SearchBrowseAboutContactDonate
Page Preview
Page 28
Loading...
Download File
Download File
Page Text
________________ ಅಂತಃಕರಣದ ಸ್ವರೂಪ ತಿಳಿದಿದ್ದಾರೋ, ಅವರೇ ಜ್ಞಾನಿಗಳು, ಜಪ, ತಪ, ತ್ಯಾಗ ಎಲ್ಲಾ subject ಆಗಿದೆ, ವಿಷಯಗಳಾಗಿವೆ. ವಿಷಯದಿಂದ ಎಂದೂ ನಿರ್ವಿಷಯವಾದ ಆತ್ಮವನ್ನು ಪ್ರಾಪ್ತಿಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಶ್ಯಕರ್ತ: ಸಿದ್ದಿ ಪ್ರಾಪ್ತಿಯನ್ನು ಯಾರು ಮಾಡಿಕೊಳ್ಳುವರೋ, ಅದು ಕೂಡಾ ವಿಷಯಾಸಕ್ತಿಯೇ? ದಾದಾಶ್ರೀ: ಅದೆಲ್ಲಾ ವಿಷಯಾಸಕ್ತಿಯೇ ಆಗಿದೆ. ಹಾಗೂ ಅವೆಲ್ಲಾ ವಿಷಯಗಳ (subject) ಜ್ಞಾನವಾಗಿವೆ ಮತ್ತು ವಿಷಯಗಳ ಆರಾಧನೆಯನ್ನು ಮಾಡುವುದರಿಂದ ಮೋಕ್ಷವು ಸಿಗುವುದಿಲ್ಲ. ನಿಮ್ಮಲ್ಲಿಯೂ ಬುದ್ದಿಯಿದೆ, ಜಗತ್ತಿನಲ್ಲಿ ಎಲ್ಲರ ಬಳಿಯೂ ಬುದ್ದಿಯಿದೆ. ಆದರೆ ನಾವು (ಜ್ಞಾನಿಗಳು) ಮಾತ್ರ ಅಬುದ್ಧರಾಗಿದ್ದೇವೆ. ಬುದ್ದಿಯು ಮನುಷ್ಯನಿಗೆ ಏನು ಮಾಡುತ್ತದೆ? ಅದು Emotional ಮಾಡಿಬಿಡುತ್ತದೆ. ಹೇಗೆ ರೈಲುಬಂಡಿಯು ಗತಿಯಿಂದ (Motion) ಚಲಿಸುತ್ತಾ ಇರುವಾಗ, ಎಲ್ಲಿಯಾದರು Emotional ಆಗಿಬಿಟ್ಟರೆ, ಆಗ ಏನಾಗುತ್ತದೆ? ಪ್ರಶ್ನಕರ್ತ: ಎಲ್ಲಾ ಅವ್ಯವಸ್ಥೆಯಾಗಿಬಿಡುತ್ತದೆ. ದಾದಾಶ್ರೀ: ಹಾಗೆಯೇ ಮನುಷ್ಯನು Emotional ಆಗಿಬಿಟ್ಟರೆ, ಆಗ ಶರೀರದೊಳಗೆ ಎಷ್ಟೆಲ್ಲಾ ಜೀವಿಗಳಿವೆಯೋ, ಅವೆಲ್ಲವೂ ಮರಣಹೊಂದುತ್ತವೆ. ಇದರಿಂದಾಗಿ ಅದರ ದೋಷವು ಅಂಟಿಕೊಳ್ಳುತ್ತದೆ. ಆದುದರಿಂದ ನಾವು (ಜ್ಞಾನಿಗಳು) ಗತಿಯಲ್ಲಿಯೇ ಇರುತ್ತೇವೆ, ನಾವು ಎಂದೂ Emotional ಆಗುವುದಿಲ್ಲ. ನಿಮಗೆ ಗತಿಯಲ್ಲಿ ಇರಬೇಕೆಂಬ ಇಚ್ಛೆ ಇದೆಯೋ, ಇಲ್ಲ Emotional..? ಪ್ರಶ್ಯಕರ್ತ: ಗತಿಯಲ್ಲಿ ಇರಬೇಕೆಂಬ ಇಚ್ಛೆ ಇದೆ. ದಾದಾಶ್ರೀ: ಮನುಷ್ಯನ ಬುದ್ದಿಯು ಏನನ್ನು ಹೇಳುತ್ತದೆ? ಲಾಭ ಹಾಗು ನಷ್ಟ, ಇವೆರಡನ್ನು ಬುದ್ದಿಯು ಹೇಳುತ್ತದೆ. ಅದುಬಿಟ್ಟು ಬೇರೆನ್ನನ್ನು ಹೇಳುವುದಿಲ್ಲ. ರೈಲುಗಾಡಿಯ ಒಳಗೆ ಹೋಗಲು ಕಾಲಿಡುವಾಗಲೇ, ಬುದ್ದಿಯು ತೋರಿಸುತ್ತದೆ 'ಎಲ್ಲಿ ಸರಿಯಾದ ಜಾಗ ಇದೆ ಹಾಗು ಎಲ್ಲಿ ಇಲ್ಲ' ಎಂದು. ಬುದ್ಧಿಯ ಕೆಲಸವೇ ಲಾಭ-ನಷ್ಟಗಳನ್ನು ತೋರಿಸುವುದಾಗಿದೆ. ನಮ್ಮಲ್ಲಿ (ಜ್ಞಾನಿಯಲ್ಲಿ) ಸುತರಾಂ ಬುದ್ದಿಯು ಇಲ್ಲವೇ ಇಲ್ಲ, ಹಾಗಾಗಿ, ನಮಗೆ ಲಾಭ-ನಷ್ಟಗಳು ಎಲ್ಲಿಯೂ ಅನ್ನಿಸುವುದೇ ಇಲ್ಲ. ಇದು ಒಳ್ಳೆದು, ಇದು ಕೆಟ್ಟದು, ಎಂದು ಅನ್ನಿಸುವುದೇ ಇಲ್ಲ. ದೊಡ್ಡ-ದೊಡ್ಡ ಬಂಗಲೆಗಳಲ್ಲಿ ವಾಸವಾಗಿರುವ ಜನರು ನಮ್ಮಲ್ಲಿಗೆ
SR No.034302
Book TitleAntahskaran Ka Swroop Kannada
Original Sutra AuthorN/A
AuthorDada Bhagwan
PublisherDada Bhagwan Aradhana Trust
Publication Year
Total Pages54
LanguageKannada
ClassificationBook_Other
File Size3 MB
Copyright © Jain Education International. All rights reserved. | Privacy Policy