________________
ಪಂಪಭಾರತಂ
ಮೇರುಪರ್ವತವೇ ಎದುರಿಗಿದ್ದರೂ ತನ್ನ ಶೌರ್ಯಕ್ಕೂ ಔದಾರ್ಯಕ್ಕೂ ಇದು ಸಾಲದೆಂದು ಪ್ರಿಯಗಳ್ಳನು ಚಿಂತಿಸುವನು. ಇತರ ಮಹಾಸಾಮಂತರು ಸ್ವಸ್ವಾದಿ ಬಿರುದುಗಳನ್ನು ಹೊಗಳಿಸಿಕೊಳ್ಳುವುದರಲ್ಲಿ ಸಮಾನರಾಗುತ್ತಾರೆಯೇ ವಿನಾ ಗುಣದಲ್ಲಿ ಸಮಾನರಾಗಲಾರರು.
200
ಈ ಗುಣಾರ್ಣವನು ತ್ಯಾಗದ ಕಂಭವನ್ನು ನಿಲ್ಲಿಸಿ ವೀರದ ಶಾಸನವನ್ನು ಸ್ಥಾಪಿಸಿ ಅಧೀನರಾಗದ ರಾಜರನ್ನು ವಶಪಡಿಸಿಕೊಂಡು ಮೂರು ಲೋಕಗಳಲ್ಲಿ ಯಶಸ್ಸಿಗೆ ಆಕರರಾಗಿದ್ದ ಬದ್ದೆಗದೇವ ಮತ್ತು ನರಸಿಂಹರಿಗಿಂತ ತ್ಯಾಗದಲ್ಲಿಯೂ ವೀರದಲ್ಲಿಯೂ ನಾಲ್ಕು ಬೆರಳಷ್ಟು ಉನ್ನತನಾಗಿದ್ದಾನೆ. ಪಂಪನ ಪ್ರಕಾರ ಚಾಳುಕ್ಯ ವಂಶವೃಕ್ಷವನ್ನು ಈ
ರೀತಿ ಗುರುತಿಸಬಹುದು.
೧. ಯುದ್ಧಮಲ್ಲ-ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು, ಪ್ರತಿದಿನವೂ ಐನೂರು ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
೨. ಅರಿಕೇಸರಿ, ವೆಂಗಿಯ ಪ್ರಧಾನನೊಡನೆ ನಿರುಪಮರಾಜ್ಯವನ್ನು ಮುತ್ತಿದನು.
೪. ಭದ್ರದೇವ
೩. ನರಸಿಂಹ
೫. ದುಗ್ಧಮಲ್ಲ - ಯುದ್ಧಮಲ್ಲ ೬. ಬದ್ದೆಗ-ಭದ್ರದೇವ
೧. ೪೨ ಕಾಳಗಗಳನ್ನು ಜಯಿಸಿದನು. ೨. ಸೋಲದ ಗಂಡನೆಂಬ ಬಿರುದನ್ನುಳ್ಳವನು. ೩. ಭೀಮನನ್ನು ನೀರಿನಲ್ಲಿ ನುಗ್ಗಿ ಹಿಡಿದನು.
೭. ದುಗ್ಧಮಲ್ಲ (ಯುದ್ಧಮಲ್ಲ.)
೮. ನರಸಿಂಹ-ಕಲಿನರಸಿಂಹ-ನರಸಿಂಹ-ನರಗ.
೧. ಸುಭದ್ರ ಮುನಿಯ ಪ್ರತಿಬಿಂಬ ೨. ಲಾಳನನ್ನು ಅಡಿಗೆರಗಿಸಿದನು
೩. ಸಪ್ತಮಾಲವ ಮುಖ್ಯರನ್ನು ಸೋಲಿಸಿದನು ೪. ಪೂರ್ಜರ ರಾಜ ಸೈನ್ಯವನ್ನು ಸೋಲಿಸಿ ಗಂಗಾ ಜಲದಲ್ಲಿ ಕುದುರೆಯನ್ನು ಮೀಯಿಸಿದನು.
೫. ಮಹೀಪಾಲನನ್ನು ಓಡಿಸಿದನು
೬. ಇವನ ಮಿತ್ರನಾದ ಸಂಗನನ್ನು ನಾಶಪಡಿಸಿದನು. ೭. ಇವನ ಹೆಂಡತಿ ಜಾಕವ್ವ
೯. ಅರಿಕೇಸರಿ-ಅರಿಗ-ಗೊಜ್ಜಿಗನಿಂದ ವಿಜಯಾದಿತ್ಯನನ್ನು ರಕ್ಷಿಸಿದ