________________
ಪ್ರಥಮಾಶ್ವಾಸಂ | ೭೩ ನಿರುಪಮ ದೇವನ ರಾಜ್ಯದೂ ಳರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂ | ಚಿರಸೊತ್ತಿಕೊಂಡು ಗರ್ವದ ಬರೆಯಿಸಿದಂ ಪೆಸರನಖಿಳ ದಿಗ್ವಿತಿಗಳೊಳ್ || ಕ್ಷತ್ರಂ ತೇಜೋಗುಣಮಾ ಕ್ಷತ್ರಿಯರೂ ನೆಲಸಿ ನಿಂದುದಾ ನಗಾದಿ | ಕ್ಷತ್ರಿಯರೊಳಮಿಲೆನಿಸಿದು ದೀ ತ್ರಿಜಗದೊಳಸಗಿ ಸಕಮರಿಕೇಸರಿಯಾ | ಅರಿಕೇಸರಿಗಾತ್ಯಜರರಿ ನರಪ ಶಿರೋದಳನ ಪರಿಣತೋಗ್ರಾಸಿ ಭಯಂ | ಕರಕರರಾಯಿರ್ವರೋಳಾರ್ ದೊರೆಯನೆ ನರಸಿಂಹ ಭದ್ರದೇವರ್ ನೆಗದ್ದರ್ || ಅವರೋಲ್ ನರಸಿಂಗಂಗತಿ ಧವಳಯಶಂ ಯುದ್ಧಮಲ್ಲನಗ್ರಸುತಂ ತ | ದ್ಭುವನ ಪ್ರದೀಪನಾಗಿ ರ್ದವಾರ್ಯವೀರ್ಯಂಗೆ ಬದ್ದಗಂ ಪಿರಿಯ ಮಗಂ || ೨೩ ಪುಟ್ಟಿದೊಡಾತನೊಳುವೊಡ ವುಟ್ಟಿದುದಳಿವಿಂಗೆ ಪಂಪು ಪಂಪಿನೊಳಾಯಂ | ಕಚ್ಚಾಯದೊಳಳವಳವಿನೊ ಕೊಟ್ಟಜೆ ಪುಟ್ಟದುದು ಪೋಲ್ಡರಾರ್ ಬದ್ದೆಗನಂ || . ೨೪
ಕ೦ll.
ಬರೆಯಿಸಿದನು. ೨೦. ಕ್ಷತ್ರಿಯೋಚಿತವಾದ ಶೌರ್ಯಪ್ರತಾಪಾದಿ ತೇಜೋಗುಣಗಳು ಆ ಕ್ಷತ್ರಿಯರ ವಂಶದಲ್ಲಿ ಸ್ಥಿರವಾಗಿ ನಿಂತುದು ಈ ಅರಿಕೇಸರಿಯ ಮಹತ್ಕಾರ್ಯಗಳಿಂದ. ಇವನ ಕಾರ್ಯಗಳು ಮೂರು ಲೋಕಗಳಲ್ಲಿ ಪ್ರಸಿದ್ದರಾದ ಪ್ರಾಚೀನ ರಾಜರುಗಳಲ್ಲಿಯೂ ಇಲ್ಲವೆಂದೆನಿಸಿತು. ೨೨. ಆ ಅರಿಕೇಸರಿಗೆ ಶತ್ರುರಾಜರ ತಲೆಯನ್ನು ಸೀಳುವುದರಲ್ಲಿ ಸಮರ್ಥವೂ ಹರಿತವೂ ಆದ ಕತ್ತಿಯಿಂದ ಭಯಂಕರವಾದ ಬಾಹುಗಳನ್ನುಳ್ಳ ಇವರಿಗೆ ಸಮಾನರಾಗಿದ್ದಾರೆ ಎನ್ನಿಸಿಕೊಂಡ ನರಸಿಂಹ ಭದ್ರದೇವರೆಂಬ ಇಬ್ಬರು ಮಕ್ಕಳು ಪ್ರಸಿದ್ಧರಾದರು. ೨೩. ಅವರಲ್ಲಿ ನರಸಿಂಹನಿಗೆ ನಿರ್ಮಲಯಶಸ್ಸಿನಿಂದ ಕೂಡಿದ ಇಮ್ಮಡಿ ಯುದ್ಧಮಲ್ಲನು ಹಿರಿಯ ಮಗ. ಪ್ರಪಂಚಕ್ಕೆಲ್ಲ ತೇಜೋವಂತನೂ ಅಸಮಪ್ರತಾಪಶಾಲಿಯೂ ಆಗಿದ್ದ ಆ ಯುದ್ಧಮಲ್ಲನಿಗೆ ಬದ್ದೆಗನು (ಭದ್ರದೇವನು) ಹಿರಿಯ ಮಗ. ೨೪. ಹೀಗೆ ಹುಟ್ಟಿದ ಭದ್ರದೇವನಿಗೆ ಜೊತೆಯಲ್ಲಿಯೇ ಜ್ಞಾನವೂ ಜ್ಞಾನದೊಡನೆ ಹಿರಿಮೆಯೂ ಹಿರಿಮೆಯೊಡನೆ ದ್ರವ್ಯಲಾಭಾದಿಗಳೂ ಅವುಗಳೊಡನೆ ಪರಾಕ್ರಮಾತಿಶಯಾದಿಗಳೂ ಹುಟ್ಟಿದುವು. (ಇಂತಹ) ಭದ್ರದೇವನನ್ನು