________________
ಚoll
ಕಂ
ಚತುರ್ದಶಾಶ್ವಾಸಂ |೭೦೫
ರಾಜದ್ರಾಜಕಮನಿಸಿದ
ಸಾಜದ ಪುಲಿಗೆಯ ತಿರುಳ ಕನ್ನಡದೊಳ್ ನಿ | ರ್ವ್ಯಾಜದೆಸಕದೊಳ ಪುದಿದೊಂ
ದೋಜೆಯ ಬಲದಿನಿಯ ಕವಿತ ಪಂಪನ ಕವಿತೇ
ಪುದಿದ ಜಸಂ ಪೊದಲ್ಲಿ ಚಳವೊಂದಿದಳಂಕೃತಿ ಕೃತ ದೇಸಿಯಂ ಬುದನನ ವಸ್ತು ವಿದ್ಯೆಯೆನೆ ಕಬ್ಬಮೆ ಮುನ್ನಮವಂತಿವಲ್ಲದ | ಲ್ಲದೆ ಪಡೆವಿಲ್ಲ ಕಬ್ಬಮನೆ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮ ಮೃದುವು ಸಮಸ್ತಭಾರತಮುಮಾದಿಪುರಾಣಮಹಾಪ್ರಬಂಧಮುಂ ||
೫೮
RE
ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ ತಳಕೆ ಸಮಸ್ತ ಭಾರತಮುಮಾದಿಪುರಾಣಮುಮೆಂದು ಮೆಯ್ಯಸುಂ | ಗೊಳುತಿರೆ ಪೂಣ್ಣು ಪೂಣ್ಣ ತೆಂಬೊಂದಲದಿಂಗಳೊಳೊಂದು ಮೂರು ತಿಂ ಗಳೊಳೆ ಸಮಾಪ್ತಿಯಾದುದನೆ ಬಣ್ಣಿಸಿದಂ ಕವಿತಾಗುಣಾರ್ಣವಂ ||
20
ಕೃತಿಗೆ ಸಮಸ್ತ ಭಾರತಮುವಾದಿಪುರಾಣಮುಮಗಳೊಂದಳಂ ಕೃತಿಯವೊಲಿರ್ದುವೇಕಳೆಯ ಪೋದವರಾದವರೊಳ್ ಸರಸ್ವತೀ | ಮತಿ ಕವಿತಾಗುಣಕ್ಕೆ ಪದೆದೆಯವರ ಕವೀಂದ್ರರಾರ್ ಸರ ಸ್ವತಿಗೆ ವಿಳಾಸಮಂ ಪೊಸತು ಮಾಡುವ ಪಂಪನ ವಾಗ್ವಿಲಾಸಮಂ || ೬೧
೫೮. ಪಂಪನ ಕವಿತ್ವವು ಪ್ರಕಾಶಮಾನವಾದ ರಾಜನುಳ್ಳದ್ದು ಎಂದೆನಿಸಿದ ಪುಲಿಗೆರೆಯ ಸಹಜವಾದ ತಿರುಳುಕನ್ನಡದಲ್ಲಿ ಋಜುವಾದ ಕಾವ್ಯಮಾರ್ಗದಲ್ಲಿ ಶಕ್ತಿಯುಕ್ತವಾಗಿಯೂ ಇಂಪಾಗಿಯೂ ಇರುವಂತೆ ರಚಿತವಾಗಿದೆ. ೫೯, ಕೂಡಿಕೊಂಡಿರುವ ಯಶಸ್ಸು ವ್ಯಾಪ್ತವಾದ ಓಜಸ್ಸು ಅಥವಾ ಕಾಂತಿ, ಸೇರಿಕೊಂಡಿರುವ ಅಲಂಕಾರ, ದೇಸಿ ರಚನೆಯೆಂಬುದನ್ನೇ ಪ್ರಧಾನವಸ್ತುಗಳನ್ನಾಗಿ ಉಳ್ಳ ಕಾವ್ಯಗಳು ವಿದ್ಯೆಗಿಂತ ಮಾನ್ಯವಾದುವು. ಅವಲ್ಲದವು ಕಾವ್ಯವೇ ಅಲ್ಲ. ಈ ಭಾರತವೂ ಆದಿಪುರಾಣವೂ ಅವುಗಳ ಹಾಗಿರದೆ ಮೇಲೆ ಹೇಳಿದ ಗುಣಗಳಲ್ಲದೆ ಬೇರೆಯಲ್ಲ ಎಂದೆನಿಸಿಕೊಂಡು ಪ್ರಾಚೀನಕಾವ್ಯಗಳನ್ನೆಲ್ಲ ಪರಾಜಿತವನ್ನಾಗಿ (ಹೊಡೆದು ಹಾಕಿದುವು ಮಾಡಿದುವು. ೬೦. ಇಲ್ಲಿ ವಿಕ್ರಮಾರ್ಜುನವಿಜಯ ಅಥವಾ ಭಾರತದಲ್ಲಿ ಸಮಸ್ತಭೂಮಂಡಲಕ್ಕೆ ಲೋಕವ್ಯವಹಾರವನ್ನೂ ಅಲ್ಲಿ ಆ ಆದಿಪುರಾಣದಲ್ಲಿ ಜಿನಾಗಮವನ್ನೂ ಪ್ರಕಾಶಪಡಿಸುತ್ತೇನೆ. ಸಮಸ್ತಭಾರತವೂ ಆದಿಪುರಾಣವೂ ನನ್ನ ಶರೀರವನ್ನೂ ಪ್ರಾಣವನ್ನೂ ಆಕ್ರಮಿಸಿಕೊಂಡಿರಲು ಪ್ರತಿಜ್ಞೆಮಾಡಿ ಆ ಪ್ರತಿಜ್ಞೆ ಮಾಡಿದ ರೀತಿಯಲ್ಲಿಯೇ ಒಂದು (ಭಾರತವು ಆರು ತಿಂಗಳಲ್ಲಿಯೂ ಮತ್ತೊಂದು (ಆದಿಪುರಾಣವು) ಮೂರುತಿಂಗಳಲ್ಲಿಯೂ ಪೂರ್ಣವಾಯಿತು ಎನ್ನುವ ಹಾಗೆ ಕವಿತಾಗುಣಾರ್ಣವನಾದ ಪಂಪನು ವರ್ಣಿಸಿದನು. ೬೧. ಸಮಸ್ತ ಭಾರತವೂ ಆದಿಪುರಾಣವೂ ಲೋಕಕ್ಕೆ ಈಗ ಒಂದು ಅಲಂಕಾರದಂತಿದೆ. ಏಕೆ ಗೊತ್ತಿದೆಯೇ? ಹಿಂದೆ ಆಗಿಹೋದವರಲ್ಲಿಯೂ ಈಗ ಆಗಿರುವವರಲ್ಲಿಯೂ ಸರಸ್ವತೀಮತಿಯಾಗಿ