________________
(७) सप्तभाषी आत्मसिद्धि
162
SAPTABHASHI ATMASIDDHI
ಮತ್ದರ್ಶನ್ ಆಗ್ರಹ್ ತಜೀ, ವರ್ತೆ ಸದ್ಗುರು ಲಕ್ಷ |
ಲಹೇ ಶುದ್ ಸಮ್ಕಿತ್ ತೇ, ಜೇಮಾಂ ಭೇದ್ ನ ಪಕ್ಷ 1111al ಮತ ಹಾಗೂ ದರ್ಶನಗಳ ಆಗ್ರಹವನ್ನು ಬಿಟ್ಟು ಯಾವನು ಸದ್ಗುರುವಿನ ಗುರಿಯ ಕಡೆಗೆ ಧಾವಿಸುತ್ತಾನೆಯೋ ಅವನು ಶುದ್ದ ಸಮಕಿತವನ್ನು ಪಡೆಯುತ್ತಾನೆ. ಇದರಲ್ಲಿ ಯಾವ ಭೇದವೂ ಯಾವ ಪಕ್ಷವೂ ಇಲ್ಲ.
ವರ್ತೆ ನಿಜ್ ಸ್ವಭಾವ್ನೋ, ಅನುಭವ್ ಲಕ್ಷ ಪ್ರತೀತ್ |
ವೃತಿ ವಹ ನಿಜ್ ಭಾವ್ಮಾಂ , ರ್ಪಮಾಥೇ ಸಮ್ಕಿತ್ |111111 ಎಲ್ಲಿ ಆತ್ಮ ಸ್ವಭಾವದ ಅನುಭವವೂ ಗುರಿಯೂ ಮತ್ತು ಪ್ರತೀತಿಯೂ ಇರುವುದೋ ಹಾಗೆಯೇ ಆತ ಸ್ವಭಾವದಲ್ಲಿ ವೃತ್ತಿಯು ಪ್ರವಹಿತವಾಗುವುದೋ ಅಲ್ಲಿಯೇ ಪರಮಾರ್ಥದಿಂದ ಸಮಕಿತವಾಗುತ್ತದೆ.
ವರ್ಧಮಾನ್ ಸಮ್ಕಿತ್ ಥಈ, ಟಾಳೇ ಮಿಥ್ಯಾಭಾಸ್ |
ಉದಯ್ ಥಾಯ್ ಚಾರಿತ್ರನೋ, ವೀತರಾಗ್ ಪದ್ ವಾಸ್ 111121 ಈ ಸಮಕಿತವು ವೃದ್ದಿಯಾಗುತ್ತಿರುವ ಪ್ರಭಾವದಿಂದ ಹಾಸ್ಯ, ಶೋಕ ಮೊದಲಾದ ಆತ್ಮನಲ್ಲಿ ಆಗುವ ಮಿಥ್ಯಾ ಆಭಾಸಗಳನ್ನು ದೂರಗೊಳಿಸುತ್ತದೆ. ಮತ್ತು ಅದರಿಂದ ಸ್ವಭಾವ-ಸಮಾಧಿ-ರೂಪ ಚಾರಿತ್ರದ ಉದಯವಾಗುತ್ತದೆ. ಇದರಿಂದ ಸಮಸ್ತ ರಾಗ-ದ್ವೇಷದ ಕ್ಷಯ-ಸ್ವರೂಪ ವೀತರಾಗ ಪದದಲ್ಲಿ ಸ್ಥಿತಿಯಾಗುತ್ತದೆ.
ಕೇವಲ್ ನಿಜ್ ಸ್ವಭಾವ್ ನುಂ, ಅಖಂಡ್ ವರ್ತೆ ಜ್ಞಾನ್ |
ಕಹಿಯೇ ಕೇವಲ್ ಜ್ಞಾನ್ ತೇ, ದೇಹ್ ಛತಾಂ ನಿರ್ವಾಣ್ Il1131 ಎಲ್ಲಿ ಸರ್ವ ಆಭಾಸಗಳು ಇಲ್ಲದ ಆತ ಸ್ವಭಾವದ ಅಖಂಡ- ಅಂದರೆ ಯಾವುದು ಎಂದೂ ಖಂಡಿತವಾಗಲಾರದೋ, ಮಂದವಾಗಲಾರದೋ ನಾಶವಾಗಲಾರದೋ ಅಂಥ ಜ್ಞಾನವು ಇರುತ್ತದೆ. ಇದಕ್ಕೆ ಕೇವಲ ಜ್ಞಾನವೆಂದು ಹೇಳುವರು. ಈ ಕೇವಲ ಜ್ಞಾನವನ್ನು ಪಡೆಯುವುದರಿಂದ ದೇಹವಿದ್ದರೂ ಕೂಡ ಉತ್ಕೃಷ್ಟ ಜೀವನ್ಮುಕ್ತಸ್ಥಿತಿಯ ನಿರ್ವಾಣವು ಇಲ್ಲಿಯೇ ಅನುಭವಕ್ಕೆ ಬರುತ್ತದೆ.
ಕೋಟಿ ವರ್ಷನುಂ ಸ್ವಪ್ಪ ಪಣ್, ಜಾಗ್ರತ ಥತಾಂ ಶಮಾಮ್ |
ತೇಮ್ ವಿಭಾವ್ ಅನಾದಿನೋ, ಜ್ಞಾನ್ ಫತಾಂ ದೂರ್ ಥಾಯ್ 111141 ಕೋಟ್ಯವಧಿ ವರ್ಷದ ಸ್ವಪ್ನವೂ ಸಹ ಎಚ್ಚರವಾದ ಕೂಡಲೇ ಇಲ್ಲದಂತೆ ಆಗುತ್ತದೆ. ಅದೇ ಪ್ರಕಾರ ಅನಾದಿಕಾಲದ ವಿಭಾವವು ಕೂಡ ಆತ್ಮಜ್ಞಾನವಾದಕೂಡಲೇ ದೂರವಾಗುತ್ತದೆ.
ಛಟೇ ದೇಹಾಧ್ಯಾಸ್ ತೋ, ನಹಿ ಕರ್ತಾ ತುಂ ಕರ್ಮ್ |
ನಹಿ ಭೋಕ್ತಾ ತುಂ ತೇಹ್ನೋ, ಏ ಜ ಧರ್ಮನೋ ಮರ್ಮ್ 111181 ಎಲೈ ಶಿಷ್ಯನೇ ! ಜೀವನು ದೇಹವನ್ನೇ ಆತ್ಮನೆಂದು ನಂಬಿದ್ದಾನೆ. ಇದರಿಂದ ಸ್ತ್ರೀ ಪುತ್ರ ಮೊದಲಾದ ಎಲ್ಲದರಲ್ಲಿಯೂ ಅಹಂಭಾವ ಮತ್ತು ಮಮತ್ವಭಾವವನ್ನು ಹೊಂದಿದ್ದಾನೆ. ಆದರೆ ಈ ಆತ್ಮಭಾವವು ಆತ್ಮನಲ್ಲಿಯೇ ನೆಲೆಸಿದ್ದಾದರೆ ದೇಹಕ್ಕೆ ಆತ್ಮನೆಂದು ತಿಳಿಯುವುದು, ಆತ್ಮನನ್ನು ದೇಹವೆಂದು ತಿಳಿಯುವುದು” ಈ ದೇಹಾಧ್ಯಾಸವು ದೂರವಾದರೆ, ನೀನು ಕರ್ಮದ ಕರ್ತೃವೂ ಅಲ್ಲ, ಭೋಕ್ತವೂ ಅಲ್ಲ. ಇದೇ ಧರ್ಮದ ಮರ್ಮವಾಗಿವೆ.
ಏಜ ಧರ್ಮ್ಥೀ ಮೋಕ್ಸ್ ಛೇ, ತುಂ ಛೋ ಮೋಕ್ಷ ಸ್ವರೂಪ್ |
ಅನಂತ್ ದರ್ಶನ್ ಜ್ಞಾನ್ ತುಂ, ಅವ್ಯಾಬಾದ್ ಸ್ವರೂಪ್ II116! ಇದೇ ಧರ್ಮದಿಂದ ಮೋಕ್ಷವು ಲಭಿಸುತ್ತದೆ. ನೀನೇ ಮೋಕ್ಷ ಸ್ವರೂಪನಾಗಿರುವಿ. ಅರ್ಥಾತ್ ಶುದ್ದ ಆತ್ಮಪದವೇ ಮೋಕ್ಷವಾಗಿದೆ. ನೀನು ಅನಂತ ದರ್ಶನ ಜ್ಞಾನ ಹಾಗೂ ಅವ್ಯಾಬಾಧಸ್ವರೂಪನಾಗಿರುವಿ.
for
JINA-BHARATI
Jain Education Interational 2010_04
For Private & Personal Use Only
www.jainelibrary.org