SearchBrowseAboutContactDonate
Page Preview
Page 205
Loading...
Download File
Download File
Page Text
________________ (७) सप्तभाषी आत्मसिद्धि 163 SAPTABHASHI ATMASIDDHI ಶುದ್ ಬುದ್ ಚೈತನ್ಯಘನ್, ಸ್ವಯಂಜ್ಯೋತಿ ಸುಖ್ ಧಾಮ್ | ಬೀಜುಂ ಕಹೀಯೆ ಕೇಟ್‌ಲುಂ, ಕರ್ ವಿಚಾರ್ ತೋ ಪಾಮ್ I11171 ನೀನು ದೇಹಾದಿ ಎಲ್ಲ ಪದಾರ್ಥಗಳಿಂದ ಭಿನ್ನವಾಗಿರುವಿ. ಆತ್ಮದ್ರವ್ಯವು ಬೇರೆ ಯಾವುದರಲ್ಲಿಯೂ ಕೂಡುವುದಿಲ್ಲ. ಆತ್ಮದ್ರವ್ಯದಲ್ಲಿಯೂ ಬೇರೆ ಏನೂ ಕೊಡುವುದಿಲ್ಲ. ಪರಮಾರ್ಥ ದೃಷ್ಟಿಯಿಂದ ಒಂದು ದ್ರವ್ಯವು ಇನ್ನೊಂದು ದ್ರವ್ಯದಿಂದ ಯಾವಾಗಲೂ ಭಿನ್ನವಾಗಿರುತ್ತದೆ. ಆದ್ದರಿಂದ ನೀನು ಶುದ್ದನಾಗಿರುವಿ. ಬೋಧಸ್ವರೂಪನಾಗಿರುವಿ. ಚೈತನ್ಯಪ್ರದೇಶಾತ್ಮಕನಾಗಿರುವಿ. ಸ್ವಯಂಜ್ಯೋತಿಯಾಗಿರುವಿ. ನಿನ್ನನ್ನು ಪ್ರಕಟಗೊಳಿಸುವವರು ಯಾರೂ ಇಲ್ಲ. ನೀನು ಸ್ವಭಾವದಿಂದಲೇ ಪ್ರಕಾಶಮಾನವಾಗಿರುವಿ. ಅದ್ಯಾಬಾಧಸುಖಧಾಮನಾಗಿರುವಿ. ಹೆಚ್ಚಿಗೆ ಏನು ಹೇಳಲಿ ? ಸಂಕ್ಷೇಪವಾಗಿ ಇಷ್ಟೇ ಹೇಳಲಾಗುತ್ತದೆ. ನೀನು ಹೇಗೆ ವಿಚಾರ ಮಾಡುತ್ತಿಯೋ ಆ ಪದವನ್ನು ಹೊಂದುವಿ. ನಿಶ್ಚಯ್ ಸರ್ವೆ ಜ್ಞಾನಿನೋ, ಆವೀ ಅತ್ರ ಸಮಾಮ್ | ಧರೀ ಮೌನ್‌ತಾ ಏಮ್ ಕಹೀ, ಸಹಜ್ ಸಮಾಧಿ ಮಾಯ್ 111181 ಎಲ್ಲ ಜ್ಞಾನಿಗಳ ನಿಶ್ಚಯವೂ ಇದರಲ್ಲಿಯೇ ಬಂದು ಸಮಾವೇಶವಾಗುತ್ತದೆ. ಇದನ್ನು ಹೇಳಿ ಸದ್ಗುರುವು ಮೌನವನ್ನು ಧರಿಸಿ-ವಚನ ಯೋಗದ ಪ್ರವೃತ್ತಿಯನ್ನು ತ್ಯಾಗಮಾಡಿ-ಸಹಜ ಸಮಾಧಿಯಲ್ಲಿ ಸ್ಥಿತನಾದನು. ಶಿಷ್ಯ-ಬೋಧ ಬೀಜ ಪ್ರಾಪ್ತಿ ಕಥನ: ಸದ್ಗುರುನಾ ಉಪದೇಶ್ ಥೀ, ಆವಂ ಅಪೂರ್ವ್ ಭಾನ್ | ನಿಜ್ಪದ್ ನಿಜ್ಮಾಂಹೀ ಲಕ್ಕುಂ, ದೂರ್ ಥಯುಂ ಅಜ್ಞಾನ್ ||1191 ಶಿಷ್ಯನಿಗೆ ಸದ್ಗುರುವಿನ ಉಪದೇಶದಿಂದ ಅಪೂರ್ವ-ಅಂದರೆ ಈ ಮೊದಲು ಎಂದೂ ಪ್ರಾಪ್ತವಾಗಿರಲಿಲ್ಲದಂತಹ-ತಿಳುವಳಿಕೆ ಉಂಟಾಯಿತು. ಅದರಿಂದ ತನ್ನ ಸ್ವರೂಪವು ಇದ್ದಕ್ಕಿದ್ದಂತೆ ಭಾಸವಾಗ ಹತ್ತಿತು. ದೇಹದಲ್ಲಿರುವ ಆತ್ಮಬುದ್ಧಿರೂಪ ಅವನ ಅಜ್ಞಾನವು ದೂರವಾಯಿತು. ಭಾಗ್ಯುಂ ನಿಜ್ ಸ್ವರೂಪ್ ತೇ, ಶುದ್ ಚೇತನಾ ರೂಪ್ || ಅಜರ್ ಅಮರ್ ಅವಿನಾಶಿ ನೇ, ದೇಹಾತೀತ್ ಸ್ವರೂಪ್ Il12di ಅವನಿಗೆ ತನ್ನ ನಿಜವಾದ ಸ್ವರೂಪವು, ಶುದ್ದ ಚೈತನ್ಯ ಸ್ವರೂಪ, ಅಜರ, ಅಮರ, ಅವಿನಾಶೀ ಮತ್ತು ದೇಹದಿಂದ ಸ್ಪಷ್ಟವಾಗಿ ಭಿನ್ನವೆಂದು ಭಾಸವಾಯಿತು. ಕರ್ತಾ ಭೋಕ್ಕಾ ಕರ್ಮನೋ, ವಿಭಾವ್ ವರ್ತೆ ಜ್ಞಾಂಯ್ | ವೃತ್ತಿ ವಹೀ ನಿಜ್ ಭಾವ್ಮಾಂ , ಥಯೋ ಅಕರ್ತಾ ತ್ಯಾಂಯ್ 111211 ಎಲ್ಲಿ ವಿಭಾವ ಅಂದರೆ ಮಿಥ್ಯಾತ್ವ ಇರುವುದೋ ಅಲ್ಲಿಯೇ ಮುಖ್ಯ ನಯದಿಂದ ಕರ್ಮದ ಕರ್ತೃತ್ವ ಮತ್ತು ಭೋಕ್ತತ್ವಗಳು ಇರುತ್ತವೆ. ಆತ್ಮಸ್ವರೂಪದಲ್ಲಿ ವೃತ್ತಿಯೂ ಪ್ರವಹಿಸುವುದರಿಂದ ಆ ಜೀವನು ಕರ್ತಾ ಆಗಿಬಿಡುತ್ತಾನೆ. ಅಥವಾ ನಿಜ್ ಪರಿಣಾಮ್ ಜೇ, ಶುದ್ ಚೇತನಾ ರೂಪ್ | ಕರ್ತಾ ಭೋಕ್ತಾತೇಹ್ನೋ, ನಿರ್ವಿಕಲ್ಸ್ ಸ್ವರೂಪ್ 112211 ಅಥವಾ ಶುದ್ದ ಚೈತನ್ಯ ಸ್ವರೂಪವಾದಂಥ ಆತ್ಮ ಪರಿಣಾಮವು ಏನಿದೆಯೋ ಅದನ್ನೇ ಜೀವನು ನಿರ್ವಿಕಲ್ಪ ಸ್ವರೂಪದಿಂದ ಕರ್ತೃವೂ ಭೋಕ್ತವೂ ಆಗಿದ್ದಾನೆ. ಮೋಕ್ ಕಹೋ ನಿಜ್ ಶುದ್ತಾ, ತೇಪಾಮೇ ತೇ ಪಂಥ್ | ಸಮ್ಜಾಲ್ಲೊ ಸಂಕ್ಷೇಪ್ಮಾಂ , ಸಕಳ ಮಾರ್ಗ್ ನಿಗ್ರ್ರಂಥ್ Il1231 ಆತನ ಶುದ್ದ ಪದವೇ ಮೋಕ್ಷವಾಗಿದೆ. ಆ ಮೋಕ್ಷವನ್ನು ಯಾವುದರಿಂದ ಸಂಪಾದಿಸಬಹುದೋ ಅದು ಮೋಕ್ಷ ಮಾರ್ಗವಾಗಿದೆ. ಶ್ರೀ ಸದ್ಗುರುವು ದಯೆತೋರಿ ನಿಗ್ರ್ರಂಥಾವಸ್ಥೆಯ ಎಲ್ಲ ಮಾರ್ಗಗಳನ್ನು ಹೇಳಿದ್ದಾನೆ. 0 CHIROOJINA-BHARATI0 Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy