________________
೪೪.
೪
.
೭೦೦) ಪಂಪಭಾರತಂ
ನಯಶಾಲಿ ವತ್ಸ ಗೋತ್ರ ಶ್ರಯಣೀಯನನೇಕ ಸಕಳ ಶಾಸ್ತ್ರಾರ್ಥ ವಿನಿ | : ಶೃಯ ಮತಿ ಕೃತಿ ಮಾಧವ ಸೋ
ಮಯಾಜಿ ಸಲೆ ನೆಗಟ್ಟಿನಾಸಮುದ್ರಂಬರೆಗಂ || ಉ|| ಶಕ ಶಶಾಂಕ ಸೂರ್ಯ ಪವಮಾನರುಮಾತನ ಹೋಮ ಮಂತ್ರ ಚ
ಕ ಕ್ರಮಕಕ್ಕಣಂ ಮಿಡುಕಲಾಗಡ ಶಾಪಮನೀಗುಮಂದ ದಿ| ಕಕ್ರಮುಮಂಜಿ ಬೆರ್ಚಿ ಬೆಸಕೆಯ್ಯುದದಲ್ಲದಗುರ್ವು ಪರ್ವ ಸ ರ್ವತುಯಾಜಿಯಾದನಳವಿಂತುಲು ಮಾಧವಸೋಮಯಾಜಿಯಾ | ೪೩ ಕಂ| ವರ ದಿಗ್ವನಿತೆಗೆ ಮಾಟದ
ಕುರುಳಾ ಭುವನಕಾಂಗಂ ದಲ್ ಕಂಠಾ | ಭರಣಮನೆ ಪರೆದ ತನ್ನ ಧರ ಧೂಮದ ಕರಿದು ಮಾಡಿದಂ ನಿಜಯಶಮಂ || ತತ್ತನಯನಖಿಳ ಕರಿ ತುರ ಗೋತ್ತಮ ಮಣಿ ಕನಕ ಸಾರ ವಸ್ತುವನೆರೆದ | ರ್ಗಿತ್ತು ಸಲ ನಗುನತಿ ಪುರು ಷೋತ್ತಮನಭಿಮಾನಚಂದ್ರನೆನಿಪಂ ಪಸರಿಂ || ಆತಂಗೆ ಭುವನ ಭವನ - ಖ್ಯಾತಂಗೆ ಸಮಸ್ತ ವೇದ ವೇದಾಂಗ ಸಮು | ಜ್ಯೋತಿತ ಮತಿಯುತನುಚಿತ ಪು ರಾತನ ಚರಿತಂ ತನೂಭವ ಕೊಮರಯ್ಯಂ |
೪೬ ಪುಣ್ಯವುಳ್ಳವನೂ ಆದ ೪೨. ವಿನಯಶಾಲಿಯೂ ವತ್ವಗೋತ್ರವನ್ನು ಆಶ್ರಯಿಸಿದವನೂ ಸಕಲ ಶಾಸ್ತ್ರಾರ್ಥಗಳಲ್ಲಿ ಸ್ಥಿರವಾದ ಪಾಂಡಿತ್ಯವುಳ್ಳವನೂ ಆದ ಮಾಧವ ಸೋಮಯಾಜಿಯೆಂಬುವನು ಸಮುದ್ರ ಕಡೆಯವರೆಗೂ ಬಹುಪ್ರಸಿದ್ಧನಾಗಿದ್ದನು. ೪೩. ಇಂದ್ರಚಂದ್ರ ಸೂರ್ಯವಾಯುದೇವತೆಗಳೂ ಆತನ ಹೋಮ ಮಂತ್ರ ಸಮೂಹಕ್ಕೆ ಸ್ವಲ್ಪವೂ ಅಡ್ಡಿ ಮಾಡುತ್ತಿರಲಿಲ್ಲ. ಮಾಡಿದರೆ ಶಾಪವನ್ನು ಕೊಡುತ್ತಾನೆಂದೇ ದಿಂಡಲಗಳೂ ಹೆದರಿ ಸೇವೆ ಮಾಡುತ್ತವೆ. ಅಲ್ಲದೆ ಅವನು ಸರ್ವಕ್ರತುಯೆಂಬ ಯಜ್ಞವನ್ನು ಮಾಡಿದವನು. ಮಾಧವ ಸೋಮಯಾಜಿಯ ಶಕ್ತಿಯಂತಹುದು. ೪೪. ಶ್ರೇಷ್ಠವಾದ ದಿಕ್ಕೆಂಬ ಸೀಗೆ ಕತ್ತಿನ ಆಭರಣವು ಎನ್ನುವ ಹಾಗೆ ವ್ಯಾಪಿಸಿರುವ ತನ್ನ ಯಜ್ಞಧೂಮದಿಂದ (ಹೊಗೆಯಿಂದ) ತನ್ನ ಯಶಸ್ಸನ್ನೂ ಕಪ್ಪಾಗಿ ಮಾಡಿಕೊಂಡನು. ೪೫. ಪುರುಷರಲ್ಲಿ ಅತಿಶ್ರೇಷ್ಠನಾದ ಅವನ ಮಗನಾದ ಅಭಿಮಾನಚಂದ್ರನೆಂಬ ಹೆಸರುಳ್ಳವನು ಬೇಡಿದವರಿಗೆ ತನ್ನ ಸಮಸ್ತ ಆನೆ ಕುದುರೆ ಉತ್ತಮ ರತ್ನ ಚಿನ್ನ ಮೊದಲಾದ ಉತ್ತಮ ವಸ್ತುಗಳನ್ನು ದಾನಮಾಡಿ ವಿಶೇಷ ಪ್ರಸಿದ್ಧನಾದನು. ೪೬. ಭೂಮಂಡಲದಲ್ಲಿ ಪ್ರಸಿದ್ಧನಾದ ಆತನಿಗೆ ಸಕಲ ವೇದಶಾಸ್ತ್ರಗಳಿಂದ ಪ್ರಕಾಶಿಸಲ್ಪಟ್ಟ ಬುದ್ದಿಯುಳ್ಳವನೂ ಉಚಿತವಾದ ಪ್ರಾಚೀನ ಆಚಾರಸಂಪನ್ನನಾದವನೂ