SearchBrowseAboutContactDonate
Page Preview
Page 27
Loading...
Download File
Download File
Page Text
________________ 19 ಅಂತಃಕರಣದ ಸ್ವರೂಪ _ ಪ್ರಶ್ಯಕರ್ತ: ಹೌದು, ಇದು ನಿಜವಾದ ಮಾತು. ಹಾಗಾಗಲು ಸಾಧ್ಯವಾಗುತ್ತದೆ, ಯಾವಾಗ ಅಬುದ್ದದ ಸೀಮೆಯನ್ನು (limit) ತಲುಪಲಾಗುತ್ತದೆಯೋ, ಆಗ ಮನುಷ್ಯನು ಸ್ವಯಂ 'ಬುದ್ಧ'ನಾಗಿಬಿಡುತ್ತಾನೆ! ದಾದಾಶ್ರೀ: ಹೌದು, ಸ್ವಯಂ 'ಬುದ್ಧ' ಆಗಿಬಿಡುತ್ತಾರೆ. ಅಬುದ್ದನಾದ ಮೇಲೆ ಜ್ಞಾನವು ಪ್ರಕಾಶವಾಗುತ್ತದೆ. ಎಲ್ಲಿಯವರೆಗೆ ಬುದ್ದಿ ಇರುತ್ತದೆಯೋ, ಅಲ್ಲಿಯವರೆಗೆ ಶೇಕಡಾ ಒಂದು ಅಂಶದಷ್ಟೂ (percent) ಜ್ಞಾನ ಸಹ ಇರಲು ಸಾಧ್ಯವಿಲ್ಲ. ಜ್ಞಾನ ಇರುವಲ್ಲಿ, ಬುದ್ಧಿಯು ಇರುವುದಿಲ್ಲ. ನಮಗೆ ಯಾವಾಗ ಜ್ಞಾನ ಪ್ರಾಪ್ತಿಯಾಯಿತೋ, ಅದರ ನಂತರದಿಂದ ಬುದ್ದಿಯು ಸಂಪೂರ್ಣವಾಗಿ ಅಂತ್ಯಗೊಂಡು ಬಿಟ್ಟಿದೆ. ನೀವು ತುಂಬಾ ಬುದ್ದಿ ಉಳ್ಳವರಾಗಿದ್ದು, ನಿಮ್ಮ ಹೆಂಡತಿಯೊಂದಿಗೆ ರಸ್ತೆಯಲ್ಲಿ ಹೋಗುವಾಗ ಅವಳು ಹಣವನ್ನು ದಾರಿಯಲ್ಲಿ ಬೀಳಿಸಿಕೊಂಡು ಬರುವುದನ್ನು ಕಂಡು ನೀವು ಭಾವಾವೇಶಕ್ಕೆ (emotional) ಒಳಗಾಗುತ್ತೀರಿ. ಇಲ್ಲಿ ಬುದ್ದಿಯು ಭಾವಾವೇಶಕ್ಕೆ ಒಳಗಾಗುವಂತೆ ಮಾಡುತ್ತದೆ. ಎಲ್ಲಿಯವರೆಗೆ ಅಹಂಕಾರವಿದೆಯೋ ಅಲ್ಲಿಯವರೆಗೆ ಬುದ್ದಿಯು ಇರುತ್ತದೆ. ನಿಮಗೆ ಬುದ್ದಿ ಇಲ್ಲ, ಎಂದ ಮಾತ್ರಕ್ಕೆ ನಡೆಯುತ್ತದೆಯೇ? ಪ್ರಶ್ನಕರ್ತ: ಹೆಚ್ಚಿನ ಬುದ್ಧಿ ಇಲ್ಲ, ಸ್ವಲ್ಪ ಬುದ್ದಿ ಇದೆ. ದಾದಾಶ್ರೀ: ಸ್ವಲ್ಪ ಬುದ್ಧಿ, ಆದರೆ, ಅದೇ ಅತಿಯಾದ ಬುದ್ಧಿಯಾಗಿದೆ. ಈ ಕಾಲದಲ್ಲಿ ಸಮ್ಯಕ್ ಬುದ್ದಿಯು ಕಡಿಮೆ ಹಾಗು ವಿಪರೀತದ ಬುದ್ದಿಯೇ ಹೆಚ್ಚಾಗಿದೆ. ಇಡೀ ವಿಶ್ವದಲ್ಲಿನ ಸಣ್ಣ ಮಕ್ಕಳಲ್ಲಿ ಕೂಡಾ ಬುದ್ದಿಯಿದೆ, ಯಾರದೋ ಹಣ ರಸ್ತೆಯಲ್ಲಿ ಬಿದ್ದಿದ್ದರೆ ಅದನ್ನು ತೆಗೆದುಕೊಂಡು ಬಿಡುತ್ತಾರೆ. ಅದೇನು ಬುದ್ದಿ ಅಲ್ಲವೇ? ಇದೆಲ್ಲಾ ವಿಪರೀತದ ಬುದ್ದಿಯಿಂದಾಗಿದೆ. ಸಮ್ಯಕ್ ಬುದ್ದಿಯು, ನಮ್ಮ ಬಳಿ ಬಂದು ಕುಳಿತುಕೊಳ್ಳುವುದರಿಂದ ಸಾಧ್ಯವಾಗುತ್ತದೆ. - ಒಬ್ಬ ವ್ಯಕ್ತಿಯು ನಮ್ಮನ್ನು ಕೇಳಿದರು ಏನೆಂದರೆ, 'ಜಗತ್ತಿನಲ್ಲಿ ಬೇರೆ ಯಾರಲ್ಲಿಯೂ ಜ್ಞಾನ ಇಲ್ಲವೆ? ನಿಮ್ಮ ಹತ್ತಿರ ಮಾತ್ರ ಇರುವುದೆ?' ಆಗ ನಾವು ಹೇಳಿದೆವು, 'ಇಲ್ಲ, ಯಾರ ಬಳಿ ಜ್ಞಾನವಿದೆಯೋ, ಅದು subject ಜ್ಞಾನವಾಗಿದೆ, ಅದು ಬುದ್ದಿಯ ಜ್ಞಾನವಾಗಿದೆ. ಬುದ್ಧಿಯ ಸಂಪರ್ಕದ ಪ್ರಪಂಚದಲ್ಲಿನ ಎಲ್ಲಾ ವಿಷಯಗಳನ್ನು ತಿಳಿದಿರಬಹುದು. ಆದರೆ, ಅದು ಅಹಂಕಾರಿ ಜ್ಞಾನವಾಗಿದೆ. ಅದು ಅವರ ಬುದ್ದಿಯೊಂದಿಗೆ ಸಮಾವೇಶಗೊಂಡಿರುತ್ತದೆ. ಆದರೆ ನಿರಹಂಕಾರಿ ಜ್ಞಾನವೇ, ನಿಜವಾದ ಜ್ಞಾನವಾಗಿದೆ. 'ನಾನು ಯಾರು?' ಎನ್ನುವುದೊಂದ್ದನ್ನಷ್ಟೇ ಯಾರು
SR No.034302
Book TitleAntahskaran Ka Swroop Kannada
Original Sutra AuthorN/A
AuthorDada Bhagwan
PublisherDada Bhagwan Aradhana Trust
Publication Year
Total Pages54
LanguageKannada
ClassificationBook_Other
File Size3 MB
Copyright © Jain Education International. All rights reserved. | Privacy Policy