________________ ಪಂಡಿತರತ್ತ ಎರ್ತೂರು ಶಾಂತಿರಾಜ ಶಾಸ್ತ್ರಿಗಳು * ಜನನ: 1888 ಮರಣ:: 1952 ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಆದರ್ಶ ಧಾರ್ಮಿಕ ಪುರುಷ, ಸದಾ ಚಾರ ಸಂಪನ್ನ, ನಿಗರ್ವಿ, ನಿರಸೂಯ, ಬಹುಭಾಷಾವಿದ, ಸುಸಂಸ್ಕೃತ, ಸರಸ ಸಜ್ಜನಿಕೆಯ ಸಾಕಾರಮೂರ್ತಿ, ಸಮಾಜಸೇವಕ, ಶ್ರೇಷ್ಠ ವಿದ್ವಾಂಸ, ಶುದ್ಧ, ನಿರ್ಮಲ, ಪವಿತ್ರ ರೀತಿಯಲ್ಲಿ ಬಾಳಿದವರು. ಹೆಸರಿಗಾಗಿ, ಹಣಕ್ಕಾಗಿ, ಸ್ವಾರ್ಥಕ್ಕಾಗಿ ಎಂದೂ ಬಾಳಿದವರಲ್ಲ. ಅವರ ಜೀವನವನ್ನು ಸಮಾಜ ಹಾಗೂ ಸಾಹಿತ್ಯ ಸೇವೆಗೆಂದೇ ಮುಡುಪಾಗಿಟ್ಟು ದುಡಿದವರು, ಗುರಿಯತ್ತ ನಡೆದವರು. - ಅವರ ಕಾರ್ಯಕ್ಷೇತ್ರ ವಿಶಾಲವಾದದ್ದು, ಸಾಹಿತ್ಯ ಸೇವೆ ಅಪಾರವಾದುದು, ಅತಿಶಯವಾದುದು. ಧರ್ಮ, ನೀತಿ, ಸ್ತೋತ್ರ, ಸಿದ್ದಾಂತ, ಆಚಾರ, ಪೂಜಾಪಾಠ, ಸಾಹಿತ್ಯ-ಹೀಗೆ ಇವರ ಕೃತಿಗಳ ಹರವು, ಇವು ಈಗ ದೊರೆತಿರುವಂತೆ 50ಕ್ಕೂ ಮೀರಿವೆ; ಇವರ ಭಾಷಣಗಳು ಮತ್ತು ಲೇಖನಗಳು 77ಕ್ಕೂ ಮೀರಿವೆ. ಇವರ ಕೃತಿ ಶ್ರೇಣಿಯಲ್ಲಿ ಮಹಾ ಮೇರು ಕೃತಿ ಆಚಾರ್ಯ ಜಿನಸೇನ-ಗುಣಭದ್ರರಿಂದ ವಿರಚಿತವಾದ " ಮಹಾ ಪುರಾಣ', ಇಪ್ಪತ್ತು ಸಾವಿರ ಸಂಸ್ಕೃತ ಶ್ಲೋಕಗಳುಳ್ಳ ಈ ಮೇರುಕೃತಿ ಯನ್ನು ಸರಳ ಹೊಸಗನ್ನಡದಲ್ಲಿ ' ಭಾವಾರ್ಥ 'ವನ್ನು ಮೂಲದ ಯಾವು ದೊಂದು ಶಬ್ದಾರ್ಥವನ್ನೂ ಬಿಡದೆ ಬರೆದು, ಕನ್ನಡದ ಜನತೆಗೆ ನೀಡಿ ಮಹೋಪಕಾರ ಮಾಡಿದ್ದಾರೆ. ಈ ಕೃತಿ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಒಂದು ಆಕರಗ್ರಂಥ. ಹೀಗೆ ಸಂಸ್ಕೃತ, ಪ್ರಾಕೃತ, ಕನ್ನಡ ಪಾಂಡಿತ್ಯದ ಪ್ರತಿಭೆಯಿಂದ ಕನ್ನಡ ಸಾಹಿತಿಯಾಗಿ, ಸಾಹಿತ್ಯ ಪರಿಚಾರಕರಾಗಿ ಅಮೋಘ ಸೇವೆ ಸಲ್ಲಿಸಿದವರು. ( ವಿಶ್ವಬಂಧು " ಹಾಗೂ " ಏವೇಕಾಭ್ಯುದಯ ಪತ್ರಿಕೆ ಗಳ ಜನಕರು. ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವಿಸಲ್ಪಟ್ಟ ಬಹುಶಃ ಏಕೈಕ ಸಂಸ್ಕೃತ ವಿದ್ವಾಂಸರು. ಇವರ ಅಪಾರ ವಿದ್ವತ್ತಿನ ಕೀರ್ತಿಗಾಗಿ ಗುರುಮನೆಗಳಿಂದ ಸಂದ ಗೌರವ ಗಳಲ್ಲದೆ, ಅರಮನೆಯಿಂದಲೂ ಮೊದಲು ಆಸ್ಥಾನ ವಿದ್ವಾನರೆಂದೂ, ಅನಂತರ ಆಸ್ಥಾನ ಮಹಾವಿದ್ಯಾನರೆಂದೂ ಗೌರವಿಸಲ್ಪಟ್ಟು, ಪಂಡಿತರತ್ನ ' ಎಂಬ ಬಿರುದನ್ನೂ ಪಡೆದು ಸಮಾಜದ ಪ್ರೀತಿ, ಆದರ, ಗೌರವಗಳಿಗೆ ಪಾತ್ರರಾದ ಹಿರಿಯ ಆದರ್ಶ ವ್ಯಕ್ತಿ.