________________
ತ್ರಯೋದಶಾಶ್ವಾಸಂ | ೬೫೧ ತರಳ | ನಿಜಕುಲೋಚಿತವೃತ್ತಿಯಂ ಬಗೆಯಿಂ ಮಹಾರಥರಿ ಮಹೀ
ಭುಜರ ಮಕ್ಕಳಿರೆಂದು ನಂಬಿದನಿಂತು ನಣ್ಣನೆ ವೈರಿ ಭೂ || ಭುಜರೊಳುಂಟೊಡತಾಗಿ ಮಾಲ್ಕುದನೀಗಳಾನಂದಂ ಫಣಿ
ಧ್ವಜನನಪ್ಪನೆ ನಿಮ್ಮನ್ನೆಗೆಂದೊಡೀ ರಣರಂಗದೊಳ್ || ಉll ಕಾದುವ ಮಾಲಿಯಲ್ಲವಿದು ಕೆಮ್ಮನೆ ನನೆ ಮೇಳಗಾಳೆಗಂ
ಗಾದುವ ಮಾಲ್ ಸಿಂಧು ಘಟ ಸೂತ ಸುತರ್ಕಳಿನಾಗದೊಂದು ರಾ | ಜ್ಯೋದಯವಮ್ಮ ನಿಮ್ಮ ಬಲದಿಂದೆನಗುದೆ ಮದ್ವಿರೋಧಿಯಂ
ಛೇದಿಸಲಾನೆ ಸಾಲ್ವೆನಿರಿಮನ್ನೆಗಮಿಾ ರಣರಂಗಭೂಮಿಯೊಳ್ | ೪೩
ವll ಎಂದು ದುರ್ಯೋಧನನವರ ಕಾಳೆಗಮಂ ಮಾತಿನೊಳ್ ಕಳೆದು ವರೂಥದಿಂ ಬೀಡಿಂಗೆ ಪೋದನಾಗಳ್ ಶಲ್ಯಂ ರಾಜರಾಜಂ ತನ್ನಂ ಮೂದಲಿಸಿ ನುಡಿದುದರ್ಕೆ ಮನದೊಳೇವಯಿಸಿಚಂ|| ಇನಿತುವರಂ ಪರಾಭವಮಿಳೇಶನಿನಿನ್ನನಗಾದುದಿಂ ಸಿಡಿ
ಲೈನ ರಿಪುಸೇನೆಯ ತುಟಿದು ತೊಟ್ಟುಮಾಡುವನೆಂದಗುರ್ವಿನು | ರ್ವಿನ ಶರಸಂಕುಲಂಗಳೊಳೆ ಪೂಳ್ಳೂಡ ಪಾಂಡವಸೈನ್ಯಮಾತನಂ ಬಿನ ಮೊನೆಯೊಳ್ ಸುರುಳುರುಳಿಗೊಂಡುದು ಶಲ್ಯನಿದೇಂ ಪ್ರತಾಪಿಯೋ ೪೪
ವ|| ಅಂತು ಮದ್ರರಾಜಂ ಪಾಂಡವಪತಾಕಿನಿಯೊಂದಕ್ಕೂಹಿಣಿಬಲಮಂ ಕೊಂದು ದ್ರುಪದನ ಮಕ್ಕಳಯ್ಯರುಮನಾತನ ತಮ್ಮಂದಿರಿರ್ಪತ್ಯಯ್ಯರುಮಂ ಶಕಟ ವಿಕಟರ್ ಮೊದಲಾಗೆ ೪೨. ನಿಮ್ಮ ಕುಲಕ್ಕೆ ಯೋಗ್ಯವಾದ ವರ್ತನೆಯನ್ನು ಯೋಚಿಸಿ ಮಹಾರಥರಾಗಿದ್ದೀರಿ ರಾಜರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ನಂಬಿದೆನು ಶತ್ರುರಾಜರುಗಳಲ್ಲಿ ಸ್ನೇಹವುಳ್ಳವರಾಗಿ ನಡೆದುಕೊಳ್ಳುವುದನ್ನು ಈಗ ನಾನು ತಿಳಿದೆನು. ಇನ್ನು ಮೇಲೆ ಯುದ್ಧರಂಗದಲ್ಲಿ ನಿಮ್ಮನ್ನು ನನ್ನವರೆಂದು ಭಾವಿಸಿದರೆ ಫಣಿ (ಸರ್ಪ)ಧ್ವಜನೇ ಅಲ್ಲ. (ದುರ್ಯೋಧನನೆನಿಸಿಕೊಳ್ಳುತ್ತೇನೆಯೇ?) ೪೩. ಇದು ಯುದ್ದಮಾಡುವ ರೀತಿಯಲ್ಲ; ಇದು ಸ್ನೇಹದಿಂದ ಪ್ರೇಮಕಲಹವಾಡುವ ರೀತಿ, ಭೀಷ್ಮ ದ್ರೋಣ ಕರ್ಣರಿಂದ ಆಗದ ಒಂದು ರಾಜ್ಯಲಾಭ ನಿಮ್ಮ ಬಲದಿಂದ ನನಗಾಗುತ್ತದೆಯೇ. ನನ್ನ ವಿರೋಧಿಯನ್ನು ಮುರಿಯಲು ನಾನೇ ಶಕ್ತನಾಗಿದ್ದೇನೆ. ಅಲ್ಲಿಯವರೆಗೆ ಈ ಯುದ್ಧಭೂಮಿಯಲ್ಲಿ ಇರಿ, ವರ ಎಂದು ದುರ್ಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರೆದು ತೇರಿನಲ್ಲಿ ಬೀಡಿಗೆ ಹೋದನು. ಆಗ ಶಲ್ಯನು ಚಕ್ರವರ್ತಿಯಾದ ದುರ್ಯೋಧನನು ತನ್ನನ್ನು ಮೂದಲಿಸಿ ನುಡಿದುದಕ್ಕೆ ಮನಸ್ಸಿನಲ್ಲಿ ದುಃಖಪಟ್ಟು-೪೪. ರಾಜನಾದ ದುರ್ಯೋಧನನಿಂದ ಇಷ್ಟರ ಮಟ್ಟಿಗೆ ಅವಮಾನವು ನನಗಾಯಿತು. ಇನ್ನು ಸಿಡಿದುಹೋಗುತ್ತೇನೆ, ಶತ್ರುಸೈನ್ಯವನ್ನು ತುಳಿದು ಅಜ್ಜಿಗುಜ್ಜಿಮಾಡುತ್ತೇನೆ ಎಂದು ಅತ್ಯಂತ ಭಯಂಕರವಾದ ಬಾಣಸಮೂಹದಿಂದಲೇ ಅವರನ್ನು ಹೂಳಲು ಪಾಂಡವಸೈನ್ಯವು ಆತನ ಬಾಣಗಳ ತುದಿಯಲ್ಲಿ ಸುರುಟಿಕೊಂಡು ರಾಶಿಯಾಗಿ ಹೋಯಿತು. ಶಲ್ಯನು ಇನ್ನಷ್ಟು ಪ್ರತಾಪಶಾಲಿಯೋ! ವll ಹಾಗೆ ಶಲ್ಯನು