________________
ಸಂಗೋಷ್ಠಿಯ ಮೂರನೇ ಅವಧಿಯಲ್ಲಿ ದಿನಾಂಕ 13-10-2011ರಂದು ಸಮಸ್ತ ವಿದ್ವಾಂಸರ ಒಂದು ಮಹತ್ವಪೂರ್ಣವಾದ ಸಭೆ ಆಯೋಜಿತಗೊಂಡಿತ್ತು . ಆ ಸಭೆಯಲ್ಲಿ ಪ್ರಥಮ ವಿಶ್ವ ಪ್ರಾಕೃತ ಸಮ್ಮೇಳನವನ್ನು ಆಯೋಜಿಸುವ ಬಗ್ಗೆ ವಿದ್ವಾಂಸರು ತಮ್ಮ - ತಮ್ಮ ಅಭಿಪ್ರಾಯಗಳನ್ನಿತ್ತರು. ಪ್ರಥಮ ವಿಶ್ವ ಪ್ರಾಕೃತ ಸಮ್ಮೇಳನವನ್ನು ಸಂಪೂರ್ಣ ವ್ಯವಸ್ಥೆಗಳೊಂದಿಗೆ 2012ರಲ್ಲಿ ಆಯೋಜಿಸಬೇಕೆಂಬುದೆ ಸಮಸ್ತ ವಿದ್ವಾಂಸರ ಅಭಿಪ್ರಾಯವಾಗಿತ್ತು . ಅದರಲ್ಲಿ ಇನ್ನೂರದಿಂದ ಮುನ್ನೂರು ವಿದ್ವಾಂಸರನ್ನು ಆಮಂತ್ರಿಸಬೇಕು ಮತ್ತು ಸಂಶೋಧನಾ ಪತ್ರಗಳು 40 ರಿಂದ 50ಕ್ಕೆ ಸೀಮಿತವಾಗಿದ್ದು, ಅವುಗಳನ್ನು ಪೂರ್ವದಲ್ಲಿಯೇ ತರೆಸಿಕೊಳ್ಳಬೇಕು. ಸಮ್ಮೇಳದಲ್ಲಿ ಸಂಶೋಧನಾ ಪತ್ರಗಳನ್ನು ಪ್ರಸ್ತುತ ಪಡಿಸುವ ಭಾಷಾಮಾಧ್ಯಮ ಆಂಗ್ಲ ಮತ್ತು ಹಿಂದಿ ಆಗಿದ್ದು, ಅನ್ಯ ಭಾಷೆಯ ಲೇಖನಗಳನ್ನು ಅನುವಾದಿಸುವ ವ್ಯವಸ್ಥೆ ಮಾಡಬೇಕು. ಸಮ್ಮೇಳನವನ್ನು ಆಯೋಜಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಾಯ ಮತ್ತು ಸಹಕಾರ ಹಾಗೂ ಜೈನ ಸಮಾಜದ ಸಹಕಾರವನ್ನೂ ಪಡೆಯಬೇಕು. ಆದರೆ ಈ ಸಮ್ಮೇಳನವನ್ನು ಆಯೋಜಿಸಲು ಸುಸಜ್ಜಿತವಾದ ಕಾರ್ಯಾಲಯ, ಸಿಬ್ಬಂದಿ, ಸಾಧನ ಇತ್ಯಾದಿ ಎಲ್ಲಾ ತರಹದ ವ್ಯವಸ್ಥೆಗಳನ್ನು ಹೊಂದಿರುವಂತಹ ಪ್ರತಿಷ್ಠಿತ ಪ್ರಾಕೃತ ಸಂಸ್ಥಾನದ ಮೂಲಕವೇ ಸಮ್ಮೇಳನವನ್ನು ಆಯೋಜಿಸಬೇಕು. ಸಮ್ಮೇಳನಕ್ಕೆ ಶಾಂತಿಯುತ ಮತ್ತು ಶೈಕ್ಷಣಿಕ ವಾತಾವರಣವುಳ್ಳ ಸ್ಥಳವಾಗಿರಬೇಕು. ಅಲ್ಲಿ ಸಂಶೋಧಾನತ್ಮಕ ಗ್ರಂಥಗಳುಳ್ಳ ಗ್ರಂಥಾಲಯದ ಅಗತ್ಯವಿದೆ, ಎಂದು ಹಲವು ವಿಚಾರಗಳನ್ನು ವಿದ್ವಾಂಸರು ವ್ಯಕ್ತಪಡಿಸಿದರು. ಈ ಸಭೆ ಆರಂಭಿಕವಷ್ಟೆ, ಇನ್ನೂ ಈ ವಿಷಯದಲ್ಲಿ ಅನೇಕ ಸಭೆಗಳನ್ನು ನಡೆಸಲಾಗುವುದು. ಸಮ್ಮೇಳನಕ್ಕೆ ತಕ್ಕ ಎಲ್ಲಾ ರೀತಿಯ ವ್ಯವಸ್ಥೆಗಳು ಮೊದಲೇ ಆಗುವ ಅವಶ್ಯಕತೆ, ಎಂದು ಪೂಜ್ಯಶ್ರೀಗಳವರು ತಿಳಿಸಿದರು.
ಈ ಅಂತರರಾಷ್ಟ್ರೀಯ ಪ್ರಾಕೃತ ಸಂಗೋಷ್ಠಿಯಲ್ಲಿ ಪ್ರಸ್ತುತ ಪಡಿಸಿರುವ ಸಂಶೋಧನಾ ಲೇಖನಗಳು ಮತ್ತು ವಿದ್ವಾಂಸರ ಹೆಸರು ಈ ಕೆಳಗಿನಂತಿದೆ :
1. ಸೂತ್ರಕೃತಾಂಗ
2. ಆಯಾರೋ
3. ಸಮಯಸಾರ
4. ಮಹಾಪುರಾಣ (ಅಪಭ್ರಂಶ)
5. ಇಸಿಭಾಸಿಯಂ
6. ಪಂಚಾಸ್ತಿಕಾಯ
7. ಮೂಲಾಚಾರ
8. ಕನ್ನಡ ಸಾಹಿತ್ಯ ಮೇ ಪ್ರಾಕೃತ ಗಾಥಾಏ 9. ಭಟ್ಟಾರಕೋ ಕಾಪ್ರಾಕೃತ ಸಾಹಿತ್ಯ
10. ಬಾರಸಅಣುವೆಕ್ಟ್ರಾ
11. ಕಸಾಯಪಾಹುಡ
Jain Education International
ಶ್ರಮಣಿ ಡಾ. ಮಂಗಲಪ್ರಜ್ಞಾ ಪ್ರೊ. ಮಹಾವೀರ ರಾಜ ಗೆಲಡಾ ಪ್ರೊ. ದಯಾನಂದ ಭಾರ್ಗವ
ಪ್ರೊ. ರಾಜಾರಾಮ ಜೈನ್
ಪ್ರೊ. ಸಾಗರಮಲ ಜೈನ್
ಪ್ರೊ. ನಲಿನಿ ಜೋಶಿ
ಡಾ. ಎನ್.ಸುರೇಶಕುಮಾರ
ಪ್ರೊ. ಕಮಲಾ ಹಂಪನಾ
ಡಾ. ಕಲ್ಪನಾ ಜೈನ್
ಪ್ರೊ. ಪದ್ಮಾಶೇಖರ ಪ್ರೊ. ಶುಭಚಂದ್ರ
(XXX )
For Private & Personal Use Only
www.jainelibrary.org