SearchBrowseAboutContactDonate
Page Preview
Page 185
Loading...
Download File
Download File
Page Text
________________ (७) सप्तभाषी आत्मसिद्धि SAPTABHASHI ATMASIDDHI 11 ಶ್ರೀ ಸದ್ಗುರವೇ ನಮಃ || ಶ್ರೀ ಆತ್ಮಸಿದ್ದಿ ಶಾಸ್ತ್ರ ಜೇ ಸ್ವರೂಪ್ ಸಮ್ಜ್ಯಾ ವಿನಾ, ಪಾಮ್ಮೋ ದುಃಖ್ ಅನಂತ್ | ಸಮ್ಜಾವ್ಯಂ ತೇ ಪದ್ ನಮುಂ, ಶ್ರೀ ಸದ್ಗುರು ಭಗ್ವಂತ್ ||1|| ಅರ್ಥ : ಯಾವ ಆತ್ಮ ಸ್ವರೂಪವನ್ನು ತಿಳಿಯದೆ ನಾನು ಭೂತಕಾಲದಲ್ಲಿ ಅನಂತ ದುಃಖಗಳನ್ನು ಅನುಭವಿಸಿದೆನೋ ಆ ಪದ (ಆತ್ಮ ಸ್ವರೂಪ)ವನ್ನು ಯಾರು ನನಗೆ ತಿಳಿಸಿಕೊಟ್ಟರೋ ಮತ್ತು ಭವಿಷ್ಯತ್ಕಾಲದಲ್ಲಿ ನನಗೆ ಉತ್ಪನ್ನವಾಗುವ ಅನಂತ ದುಃಖಮೂಲಗಳನ್ನು ನಾಶಗೊಳಿಸಿದರೆ ಅಂತಹ ಸದ್ಗುರು ಭಗವಂತನಿಗೆ ನಾನು ನಮಸ್ಕಾರ ಮಾಡುತ್ತೇನೆ. ವರ್ತಮಾನ್ ಆ ಕಾಳಮಾಂ, ಮೋಕ್ಷಮಾರ್ಗ ಬಹು ಲೋಪ್ | ವಿಚಾರ್‌ವಾ ಆತ್ಮಾರ್ಥೀನೇ, ಭಾಸ್ಕೋ ಅತ್ರ ಆಗೋಪ್ಯ ||2|| ಈ ವರ್ತಮಾನಕಾಲದಲ್ಲಿ ಮೋಕ್ಷ ಮಾರ್ಗವು ಬಹಳ ಲೋಪ(ಅಪ್ರಕಟ)ವಾಗಿದೆ. ಆ ಮೋಕ್ಷ ಮಾರ್ಗವನ್ನು ಆತ್ಯಾರ್ಥಿ ಜೀವಗಳ ವಿಚಾರಕ್ಕಾಗಿ ನಾನು ಇಲ್ಲಿ ಗುರು ಶಿಷ್ಯರ ಸಂವಾದರೂಪದಲ್ಲಿ ಸ್ಪಷ್ಟವಾಗಿ ಪ್ರಕಟವಾಗಿ ಹೇಳುತ್ತೇನೆ. ಕೋಈ ಕ್ರಿಯಾ ಜಡ್ ಫಈ ರಹ್ಮಾ ಶುಷ್ಕ ಜಾನ್ಮಾಂ ಕೋಣೇ | ಮಾನೇ ಮಾರಗ್ ಮೋಕ್ಷನೋ, ಕರುಣಾ ಉಪಜೇ ಜೋ ||3|| ಕೆಲವರು ಕ್ರಿಯೆ(ಆಚರಣೆ) ಗಳಲ್ಲಿ ಮಾತ್ರ ತೊಡಗಿದ್ದಾರೆ. ಕೆಲವರು ಶುಷ್ಕ ಜ್ಞಾನದ ಬೆನ್ನು ಹತ್ತಿದ್ದಾರೆ ಮತ್ತು ಅವರು ಇದಕ್ಕೇನೇ ಮೋಕ್ಷ ಮಾರ್ಗವೆಂದು ತಿಳಿಯುತ್ತಿದ್ದಾರೆ. ಅವರನ್ನು ನೋಡಿ ದಯೆ ಉಂಟಾಗುತ್ತಿದೆ. ಬಾಹ್ಯ ಕ್ರಿಯಾ ಮಾಂ ರಾಚ್ತಾ, ಅಂತರ್ಭೆದ್ ನ ಕಾಂ | ಜ್ಞಾನ್ಮಾರ್ಗ ನಿಷೇಧತಾ, ತೇಹ್ ಕ್ರಿಯಾ ಜಡ್ ಆಂಇ 1411 ಯಾರು ಬಾಹ್ಯ ಕ್ರಿಯೆಗಳಲ್ಲಿ ಮಾತ್ರ ತೊಡಗಿರುವರೋ, ಯಾರ ಅಂತರಂಗದಲ್ಲಿ ಯಾವ ಭೇದವೂ ಉತ್ಪನ್ನವಾಗಿಲ್ಲವೋ ಯಾರು ಜ್ಞಾನ ಮಾರ್ಗವನ್ನು ನಿಷೇಧಮಾಡುತ್ತಾರೋ ಅವರಿಗೇ ಕ್ರಿಯಾಜಡರೆಂದು ಇಲ್ಲಿ ಹೇಳಿದೆ. ಬಂದ್ ಮೋಕ್ಷ ಛೇ ಕಲ್ಪನಾ, ಬಾಖೆ ವಾಣೀ ಮಾಂಹಿ || ವರ್ತ ಮೋಹಾವೇಶ್ ಮಾಂ, ಶುಷ್ಕಜ್ಞಾನೀ ತೇ ಆಂಹಿ 15|| ಬಂಧನ ಹಾಗೂ ಮೋಕ್ಷಗಳು ಕೇವಲ ಕಲ್ಪನೆ ಮಾತ್ರವಾಗಿವೆ. ಈ ನಿಶ್ವಯ ವಾಕ್ಯವನ್ನು ಯಾರು ಕೇವಲ ಮಾತಿನಲ್ಲಿಯೇ ಹೇಳುತ್ತಾರೋ ಅದಕ್ಕನುಗುಣವಾದ ದಶೆಯು (ಸ್ಥಿತಿಯು) ಯಾರಲ್ಲಿ ಉಂಟಾಗಿಲ್ಲವೋ ಮತ್ತು ಯಾರು ಮೋಹದ ಪ್ರಭಾವದಲ್ಲಿಯೇ ಇರುತ್ತಾರೋ ಅಂಥವರನ್ನು ಇಲ್ಲಿ ಶುಷ್ಕಜ್ಞಾನಿಗಳೆಂದು ಹೇಳಿದೆ. ವೈರಾಗ್ಯಾದಿ ಸಫಳ್ ತೋ, ಜೋ ಸಹ್ ಆತಮ್ಜ್ಞಾನ್ | ತೇಮ್ ಜ ಆತಮ್ ಜ್ಞಾನ, ಪ್ರಾಪ್ತಿ ತಣಾಂ ನಿದಾನ್ 161 ವೈರಾಗ್ಯ-ತ್ಯಾಗಗಳ ಜೊತೆಯಲ್ಲಿ ಆತ್ಮಜ್ಞಾನವಾದರೆ ಅವು ಸಫಲವೆನಿಸುತ್ತವೆ. ಯಾಕೆಂದರೆ ಅವೇ ಮೋಕ್ಷ ಪ್ರಾಪ್ತಿಯ ಹೇತುವಾಗಿವೆ. ಆತ್ಮಜ್ಞಾನವಿಲ್ಲದಲ್ಲಿಯೂ ಆತ್ಮಜ್ಞಾನಕ್ಕಾಗಿಯೇ ಮಾಡಲ್ಪಡುವಂಥ ಅವೆಲ್ಲ (ವೈರಾಗ್ಯ-ತ್ಯಾಗಾದಿ) ಆತ್ಮಜ್ಞಾನ ಪ್ರಾಪ್ತಿಗೆ ಕಾರಣವೆನಿಸುತ್ತವೆ. • GaHIROJINA-BHARATI Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy