SearchBrowseAboutContactDonate
Page Preview
Page 202
Loading...
Download File
Download File
Page Text
________________ (७) सप्तभाषी आत्मसिद्धि 160 SAPTABHASHI ATMASIDDHI ಕರ್ಮ್ಭಾವ್ ಅಜ್ಞಾನ್ ಛೇ, ಮೋಕ್ಷಭಾವ್ ನಿಚ್ವಾಸ್ 1 ಅಂಧಕಾರ್ ಅಜ್ಞಾನ್ ಸಮ್, ನಾಶೇ ಜ್ಞಾನ್‌ಪ್ರಕಾಶ್ I198|| ಕರ್ಮಭಾವವು ಜೀವನ ಅಜ್ಞಾನವಾಗಿದೆ. ಮೋಕ್ಷಭಾವವು ಜೀವನ ನಿಜಸ್ವಭಾವದಲ್ಲಿ ನಿಲ್ಲುವಿಕೆ ಆಗಿದೆ. ಅಜ್ಞಾನದ ಸ್ವಭಾವವು ಅಂಧಕಾರದಂತಿದೆ. ಆದ್ದರಿಂದ ಪ್ರಕಾಶವು ಬಂದ ಮೇಲೆ ಎಷ್ಟೋಕಾಲದಿಂದ ಇದ್ದ ಕತ್ತಲೆಯೂ ಸಹ ದೂರವಾಗುವಂತೆ ಅಜ್ಞಾನವು ಜ್ಞಾನಪ್ರಕಾಶದಿಂದ ನಷ್ಟವಾಗುತ್ತದೆ. (ಇದಕ್ಕೆ ದೀರ್ಘಕಾಲದ ಅಜ್ಞಾನವೆಂದು ಸಂಶಯವನ್ನು ಪಡುವ ಕಾರಣವಿಲ್ಲ) ಜೇ ಜೇ ಕಾರಣ್ ಬಂದ್ನಾಂ , ತೇಹ್ ಬಂದ್ನೋ ಪಂಥ್ || ತೇ ಕಾರಣ್ ಛೇದಕ್ ದಶಾ, ಮೋಕ್ಷಪಂಥ್ ಭವ್ ಅಂತ್ (1991) ಯಾವು ಯಾವುದು ಕರ್ಮಬಂಧಕ್ಕೆ ಕಾರಣವಾಗಿರುವುದೋ ಅದೆಲ್ಲ ಕರ್ಮಬಂಧಕ್ಕೆ ಮಾರ್ಗವಾಗಿದೆ. ಈ ಎಲ್ಲ ಕಾರಣಗಳನ್ನು ಛೇದಿಸುವ ಸ್ಥಿತಿಯು ಯಾವುದು ಇದೆಯೋ ಅದು ಮೋಕ್ಷಮಾರ್ಗವಾಗಿದೆ. ಅದೇ ಭವದ ಅಂತವಾಗಿದೆ. ರಾಗ್ ದ್ವೇಷ್ ಅಜ್ಜಾನ್ ಏ, ಮುಖ್ಯ ಕರ್ಮ್ನೀ ಗ್ರಂಥ್ | ಥಾಯ್ ನಿವೃತ್ತಿ ಜೇಷ್ಠೀ, ತೇಜ್ ಮೋಕ್ಷನೋ ಪಂಥ್ ||10al ರಾಗ, ದ್ವೇಷ ಮತ್ತು ಅಜ್ಞಾನದ ಏಕತೆಯೇ ಕರ್ಮದ ಮುಖ್ಯ ಗಂಟಾಗಿದೆ. ಇವಿಲ್ಲದೆ ಕರ್ಮದ ಬಂಧನವು ಆಗುವುದಿಲ್ಲ. ಇವುಗಳ ನಿವೃತ್ತಿಯು ಯಾವುದರಿಂದ ಆಗುವುದೋ ಅದೇ ಮೋಕ್ಷದ ಮಾರ್ಗವಾಗಿದೆ. ಆತಾ ಸತ್ ಚೈತನ್ಯಮಯ್, ಸರ್ವಾಭಾಸ್ ರಹಿತ್ | ಜೇಥಿ ಕೇವಲ್ ಪಾಮಿಯೇ, ಮೋಕ್ಷಪಂಥ್ ತೇ ರೀತ್ 110110 “ ಸತ್” – ಅಂದರೆ ಅವಿನಾಶೀ, “ ಚೈತನ್ಯಮಯ' ಅಂದರೆ ಸರ್ವ ಭಾವಗಳನ್ನು ಪ್ರಕಾಶಗೊಳಿಸುವ ಸ್ವಭಾವಮಯ, ಅನ್ಯ ಸರ್ವವಿಭಾವ ಮತ್ತು ದೇಹಾದಿ ಸಂಯೋಗಗಳ ಆಭಾಸರಹಿತವಾದ ಮತ್ತು ಕೇವಲ” ಅಂದರೆ ಶುದ್ಧಾಸ್ಥಿತಿಯನ್ನು ಹೊಂದುವುದು ಈ ರೀತಿಯ ಪ್ರವೃತ್ತಿಯನ್ನು ಮಾಡುವುದು - ಇದೇ ಮೋಕ್ಷಮಾರ್ಗವಾಗಿದೆ. ಕರ್ಮ್ ಅನಂತ್ ಪ್ರಕಾರ್‌ನಾಂ, ತೇಮಾಂ ಮುಖ್ಯೋ ಆತ್ | ತೇಮಾಂ ಮುಖ್ಯ ಮೋಹನೀಮ್, ಹಣಾಮ್ ತೇ ಕಹುಂ ಪಾಕ್ I11021 ಕರ್ಮವು ಅನಂತ ಪ್ರಕಾರವಾಗಿದೆ. ಅದರಲ್ಲಿ ಜ್ಞಾನಾವರಣಾದಿ ಮುಖ್ಯ ಎಂಟು ಭೇದಗಳು ಇವೆ. ಇವುಗಳಲ್ಲಿಯೂ ಮುಖ್ಯ ಕರ್ಮವು ಮೋಹನೀಯ ಕರ್ಮವಾಗಿದೆ. ಯಾವುದರಿಂದ ಮೋಹನೀಯ ಕರ್ಮದ ನಾಶವಾಗುವುದೋ ಅದರ ಉಪಾಯವನ್ನು ಹೇಳುತ್ತೇನೆ. ಕರ್ಮ್ ಮೋಹಿನೀ ಭೇದ್ ಬೇ, ದರ್ಶನ್‌ ಚಾರಿತ್ರ ನಾಮ್ | ಹಣೇ ಬೋರ್ ವೀತರಾಗ್ತಾ, ಅಚೂಕ್ ಉಪಾಯ್ ಆಮ್ |11 03I ಆ ಮೊಹನೀಯ ಕರ್ಮದಲ್ಲಿ ಎರಡು ಭೇದಗಳಿವೆ. ಒಂದು ದರ್ಶನ ಮೋಹನೀಯ, ಇನ್ನೊಂದು ಚಾರಿತ್ರಮೋಹನೀಯ. ಪರಮಾರ್ಥದಲ್ಲಿ ಅಪರಮಾರ್ಥ ಬುದ್ದಿ ಮತ್ತು ಅಪರಮಾರ್ಥದಲ್ಲಿ ಪರಮಾರ್ಥ ಬುದ್ದಿಯನ್ನಿಡುವುದಕ್ಕೆ ದರ್ಶನಮೋಹನೀಯವೆಂದು ಹೇಳುತ್ತಾರೆ. ಇನ್ನೂ ಯೋಗ್ಯರೂಪದಲ್ಲಿರುವ ಪರಮಾರ್ಥವನ್ನು ತಿಳಿದುಕೊಂಡು ಆತ್ಮಸ್ವಭಾವದಲ್ಲಿ ಯಾವಸ್ಥಿರತೆಯು ಉಂಟಾಗುವುದೋ ಈ ಸ್ಥಿರತೆಯನ್ನು ನಿರೋಧ ಮಾಡುವಂಥ ಪೂರ್ವ ಸಂಸ್ಕಾರ ರೂಪ ಕಷಾಯ ಹಾಗೂ ನೋಕಷಾಯಗಳಿಗೆ ಚಾರಿತ್ರ ಮೋಹನೀಯ ಎಂದು ಹೇಳುತ್ತಾರೆ. FUTTATO JINA-BHARATI Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy