಿಗೆ ಘನಿಷ್ಠವಾದ ಸಂಬಂಧವನ್ನು ಹೊಂದಿದೆ. ಪಾಲಿ, ಸಂಸ್ಕೃತ ಮತ್ತು ಅಪಭ್ರಂಶ ಇತ್ಯಾದಿ ಭಾಷೆಗಳ ಸಾಹಿತ್ಯವನ್ನು ತಿಳಿದುಕೊಳ್ಳಲು ಪ್ರಾಕೃತ ಭಾಷೆಯ ಜ್ಞಾನ ಅತ್ಯಂತ ಅಗತ್ಯವಾಗಿದ್ದು , ಬಹು ಉಪಯೋಗಿಯಾಗಿದೆ. ಪ್ರಾಕೃತ ಸಾಹಿತ್ಯದ ಜೀವನ ಮೌಲ್ಯವು ಇಂದಿನ ವಿಶ್ವಕ್ಕೆ ಶಾಂತಿಯನ್ನು ನೀಡುವಂತಹದ್ದಾಗಿದೆ. ಜರ್ಮನಿ ಮುಂತಾದ ದೇಶಗಳಲ್ಲಿ ಪ್ರಾಕೃತ ಸಾಹಿತ್ಯದ ಬಗ್ಗೆ ನೆಡೆದಿರುವ ಕೆಲಸ-ಕಾರ್ಯಗಳ ಜ್ಞಾನ ಮತ್ತು ಲಾಭ ಪಡೆಯಬೇಕು. ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠವು ಪ್ರಾಕೃತ ಅಧ್ಯಯನವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ - ಪ್ರಸಾರಗೊಳಿಸುತ್ತಿದೆ. ಇದಕ್ಕೆ ಸರ್ಕಾರ ಮತ್ತು ಸಮಾಜಗಳ ಸಹಕಾರ ಅಪೇಕ್ಷಿತವಾಗಿದೆ, ಎಂದು ನುಡಿದರು.
- ಈ ಅಂತರರಾಷ್ಟ್ರೀಯ ಪ್ರಾಕೃತ ಸಂಗೋಷ್ಠಿಯು ಲಾಲ್ ಬಹಾದೂರ್ ಶಾಸ್ತ್ರಿ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಕೃತ ವಿಭಾಗದ ಅಧ್ಯಕ್ಷರಾದ ಡಾ.ಜಯಕುಮಾರ್ ಉಪಾಧ್ಯೆ ಅವರ ಪ್ರಾಕೃತ ಮಂಗಲಾಚರಣದಿಂದ ಶುಭಾರಂಭಗೊಂಡಿತು. ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷರಾದ ಶ್ರೀಮಾನ್ ಎಂ.ಜೆ.ಇಂದ್ರಕುಮಾರ್ ಅವರು ಸಂಗೋಷ್ಠಿಗೆ ಆಗಮಿಸಿರುವ ಭಾರತ ಹಾಗೂ ಹೊರದೇಶಗಳ ವಿದ್ವನ್ಮಣಿಗಳಗೆ ಸುಸ್ವಾಗತ ಕೋರಿದರು. ಸಂಗೋಷ್ಠಿಯ ನಿರ್ದೇಶಕರಾದ ಪ್ರೊ.ಡಾ.ಪ್ರೇಮ್ ಸುಮನ್ ಜೈನ್ ಅವರು ಸಂಸ್ಥೆಯಿಂದ ಈವರೆಗೆ ಆಯೋಜಿತಗೊಂಡಿರುವ ಪ್ರಾಕೃತ ಸಂಗೋಷ್ಠಿ ಮತ್ತು ಸಮ್ಮೇಳನಗಳ ಬಗ್ಗೆ ವಿವರ ನೀಡುತ್ತ , ಪ್ರಸ್ತುತ ಅಂತರರಾಷ್ಟ್ರೀಯ ಪ್ರಾಕೃತ ಸಂಗೋಷ್ಠಿಯ ಪ್ರಮುಖ ವಿಷಯವನ್ನು ಪ್ರತಿಪಾದಿಸಿದರು.
ಈ ಸಂಗೋಷ್ಠಿಯಲ್ಲಿ ವಿದೇಶಗಳಿಂದ ಪ್ರಮುಖವಾಗಿ ಪ್ರೊ.ಏಲಹೆಡ್ ಮೆಟ್ಟೆ, (ಜರ್ಮನಿ), ಪ್ರೊ.ನಲಿನಿ ಬಲಬೀರ್ (ಪ್ರಾನ್ಸ್), ಪ್ರೊ.ಜೊಹಾನಸ್ ಬೊಕಹಾರ್ಸಟ್ (ಸ್ವಿಟಜರಲಂಡ್), ಪ್ರೊ.ಜಯೇಂದ್ರ
( xxvii)
Jain Education International
For Private & Personal Use Only
www.jainelibrary.org