________________
ಚತುರ್ದಶಾಶ್ವಾಸಂ
ಕಂ|| ಶ್ರೀ ರಾಮಾಲಿಂಗಿತ ವಿಪು
ಘೋರಸ್ಕಂ ಭಾಸ್ಕರಪ್ರತಾಪಂ ನಿಜ ದೋ | ರ್ಮರು ಮಥಿತಾರಿ ಬಳ ಕೂ ಪಾರಂ ಸಂಹಾರಿತಾರಿ ಶೌರ್ಯಂ ಹರಿಗಂ || ತನ್ನಿಳಿದು ಗಲ್ಲ ಕೊಳುಗುಳ ವನ್ನೋಡಲ್ ಚಕ್ರಪಾಣಿಯು ತನ್ನ ಸಹೋ | ತನ್ನರುಮೊಡವರೆ ಬಂದು ವಿ
ಪನ್ಫೋಗ್ರಾರಾತಿವರ್ಗನಾಹವಧರೆಯಂ | ವಗ ಎಯ್ತಿ ತನ್ನಿಂದಮಂತಕಾನನಮನೆಯಿದ ಮಹಾ ಪ್ರಚಂಡಮಂಡಳಿಕಮಕುಟ ಬದ್ದಸಾಮಂತಮಹಾಸಾಮಂತಸಂಹತಿಯುಮನಣಿಕೆಗಟಿದ ಕರಿತುರಗವರೂಥ ಪದಾತಿಗಳುಮಂ ನೋಡಿ ಮುರಾರಿಯ ಮೊಗಮಂ ನೋಡಯಧೋಕ್ಷಜನಜಾತಶತ್ರುವನಿಂತೆಂದಂಉl ಶಾತ ಶರಾಗಿ ಭಗ್ನ ಭಟ ಕೋಟಿ ವಿಭೀಷಣಮುಗ್ರವೈರಿಸಂ
ಘಾತಕರೀಂದ್ರರುಂದ್ರಕಟಕೂಟಪರಿಚ್ಚುತಭಂಗಮಾಳಿಕಾ | ಪೀತಮದಾಂಬುಕಂ ಪ್ರಕೃತಿರಕ್ತಜಳಾಸವಮತ್ತಯೋಗಿನೀ ವಾತಪರೀತಭೂತಸದನಂ ಕದನಂ ಕದನತ್ರಿಣೇತ್ರನಾ |
೧. ಸಂಪಲ್ಲಕ್ಕಿಯಿಂದ ಆಲಿಂಗಿಸಲ್ಪಟ್ಟ ವಿಸ್ತಾರವಾದ ಎದೆಯುಳ್ಳವನೂ ಸೂರ್ಯನ ತೇಜಸ್ಸುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ಶತ್ರುಗಳನ್ನು ಕೊಂದ ಶೌರ್ಯವುಳ್ಳವನೂ ಆದ ಅರಿಕೇಸರಿಯು (ಅರ್ಜುನನು) ೨. ತಾನು ಯುದ್ಧಮಾಡಿ ಗೆದ್ದ ಯುದ್ಧಭೂಮಿಯನ್ನು ನೋಡಲು ಕೃಷ್ಣನೂ ತನ್ನ ಸಹೋದರರೂ ಜೊತೆಯಲ್ಲಿ ಬರಲು ನಾಶಮಾಡಲ್ಪಟ್ಟ ಭಯಂಕರವಾದ ಶತ್ರುಗಳನ್ನು ಧರ್ಮರಾಯನೂ ಯುದ್ಧಭೂಮಿಯನ್ನು ಬಂದು ಸೇರಿದನು. ವ|| ತನ್ನಿಂದ ಯಮನ ಬಾಯನ್ನು ಸೇರಿದ ಮಹಾಶೂರರಾದ ಮಂಡಳಿಕ, ಮಕುಟಬದ್ದ ಸಾಮಂತಮಹಾಸಾಮಂತಸಮೂಹವನ್ನು ಎಣಿಕೆಯನ್ನು ಮೀರಿದ ಅಸಂಖ್ಯಾತವಾದ ಆನೆ, ಕುದುರೆ, ತೇರು, ಕಾಲಾಳು ಸೈನ್ಯವನ್ನು ನೋಡಿ ಕೃಷ್ಣನ ಮುಖವನ್ನು ನೋಡಲು ಕೃಷ್ಣನು ಧರ್ಮರಾಯನನ್ನು ಕುರಿತು ಹೀಗೆಂದನು. ೩. ಹರಿತವಾದ ಬಾಣಗಳ ಬೆಂಕಿಯಿಂದ ಹಾಳಾದ ಅನೇಕ ಯೋಧರಿಂದ ಭಯಂಕರವಾದುದೂ ಭಯಂಕರವಾದ ಶತ್ರುಗಳ ಸಮೂಹಗಳಿಂದಲೂ ಆನೆಗಳ ವಿಸ್ತಾರವಾದ ಕಪೋಲದ ಕಡೆಯಿಂದ ಹರಿಯುತ್ತಿರುವ ಮದೋದಕವನ್ನು ಕುಡಿಯುತ್ತಿರುವ ದುಂಬಿಗಳ ಸಮೂಹಗಳಿಂದಲೂ, ಸಹಜವಾಗಿ ರಕ್ತಜಲವೆಂಬ ಮದ್ಯದಿಂದ ಸೊಕ್ಕಿರುವ ಯೋಗಿನೀಜನಗಳ ಗುಂಪಿನಿಂದಲೂ ಸುತ್ತುವರಿಯಲ್ಪಟ್ಟು