________________
.: ಉಪೋದ್ಘಾತ | ೬೩ ಕೆಡದಂತೆ ಅಂಗೋಪಾಂಗಗಳನ್ನು ಹೊಂದಿಕೆಗೊಳಿಸುವ ಚತುರತೆಯೂ ಪಾತ್ರಗಳಿಗೆ ಜೀವಕಳೆಯನ್ನು ತುಂಬಿ ಮೈವೆತ್ತು ಎದುರಿಗೆ ನಿಲ್ಲುವಂತೆ ಮಾಡುವ ರಚನಾಚಮತ್ಕಾರವೂ, ಅನೌಚಿತ್ಯಗಳನ್ನು ತಕ್ಕಂತೆ ಮಾರ್ಪಡಿಸಿ ಸಹಜಗೊಳಿಸುವ ಶಕ್ತಿಯೂ, ಪ್ರಾಚೀನಕಾವ್ಯಗಳಲ್ಲಿ ದೊರೆಯುವ ಸಾರವಾದ ಆಶಯಗಳನ್ನು ಆರಿಸಿ ತೆಗೆದು ತಕ್ಕಂತೆ ಮಾರ್ಪಡಿಸಿ ಸೇರಿಸಿಕೊಳ್ಳುವ ಪ್ರಜ್ಞಾವೈಭವವೂ, ಅಭಿಪ್ರಾಯವು ಥಟ್ಟನೆ ಮನಸ್ಸಿಗೆ ಹಿಡಿಯುವಂತೆ ಮಾಡುವ ಸಾಮರ್ಥ್ಯವೂ, ಸನ್ನಿವೇಶಕ್ಕೊಪ್ಪುವಂತೆಯೂ ಮಿತಿಮೀರದಂತೆಯೂ ಓದುಗರಲ್ಲಿ ನಿರ್ಮಲಭಕ್ತಿ ಮೂಡುವಂತೆಯೂ ಮಾಡುವ ಸ್ತೋತ್ರಪಾಠಗಳ ಗಾಂಭೀರ್ಯವೂ, ಬಳಕೆಯಲ್ಲಿರುವ ಗಾದೆಗಳನ್ನು ಒಪ್ಪುವಂತೆ ಅಲ್ಲಲ್ಲಿ ಪ್ರಯೋಗಿಸುವ ಔಚಿತ್ಯವೂ, ಅನೇಕ ವಾಕ್ಯಗಳಲ್ಲಿ ಹೇಳಬೇಕಾದ ವಿಷಯವನ್ನು ಕೆಲವೇ ಮಾತುಗಳಲ್ಲಿ ಅಡಗಿಸಿ ಅರ್ಥವಾಗುವಂತೆ ಅಂದವಾಗಿ ಹೇಳುವ ನೈಪುಣ್ಯವೂ, ಬಹುಪದ ಪ್ರಯೋಗದಕ್ಷತೆಯೂ, ಶೈಲಿಯ ಸರಳತೆಯೂ, ಬಂಧದ ಬಿಕ್ಕಟ್ಟೋ, ವರ್ಣನೆಗಳ ರಮ್ಯತೆಯೂ, ಅಲಂಕಾರಗಳ ಸಹಜಭಾವವೂ ಕಾವ್ಯಾಂಗಗಳಾದ ಇತರ ಸದ್ಭಾವಗಳ ರಚನವಿಚಕ್ಷಣತೆಯೂ ಈ ಕವಿಯನ್ನು 'ಕರ್ಣಾಟಕ ಕವಿತಾ ಸಾರ್ವಭೌಮನನ್ನಾಗಿ ಮಾಡಿರುವುವು' (ಪಂಪಭಾರತದ ಉಪೋದ್ಘಾತ, ಕರ್ಣಾಟಕ ಸಾಹಿತ್ಯಪರಿಷತ್ತಿನ ಪ್ರಕಟಣೆ ೧೯೩೧)
“ಛಂದಸ್ಸಿನ ವಿಚಾರ :- ಉಭಯಭಾಷಾಪಂಡಿತನಾದ ಪಂಪನು ತನ್ನ ಎರಡು ಕಾವ್ಯಗಳಲ್ಲಿ ವಿವಿಧ ಜಾತಿಯ ಕನ್ನಡ ಸಂಸ್ಕೃತ ಛಂದಸ್ಸುಗಳನ್ನು ಉಪಯೋಗಿಸಿದ್ದಾನೆ. ಅವುಗಳಲ್ಲಿ ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡಿರುವ ಸಂಸ್ಕೃತದ ಆರ್ಯಾ ಪ್ರಾಕೃತದ ಸ್ಕಂದಕಕ್ಕೆ ಹೊಂದಿಕೊಂಡಿರುವ ಕಂದಪದ್ಯಗಳೇ ಹೆಚ್ಚಿನ ಭಾಗದವು. ಪಂಪಭಾರತದ ೧೬೦೭ ಮತ್ತು ಆದಿಪುರಾಣದ ೧೬೩೦ ಪದ್ಯಗಳಲ್ಲಿ ಕ್ರಮವಾಗಿ ಅವು ೭೩೦ ಮತ್ತು ೯೫೦ ಆಗಿರುತ್ತವೆ. ಅವುಗಳನ್ನು ಬಿಟ್ಟರೆ ಕನ್ನಡದಲ್ಲಿ ಸುಪ್ರಸಿದ್ಧವಾದ ಆರು ಸಂಸ್ಕೃತವೃತ್ತಗಳಾದ ಉತ್ಪಲಮಾಲೆ, ಶಾರ್ದೂಲ, ಸ್ರಗ್ಧರೆ ಮತ್ತು ಅವುಗಳ ಮಾರ್ಪಾಟೇ ಆಗಿರುವ ಚಂಪಕಮಾಲಾ, ಮತ್ತೇಭವಿಕ್ರೀಡಿತ ಮಹಾಸ್ರಗ್ಧರೆಗಳು ಪ್ರಧಾನಸ್ಥಾನವನ್ನು ಪಡೆದಿರುತ್ತವೆ. ಇವುಗಳಲ್ಲಿಯೂ ಚಂಪಕಮಾಲೆಗೆ ಅಗ್ರಸ್ಥಾನ. ಪಂಪಭಾರತದಲ್ಲಿಯೇ ಸುಮಾರು ೪೧೦ ಸಂಖ್ಯಾಕವಾಗಿವೆ. ಅವುಗಳಲ್ಲರ್ಧ ಮತ್ತೇಭವಿಕ್ರೀಡಿತವೂ ಅದರಲ್ಲರ್ಧ, ಉತ್ಪಲಮಾಲೆಯೂ ಇವೆ. ಈ ಸುಪ್ರಸಿದ್ಧವಾದ ಆರು ವೃತ್ತಗಳಲ್ಲದೆ ಪೃಥ್ವಿ, ತರಳ, ಹರಿಣ, ಮಲ್ಲಿಕಾಮಾಲೆ, ಖಚರಪುತ, ಅನವದ್ಯ ಮೊದಲಾದ ವೃತ್ತಗಳು ಉಪಯುಕ್ತವಾಗಿವೆ. ಅಪರೂಪವಾಗಿ ಮಂದಾಕ್ರಾಂತ, ಅನುಷ್ಟುಪ್, ಪುಷ್ಟಿತಾಗ್ರಗಳನ್ನು ಕವಿಯು ಉಪಯೋಗಿಸಿದ್ದಾನೆ.
- ಕನ್ನಡ ಅಂಶಛಂದಸ್ಸಾದ ಅಕ್ಕರ ಮತ್ತು ಪಿರಿಯಕ್ಕರಗಳನ್ನು ಯಶಸ್ವಿಯಾಗಿ ಬಳಸಿದ್ದಾನೆ. ಆದರೆ ಇವುಗಳಿಗೆ ವಿಶೇಷ ವ್ಯತ್ಯಾಸ ಕಾಣುವುದಿಲ್ಲ. ಮೂರು ರೀತಿಯ, ರಗಳೆಗಳೂ ಇಲ್ಲಿ ಪ್ರಯೋಗವಾಗಿವೆ. ತ್ರಿಪದಿಯು ಬಹು ಅಪರೂಪವಾಗಿ