________________
ತ್ರಯೋದಶಾಶ್ವಾಸಂ | ೬೩೭ ಚಂth ಒಡಲೆರಡೊಂದೆ ಜೀವಮಿವರ್ಗಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಯಾಯ್ತು ನಿನ್ನಸು ಕಿರೀಟಿಯ ಶಾತಶರಂಗಳಿಂದ ಪೋ | ಪೊಡಮನಗಿನ್ನುಮಿಯೊಡಲೊಳಿರ್ದುದು ನಾಣಿಲಿ ಜೀವಮಂದೂಡಾ
ವೆಡೆಯೊಳೆ ನಿನ್ನೊಳನ್ನ ಕಡುಗೂರ್ಮೆಯುಮಟ್ಕಲುಮಂಗವಲ್ಲಭಾ || ೪ ಮll ಅಡಿಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನಾ
ನವಂ ಮುನ್ನಡೆದಿರ್ದುಮೆನ್ನರಸನಾನೇಕಿತ್ತೆನಿಲ್ಲೇಕೆ ಪೇ ಬಲಿಪಿಲೆನುಮಿಲ ಕಾರ್ಯವಶದಿಂ ಕೂರ್ಪಂತವೂಲ್ ನಿನನಾಂ
ನೆತ ಕೊಂದಂ ಮುಳಿಸಿಂದಮಂಗನೃಪತೀ ಕೌಂತೇಯರೇಂ ಕೊಂದರೇ ೫ ಚಂ! ಉದಧಿತರಂಗತಾಟತಧರಾತಳಮಂ ನಿನಗಿತ್ತು ನಿನ್ನ ಕೊ
ಟ್ಟುದನೆ ಪಸಾದವೆಂದು ಪೊಡೆವಟ್ಟು ಮನೋಮುದದಿಂದ ಕೊಂಡು ಬಾ | ಊದುವ ಬಯಕ್ಕೆ ಮುಂ ನಿನಗದರ ಕಿಡಿಪಂದಲೆ ಕರ್ಣ ಕೇತುವಾ ದುದು ನಿನಗಾ ವೃಕೋದರನ ಕಾಯ್ಕನೆ ಪೊತ್ತಿಸಿದನ್ನ ಕಾಳಗಂ ೬
ವ|| ಎಂದು ಕರ್ಣನೊಳಾದ ಶೋಕಾನಲನೊಳ್ ಬಾಯಟಿದು ಮಣಿದು ಪಳಯಿಸುವ ನಿಜತನೂಜನ ಶೋಕಮನಾಳಸಲೆಂದು ಧೃತರಾಷ್ಟ್ರನುಂ ಗಾಂಧಾರಿಯುಂ ಬರವರೆ ಬರವಂ ಗಂಟಲೊಳ್ ಕಂಡು ದುಶ್ಯಾಸನನ ಸಾವು ನೆನೆದು ತಾಯ್ತಂದೆಯ ಮೊಗಮಂ ನೋಡಲ್ ನಾಣ್ಯ
ಜೀವನವನ್ನು ಬಾಳಬಲ್ಲೆನೆ ? ೪. ದುರ್ಯೊಧನ ಕರ್ಣರಲ್ಲಿ ಎರಡು ಶರೀರ ಒಂದು ಪ್ರಾಣ ಎಂದು ಲೋಕವು ಹೇಳುತ್ತಿದ್ದಿತು. ಈಗ ಆ ಮಾತು ಸುಳ್ಳಾಯಿತು, ನಿನ್ನ ಪ್ರಾಣವು ಅರ್ಜುನನ ಹರಿತವಾದ ಬಾಣಗಳಿಂದ ಹೋದರೂ ನನ್ನ ನಾಚಿಕೆಯಿಲ್ಲದ ಜೀವವು ಇನ್ನೂ ಶರೀರದಲ್ಲಿದೆ ಎಂದರೆ ಕರ್ಣ ನಿನ್ನ ನನ್ನ ಅತಿಶಯವಾದ ಪ್ರೀತಿಯೂ ಸ್ನೇಹವೂ ಆವೆಡೆಯಲ್ಲಿದೆ? ೫. ಧರ್ಮರಾಯನು ನೀನು ಅವನ ಜೊತೆಯಲ್ಲಿ ಹುಟ್ಟಿದವನೆಂಬುದನ್ನು ತಿಳಿಯನು. ಸಹಜವಾಗಿಯೇ ನೀನು ಯಾರೆಂಬುದನ್ನು ನಾನು ಬಲ್ಲೆ: ಮೊದಲು ತಿಳಿದಿದ್ದರೂ ನನ್ನ ದೊರೆತನವನ್ನು ನಾನು ನಿನಗೇಕೆ ಕೊಡಲಿಲ್ಲ ? ನಿನಗೆ ತಿಳಿಯಪಡಿಸುವುದಕ್ಕೂ ಇಷ್ಟಪಡಲಿಲ್ಲ? ಸ್ವಕಾರ್ಯಸಾಧನೆಗಾಗಿ ಪ್ರೀತಿಸುವ ಹಾಗೆ (ನಟಿಸಿ) ಪಾಂಡವರ ಮೇಲಿನ ಕೋಪದಿಂದ ನಿನ್ನನ್ನು ನಾನೇ ಕೊಂದೆನು. ಪಾಂಡವರು ನಿನ್ನನ್ನು ಕೊಂದರೇನು ? ೬. ಸಮುದ್ರದ ಅಲೆಗಳ ಹೊಡೆತವುಳ್ಳ ಈ ಭೂಮಂಡಲವನ್ನು ನಿನಗೆ ಕೊಟ್ಟು ನೀನು ಕೊಟ್ಟುದನ್ನೇ ಪ್ರಸಾದವೆಂದು ನಮಸ್ಕರಿಸಿ ಮನಸ್ಸಂತೋಷದಿಂದ ಸ್ವೀಕರಿಸಿ ಬಾಳಬೇಕೆಂಬುದೇ ನನ್ನ ಮೊದಲಿನ ಆಸೆ. ನನಗೆ ಅದನ್ನು ಕೆಡಿಸಬೇಕೆಂದೇ ಭೀಮನ ಕೋಪವನ್ನು ಹೆಚ್ಚಿಸಿದ ನನ್ನ ಯುದ್ಧವು ನಿನಗೆ (ನಾಶಮಾಡುವ) ಧೂಮಕೇತುವಾಯಿತು. ವ|| ಹೀಗೆ ದುಃಖ ಪಡುತ್ತಿದ್ದ ಮಗನ ದುಃಖವನ್ನು ಸಮಾಧಾನಪಡಿಸಬೇಕೆಂಬದು ಧೃತರಾಷ್ಟ್ರನೂ ಗಾಂಧಾರಿಯೂ ಬರುತ್ತಿರುವುದನ್ನು ದೂರದಿಂದಲೇ ತಿಳಿದು ದುಶ್ಯಾಸನನ ಸಾವನ್ನು ನೆನೆದು ತಾಯಿತಂದೆಗಳ ಬರವನ್ನು ನೋಡಲು ನಾಚಿ