________________
ದ್ವಾದಶಾಶ್ವಾಸಂ | ೬೨೯ ನೀಂ ನಿನ್ನ ನಗೆಯನಾರ್ಪೊಡ ದಂ ನೆಂಪನೆ ನೆಗೆದು ಬರ್ಪ ವಿಷಪನ್ನಗನಂ | ಪನ್ನತನೆಡೆಯೊಳರಿಗಂ :ತನ್ನಯ ಗರುಡಾಸ್ತ್ರದಿಂದ ಕುಣಿದಣಿದಣಿದಂ ||
១១ន ವ|| ಆಗಳಂಗರಾಜಂಗ ಶಲ್ಯಂ ಕಿನಿಸಿ ಮುಳಿಸಿಕೊಳೆ ಕಣ್ಣಾಣದಿಂತಪ್ರೇಕಗ್ರಾಹಿಗ ಮೊರಂಟಂಗಂ ರಥಮನೆಸಗೆನೆಂದು ವರೂಥದಿಂದಿಚೆದು ಪೋಗೆಚಂti ಆರಿಗನ ಬಟ್ಟನಂಬುಗಳ ಬಲ್ಬರಿ ಸೋಂಕುಗುಮೇಟಿಮೆನ್ನ ತೋ
qರಮೆನಗನ್ನ ಬಿಲ್ಲ ನರಮಂದು ವರೂಥತುರಂಗಮಂಗಳಂ | ತುರಿಪದೆ ತಾನೆ ಚೋದಿಸುತುಮಾರ್ದಿಸುತುಂ ಕಡಿಕೆಯು ಕಾದೆ ನೀ ಕರ ರಥಚಕ್ರಮಂ ಪಿಡಿದು ನುಂಗಿದಳೊರ್ಮೆಯ ಧಾತ್ರಿ ಕೋಪದಿಂ || ೨೦೬
ವ|| ಅಂತು ತನ್ನಂ ಮುನ್ನೆ ಮುಯ್ಯ್ ಸೂರಮೊಲಣಿಗೆಯಂ ಪಿಟಿವಂತೆ ಪಿಂಡಿ ಏಟದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದಿಳದು ಗಾಲಿಯನೆತ್ತುವಾಗಳಿವನನೀ ಪದದೊಳ್ ಕಡಿದೊಟ್ಟಿದಾಗಳ್ ಗೆಲಲಾಜಿತೆಯೆಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ
ಬಿಲ್ಲಿಗೆ ತೊಡಿಸಿದೆ. (ನೀನು ಯಾರೆಂದು) ತಿಳಿದೂ ನಿನ್ನ ಸಹಾಯದಿಂದ ಕೊಲ್ಲುವಷ್ಟು , ಅರ್ಜುನನು ನನಗೆ ಅಸಾಧ್ಯವೆ?” ಎಂದನು -೨೦೫. ಸರ್ಪವು 'ಹಾಗಾದರೆ ಶತ್ರುತ್ವವನ್ನು ಸಮರ್ಥನಾದರೆ ನೀನು ಪೂರ್ಣಮಾಡು' ಎಂದು ಹೇಳಿ ಅರ್ಜುನನ ಕಡೆಗೆ ಹಾರಿ ಬರುತ್ತಿದ್ದ ವಿಷಸರ್ಪವನ್ನೂ ಶೂರನಾದ ಅರಿಗನು ಮಧ್ಯಮಾರ್ಗದಲ್ಲಿಯೇ ಗರುಡಬಾಣದಿಂದ ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು. ವ.ಆಗ ಕರ್ಣನಿಗೆ ಶಲ್ಯನು ಕೋಪಿಸಿಕೊಂಡು ಕೋಪದಿಂದ ಕಣ್ಣಾಣದೆ, ಇಂತಹ ಹಟಮಾರಿಗೂ ಒರಟನಿಗೂ ನಾನು ತೇರನ್ನು ನಡೆಸುವುದಿಲ್ಲವೆಂದು ತೇರಿನಿಂದ ಇಳಿದು ಹೋದನು. ೨೦೬, “ಅರ್ಜುನನ ದುಂಡಾದ ಬಾಣಗಳ ದೊಡ್ಡ ಮಳೆಯು ತಗುಲುತ್ತಿದೆ ಏಳಿ, ನನ್ನ ತೋಳುಗಳು ನನಗೆ ಸಹಾಯ, ನನ್ನ ಬಿಲ್ಲೇ ಸಹಾಯ' ಎಂದು ರಥದ ಕುದುರೆಗಳನ್ನು ವೇಗವಾಗಿ ತಾನೇ ನಡೆಸುತ್ತ ಆರ್ಭಟಮಾಡಿ ಬಹಳವೇಗದಿಂದ ಯುದ್ಧಮಾಡಲು ಭಯಂಕರವಾದ ತೇರಿನ ಚಕ್ರವನ್ನು ಭೂಮಿಯು ಹಿಡಿದು ಇದ್ದಕ್ಕಿದ್ದ ಹಾಗೆ ನುಂಗಿದಳು (ಕರ್ಣನ ತೇರಿನ ಗಾಲಿಗಳು ಇದ್ದಕ್ಕಿದ್ದ ಹಾಗೆ ಭೂಮಿಯಲ್ಲಿ ಹೂತುಹೋದುವು) ವ|| ಹಾಗೆ ತನ್ನನ್ನು ಮೊದಲು ಇಪ್ಪತ್ತೊಂದು ಸಲ ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಹಿಂಡಿದ ದ್ವೇಷಕ್ಕೆ ರಥಚಕ್ರವನ್ನು ಭೂಮಿಯು ನುಂಗಲು ರಥದಿಂದಿಳಿದು ಕರ್ಣನು ಗಾಲಿಯನ್ನು ಎತ್ತುತ್ತಿದ್ದನು. ಇವನನ್ನು ಈ ಸ್ಥಿತಿಯಲ್ಲಿ (ಸನ್ನಿವೇಶದಲ್ಲಿ ಕತ್ತರಿಸಿ ರಾಶಿಮಾಡದಿದ್ದರೆ ಗೆಲ್ಲಲಾರೆ ಎಂದು ಹೇಳಿದ ಕೃಷ್ಣನ