________________
ಪ್ರಥಮಾಶ್ವಾಸಂ | ೭೧
ಚಂ || ಲಲಿತಪದಂ ಪ್ರಸನ್ನ ಕವಿತಾಗುಣವಿಲ್ಲದೆ ಪೂಣ್ಣು ಪೇಟ್ಟಿ ಬೆ | ಛಳ ಕೃತಿಬಂಧಮುಂ ಬರೆಪಕಾರ ಕೈಗಳ ಕೇಡು ನುಣ್ಣನ || ಪಳಕದ ಕೇಡು ಪೇಟಿಸಿದೊಡರ್ಥದ ಕೇಡನೆ ಪೇಟ್ಟು ಬೀಗಿ ಪೊ | ಟ್ಟಳಿಸಿ ನೆಗುಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೆ | ಈ | ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳು ಮನನೋ | ವಾಸಮನೆಯ ಪೇಳ್ಪನದಲ್ಲದೆ ಗರ್ವಮೆ ದೋಷಮ ಗಂ ದೋಷಮೆ ಕಾಣೆನೆನ್ನುವ ಮಾಯೆ ಪೇಳ್ವೆನಿದಾವ ದೋಷಮೋ ||೧೩
ಚಂ || ವಿಪುಳ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂ ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ ಮಿಪರುಮನೊನೊಳ್ ತಗುಳೆವಂದೊಡೆಯ ಕಥೆಯೊಳ್ ತಗುಳ್ಳಿ ಪೋ ಲಿಪೊಡೆನಗಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್ || ೧೪
ಕಂ || ಶ್ರೀಮಚ್ಚಳುಕ್ಯ ವಂಶ
ܦܘ
ವೋಮಾಮೃತಕಿರಣನೆನಿಪ ಕಾಂತಿಯನೊಳಕೊಂ | ಡೀ ಮಹಿಯೊಳಾತವಂಶಶಿ
ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗಂ ||
೧೫
೧೨. ಲಲಿತವಾದ ಶಬ್ದಗಳೂ ಪರಿಶುದ್ಧವಾದ ಗುಣಗಳೂ ಇಲ್ಲದೆ ಕಾವ್ಯವನ್ನು ಬರೆಯಬೇಕೆಂಬ ಒಂದು ಹಟದಿಂದಲೇ ರಚಿಸಿದ ದಡ್ಡರ ಕೃತಿರಚನೆ ಅದೊಂದು ಕಾವ್ಯರಚನೆಯೇನು ? ಅದು ಬರಹಗಾರನ ಕೈಗೆ ಶ್ರಮವನ್ನುಂಟುಮಾಡತಕ್ಕದ್ದು; ಬರೆಯಲ್ಪಡಬೇಕಾಗಿರುವ ನಯವಾದ ಓಲೆಗರಿಗಳ ದಂಡ! ವಾಚನಮಾಡಿದರೆ ಅರ್ಥಕ್ಕೆ ಹಾನಿಯನ್ನುಂಟುಮಾಡುವ ಕಾವ್ಯರಚನೆ ಮಾಡಿ ಉಬ್ಬಿ ಅಹಂಕಾರದಿಂದ ಯಶಸ್ಸಿಗಾಗಿ ಹಾತೊರೆಯುತ್ತಿರುವ ಬಣಗುಕವಿಯು ಕವಿಯೆಂಬ ಗಣನೆಗೆ ಬರತಕ್ಕವನೆ ? ೧೩. ನಾನು ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯವೆಂಬ ಅಮೃತ ಸಾಗರವನ್ನು ಈಜುತ್ತೇನೆ. ಆದರೆ ಕವಿ ವ್ಯಾಸನೆಂಬ ಗರ್ವ ಮಾತ್ರ ನನಗಿಲ್ಲ. ಗುಣಾರ್ಣವನಾದ ಅರಿಕೇಸರಿಯ ಸಭಾವವು ನನ್ನ ಮನೋಮಂದಿರವನ್ನು ಪ್ರವೇಶಿಸಿರುವುದರಿಂದ ಈ ಕಾವ್ಯವನ್ನು ಹೇಳುತ್ತಿದ್ದೇನೆ. ಈ ರೀತಿಯಾದ ಪ್ರೀತಿಪ್ರದರ್ಶನವು ದೋಷವಾಗುತ್ತದೆಯೇ ? ನನಗೆ ತಿಳಿದಷ್ಟು ನಾನು ಹೇಳುತ್ತೇನೆ. ಇದರಲ್ಲಿ ಯಾವ ದೋಷವಿದೆ? ೧೪. ಹಿಂದಿನ ಕೆಲವು ಕವಿಗಳು ವಿಸ್ತಾರವಾದ ಯಶೋರಾಶಿಯಿಲ್ಲದವನನ್ನು ತಮ್ಮ ಕಾವ್ಯದ ನಾಯಕನನ್ನಾಗಿ ಮಾಡಿ ಪ್ರಾಚೀನ ರಾಜರ ಸದ್ಗುಣಗಳನ್ನೆಲ್ಲ ಅವರಲ್ಲಿ ಆರೋಪಣೆ ಮಾಡಿ ಹೋಲಿಸುತ್ತಾರೆ. ಆದರೆ ಗುಣಾರ್ಣವನಾದ ಅರಿಕೇಸರಿಯು ತನ್ನ ಸದ್ಗುಣಗಳಿಂದ ಪೂರ್ವಕಾಲದ ರಾಜರನ್ನು ಸೋಲಿಸುತ್ತಿರುವುದರಿಂದ ಮಹಾಭಾರತದ ಕಥೆಯಲ್ಲಿ ಅವನ ಕಥೆಯನ್ನು ಸೇರಿಸಿ ಗುಣಾರ್ಣವ ಮಹಾರಾಜನನ್ನು ಅರ್ಜುನನಲ್ಲಿ ಹೊಂದಿಸಿ ವರ್ಣಿಸಲು ನನಗೆ ಪ್ರೀತಿಯಾಯಿತು. ೧೫. ಸಂಪದ್ಯುಕ್ತವಾದ ಚಾಳುಕ್ಯವಂಶವೆಂಬ ಆಕಾಶಕ್ಕೆ