________________
೬೮೪ / ಪಂಪಭಾರತಂ ಕಂ
ಏಗೆಯುಮೆನ್ನ ಧರೆಯೊ
ರ್ವಾಗಮುಮಂ ನೀಮೆ ಬೆಸಸೆಯುಂ ಕುಡದಿನಿತಂ | ಮೇಗಿಲ್ಲದೆ ನೆಗಟ್ಟದಂ ನಾಗಧ್ವಜನಯ್ಯ ನೀಮದರ್ಕಬಲದಿರಿಂ ||
ಆತನೊಡವೋಯ್ತು ಪಗೆ ನಿಮ
ಗಾತನಿನಗ್ಗಳದ ಮಗನನಾಂ ನಖ ಮಾಂಸ | ಪ್ರೀತಿಯೊಳೆ ನಗನಿಂ ಪಡೆ ಮಾತೇಂ ಪಂಬಲಿಸದನ್ನ ಪೆಟ್ಟುದುಗೆಂ
ವ|| ಎಂಬುದುಂ ಧೃತರಾಷ್ಟ್ರನಿಂತೆಂದಂ
ಕಂ
ತನಯಶತಮಾದುದನ
ಗನಿವಾರಿತ ದುಃಖಶತಮೆ ತಾನಾದುದವಂ | ನೆನೆಯಂ ಸಂಸ್ಕಾರಿಸಲೀ
ವನಿತೆಯರ್ಗವರವರ ಪುರುಷರಂ ಕುಡವೇಂ ||
ల
ವ|| ಎಂಬುದುಮದಾವುದು ದೋಷಮವರ್ಗೆಲ್ಲಂ ಸಂಸ್ಕಾರವಿಧಿಯಂ ನಾನೆ ಪಕ್ಕದೊಳಿರ್ದು ಮಾಡಿಸುವೆನೆಂಬನ್ನೆಗಂ ಕೊಂತಿ ಬಂದು ಕರ್ಣನ ಕಳೇವರಮಂ ತಟ್ಟಿಸಿ ಕೊಂಡು ಪಾಂಡವರಯ್ಯರುಮನಲ್ಲಿಗೆ ಬರಿಸಿ
ಕಂ|| ನಿಮ್ಮಣ್ಣನನ್ನ ಪಿರಿಯ ಮ
2
ಗಮಾತೇಂ ಕರ್ಣನಾಂ ಮಹಾಪಾತಕಿಯೆಂ । ನಿಮ್ಮಯ ಮೋಹದಿನೀತಂ ಗಾಮಾಡಿದೆನಿನಿತನೆಂದು ಶೋಕಂಗೆಯ್ದಳ್ ||
ಧೃತರಾಷ್ಟ್ರನಿಗೂ ಗಾಂಧಾರಿಗೂ ಬಗ್ಗಿ ನಮಸ್ಕಾರಮಾಡಿ ೬. ಏನು ಮಾಡಿದರೂ ನನ್ನ ರಾಜ್ಯದ ಒಂದು ಭಾಗವನ್ನು ನೀವೆ ಹೇಳಿದರೂ ಕೊಡದೆ ಸ್ವಲ್ಪವೂ ಉತ್ತಮ ವಾಗಿಲ್ಲದ ರೀತಿಯಲ್ಲಿ ಇಷ್ಟನ್ನೂ ಮಾಡಿ ಸರ್ಪಧ್ವಜನಾದ ದುರ್ಯೋಧನನು ಸತ್ತನು. ನೀವು ಅದಕ್ಕಾಗಿ ದುಃಖಪಡಬೇಡಿ. ೭.ದ್ವೇಷವು ಆತನೊಡನೆಯೇ ಹೋಯಿತು. ನಾನು ಆತನಿಗಿಂತ ಉತ್ತಮನಾದ ಮಗನಾಗಿದ್ದೇನೆ. ಉಗುರುಮಾಂಸಗಳಿಗಿರುವಷ್ಟು ಬಹು ಅನ್ನೋನ್ಯವಾದ ಪ್ರೀತಿಯಿಂದಲೇ ನಡೆದುಕೊಳ್ಳುತ್ತೇನೆ. ಬೇರೆ ಮಾತೇನು? ಹಂಬಲಿಸದೆ ನಾನು ಹೇಳಿದುದನ್ನು ಮಾಡಿ ವ|| ಎನ್ನಲು ಧೃತರಾಷ್ಟ್ರನು ಹೀಗೆಂದನು. ೮. ನನಗೆ ನೂರುಮಕ್ಕಳಾಗಲಿಲ್ಲ. ತಡೆಯಲಾಗದ ನೂರು ದುಃಖಗಳೇ ತಾನಾದುವು. ಅವುಗಳನ್ನು ನೆನೆಯುವುದಿಲ್ಲ; ಈ ಸ್ತ್ರೀಯರು ಅವರವರ ಪತಿದೇಹಗಳನ್ನು ಶವಸಂಸ್ಕಾರ ಮಾಡಲು ಅವರಿಗೆ ಕೊಡಬೇಕು. ವll ಎನ್ನುವಷ್ಟರಲ್ಲಿ ದೋಷವೇನಿದೆ? ಅವರುಗಳ ಸಂಸ್ಕಾರವಿಧಿಯನ್ನೆಲ್ಲ ನಾನೇ ಪಕ್ಕದಲ್ಲಿದ್ದು ಮಾಡಿಸುತ್ತೇನೆ ಎನ್ನುವಷ್ಟರಲ್ಲಿ ಕುಂತೀದೇವಿಯು ಬಂದು ಕರ್ಣನ ಹೆಣವನ್ನು ತಬ್ಬಿಕೊಂಡು ಪಾಂಡವರೆದುಜನವನ್ನೂ ಅಲ್ಲಿಗೆ ಬರಮಾಡಿದಳು. ೯. ಕರ್ಣನು ನಿಮ್ಮಣ್ಣ, ನನ್ನ ಹಿರಿಯ ಮಗ, ಹೇಳುವುದೇನು ? ನಾನು ಮಹಾಪಾತಕಿ, ನಿಮ್ಮ ಮೇಲಿನ (ಮೋಹದಿಂದ) ಈತನಿಗೆ ಇಷ್ಟನ್ನೂ ನಾನೇ ಮಾಡಿದೆನು ಎಂದು ದುಃಖಿಸಿದಳು