SearchBrowseAboutContactDonate
Page Preview
Page 201
Loading...
Download File
Download File
Page Text
________________ (७) सप्तभाषी आत्मसिद्धि 159 SAPTABHASHI ATMASIDDHI ಅಥವಾ ಮತ್ದರ್ಶನ್ ಘಣಾಂ, ಕಹೇ ಉಪಾಯ್ ಅನೇಕ್ | ತೇಮಾಂ ಮತ್ ಸಾಚೋ ಕಯೋ, ಬನೇ ನ ಏರ್ ವಿವೇಕ್ 119311 ಅಥವಾ ಮಾನವ ಶರೀರದ ಅಲ್ಪ ಆಯುಷ್ಯ ಇತ್ಯಾದಿ ಸಂಶಯಗಳನ್ನು ಬಿಟ್ಟರೂ ಸಹ ಸಂಸಾರದಲ್ಲಿ ಅನೇಕ ಮತಗಳು ದರ್ಶನಗಳು ಇವೆ. ಅವು ಮೋಕ್ಷಕ್ಕೆ ಅನೇಕ ಉಪಾಯಗಳನ್ನು ಹೇಳುತ್ತವೆ. ಒಬ್ಬರು ಒಂದು ಮಾರ್ಗವನ್ನು ಹೇಳಿದರೆ ಇನ್ನೊಬ್ಬರು ಇನ್ನೊಂದು ಮಾರ್ಗವನ್ನು ಹೇಳುತ್ತಾರೆ. ಇವುಗಳಲ್ಲಿ ಯಾವ ಮತ ಸತ್ಯ ಇದರ ನಿರ್ಣಯವಾಗುವುದೂ ಕಠಿಣ. ಕಯಿ ಜಾತಿಮಾಂ ಮೋಕ್ಸ್ ಛೇ, ಕಯಾ ವೇಷ್ಮಾಂ ಮೋಕ್ಷ | ಏನೋ ನಿಶ್ಚಯ್ ನಾ ಬನೇ, ಘಣಾ ಭೇದ್ ಏ ದೋಷ್ (1941) ಬ್ರಾಹ್ಮಣಾದಿ ಯಾವ ಜಾತಿಗಳಲ್ಲಿ ಮೋಕ್ಷವಿದೆ ಅಥವಾ ಯಾವ ವೇಷದಲ್ಲಿ ಮೋಕ್ಷವಿದೆ ಈ ವಿಷಯದ ನಿಶ್ಚಯವಾಗುವುದೂ ಕಠಿಣ. ಯಾಕೆಂದರೆ ಅವುಗಳಲ್ಲಿ ಅನೇಕ ಭೇದಗಳಿವೆ. ಈ ದೋಷದಿಂದಲೂ ಮೋಕ್ಷದ ಉಪಾಯವು ಪ್ರಾಪ್ತಿಯಾಗುವುದು ಕಂಡುಬರುವುದಿಲ್ಲ. ತೇಥೀ ಏಮ್ ಜಣಾಯ್ ಛೇ, ಮಳೇ ನ ಮೋಕ್ಷ ಉಪಾಮ್ | ಜೀವಾದಿ ಜಾಣ್ಯಾ ತಣೋ, ಶೋ ಉಪ್ಕಾರ್ ಜ ಥಾಯ್ ? |1951 ಇದರಿಂದ ಮೋಕ್ಷಕ್ಕೆ ಉಪಾಯವು ದೊರೆಯುವುದಿಲ್ಲ - ಎಂದು ಗೊತ್ತಾಗುತ್ತದೆ. ಆದ್ದರಿಂದ ಜೀವಾದಿಗಳ ಸ್ವರೂಪವನ್ನು ತಿಳಿಯುವುದರಿಂದ ಏನು ಉಪಕಾರವಾಗುವಂತಿದೆ ?ಅರ್ಥಾತ್ ಯಾವ ಮೋಕ್ಷ ಪದವನ್ನು ಹೊಂದುವುದಕ್ಕಾಗಿ ಇವುಗಳ ಜ್ಞಾನವು ಅವಶ್ಯವಾಗಿದೆಯೋ ಆ ಮೋಕ್ಷ ಪದದ ಉಪಾಯ ಹೊಂದುವುದಕ್ಕೆ ಅಶಕ್ಯವೆಂದು ಕಂಡುಬರುತ್ತದೆ. ಪಾಂಚೇ ಉತ್ತರ್ ಥೀ ಥಯುಂ, ಸಮಾಧಾನ್ ಸರ್ವಾಂಗ್, ಸಮ್ಜುಂ ಮೊಕ್ಸ್ ಉಪಾಮ್ ತೋ, ಉದಯ್ ಉದಯ್ ಸದ್ಭಾಗ್ಯ 1196| ನೀವು ಹೇಳಿದ ಐದು ಉತ್ತರಗಳಿಂದ ನನ್ನ ಸಂದೇಹಗಳು ಸರ್ವಾಂಗ ಪೂರ್ಣ ರೂಪದಿಂದ ಸಮಾಧಾನವಾಗಿವೆ. ಆದರೆ ಯಾವಾಗಮೋಕ್ಷದ ಉಪಾಯವನ್ನು ತಿಳಿದುಕೊಳ್ಳುವೆನೋ ಆಗ ನನ್ನ ಸದ್ ಭಾಗ್ಯದ ಉದಯ - ಉದಯವಾಯಿತೆಂದು ತಿಳಿಯುತ್ತೇನೆ. (ಇಲ್ಲಿ ಉದಯ- ಉದಯ ಎಂದು ಬಹು ಸಲ ಹೇಳಿದೆ. ಮೇಲಿನ ಐದು ಉತ್ತರಗಳನ್ನು ಕೇಳಿ ಮೋಕ್ಷದ ಉಪಾಯವನ್ನು ತಿಳಿಯಲಿಕ್ಕೆ ಶಿಷ್ಯನು ಹೊಂದಿರುವ ಆತುರವನ್ನು ಈ ಪದಗಳು ತೋರಿಸುತ್ತವೆ.) ಸಮಾಧಾನ : ಸದ್ಗುರು ಹೇಳಿದ್ದು:ಮೋಕ್ಷದ ಉಪಾಯವಿದೆ ಎಂದು ಸದ್ದುರುವು ಸಮಾಧಾವನ್ನು ಹೇಳುತ್ತಾನೆ. ಪಾಂಚೇ ಉತ್ತರ್‌ನೀ ಥಈ, ಆತ್ಮಾ ವಿಷೇ ಪ್ರತೀತ್ | ಥಾಶೇ ಮೋಕ್ಷಪಾಯ್ನೀ, ಸಹಜ್ ಪ್ರತೀತ್ ಏ ರೀತ್ 1971 ಯಾವ ಪ್ರಕಾರ ನಿನ್ನ ಆತ್ಮನಲ್ಲಿ ಐದು ಉತ್ತರಗಳ ಪ್ರತೀತಿಯು ಉಂಟಾಗಿರುವುದೋ ಅದೇ ಪ್ರಕಾರ ಮೋಕ್ಷದ ಉಪಾಯವೂ ಸಹ ಸಹಜವಾಗಿ ಪ್ರತೀತಿಯಾಗುತ್ತದೆ. ಇಲ್ಲಿ ಸದ್ದುರುವು " ಸಹಜ" ಎಂದು ಹೇಳುವಲ್ಲಿ ಒಂದು ವಿಶೇಷ ಅರ್ಥವಿದೆ, ಯಾರಿಗೆ ಈ ಐದೂ ಪೂರ್ಣವಾಗಿ ನಿವತಿ ಯನ್ನು ಹೊಂದಿರುವವೋ ಅವರಿಗೆ ಮೋಕದ ಉಪಾಯವನ್ನು ತಿಳಿಯಲು ಏನೂ ಕಠಿಣವಾಗುವುದಿಲ್ಲ ಮತ್ತು ಶಿಷ್ಯನಿಗೆ ಇರುವ ವಿಶೇಷ ರೀತಿಯ ಜಿಜ್ಞಾಸೆಯಿಂದ ಅವಶ್ಯವಾಗಿ ಮೋಕ್ಷಪಾಯದ ಲಾಭವು ಆಗುತ್ತದೆ. ಇದು ಸದ್ಗುರು ವಚನದ ಆಶಯವಾಗಿದೆ. 0 GಇTROJINA-BHARATIC Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy