________________
೬೭
೬೬೨/ ಪಂಪಭಾರತ
ವ|| ಎಂದಾದಿ ಮಧ್ಯಾವಸಾನದೂಳಯುಮಬಿಲದ ಕಲಿತನದಳವಿಂಗೆ ಮನಂಗೊಂಡು ಮಗನೆ ನಿನಗಪ್ರೊಡೆ ದೆಯ್ಯಂ ಪ್ರತಿಕೂಲಮಂತುಂ ಕಾದಿ ಗೆಲಲಾರ್ಪೆಯಲ್ಲಿ ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ ನಿನ್ನೊಂದ ಮೆಯೊಳಾದ ಕೂರ್ಪು ಪಗೆವರ ದರ್ಪಮನದಿರ್ಪದಲ್ಲಿ ನಿನಗಂ ಮೃತೇಯರ್ ಕೊಟ್ಟೂರುಭಂಗಶಾಪಮನಿವಾರಿತಮೆ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮುಮನದು ಬಲೆಯಂ ನಿನ್ನ ನೆಗಟ್ಟುದಂ ನೆಗಟ್ಟುದೆಂದುಚಂ ಪರಿಕಿಪುದೊಂದಲೆಂದೆರಡನೋತೊಳಕೊಳ್ಳುದು ಮೂಅಂದೆ ನಾ
ಅರಿದಣಿದಯಳಂದ ನೆಜ್ ಕಲ್ವುದು ನಿರ್ಣಯಮಾಗಿರಾಲಿಯೊಳ್ || ಪರಿಣತನಪ್ಪುದೇಬಿಳಮೊಂದದೆ ನಿಲ್ವುದು ದುರ್ವಿಮಂತ್ರಮಂ
ಪರೆಪ ಟಮಾಳಮಂ ಪಿರಿದನೋದಿದೊಡಪ್ಪ ಪದಾರ್ಥಮಾವುದೋ || ೬೬ ಕಂ! ಪರ್ಚುಗೆ ಭರತಕುಲಂ ನೆಲೆ
ವರ್ಚುಗೆ ನಿಮ್ಮೆರಡು ತಂಡಮೊದವಿದ ನಳೊಂ | ಕರ್ಚುಗ ಕಲುಷಂ ನೀಂ ತಲೆ
ಯುರ್ಚದಿರೆನ್ನಂದ ನುಡಿಗೆ ಕುರುಕುಳತಿಳಕಾ || . ಬಂದೆ ಎಂದನು. ಭೀಷ್ಮನು ಚಕ್ರವರ್ತಿಯಾದ ದುರ್ಯೊಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು. ವ ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ ಸಂತೋಷಪಟ್ಟು (ದುರ್ಯೊಧನನನ್ನು ಕುರಿತು) 'ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ; ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ ಶತ್ರುಗಳ ದರ್ಪವನ್ನು ನಡುಗಿಸಲಾರದು. ನಿನಗೂ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು. ನನ್ನ ಪ್ರಾಣವು ಇರುವಾಗಲೇ ಸಂಧಿಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ ಮುಂದೆ ಕಾಲವನ್ನೂ ಕಾರ್ಯವನ್ನೂ ತಿಳಿದು ಬಳಿಕ ನೀನು ಮಾಡುವುದನ್ನು ಮಾಡು ಎಂದರು. ೬೬. ಒಂದಾದ ಬುದ್ದಿಯಿಂದ ಎರಡಾದ ಕಾರ್ಯಾಕಾರ್ಯಗಳನ್ನು ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು. ಶತ್ರುಮಿತ್ರಬಾಂಧವ (ಉದಾಸೀನರೆಂಬ ಮೂವರನ್ನು ಒಲಿಸಿ ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು. ರಾಜಯೋಗ್ಯವಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದೈಧೀಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು. ದೂತಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು. ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು ? ೬೭. ಭರತಕುಲ (ವಂಶ) ಅಭಿವೃದ್ದಿಯಾಗಲಿ; ನಿಮ್ಮ ಎರಡು ಗುಂಪಿನ ಸ್ನೇಹವು ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ, ನಿಮ್ಮ ದ್ವೇಷವು ತೊಳೆದುಹೋಗಲಿ;