________________
ಕಂ
೬೧೬ | ಪಂಪಭಾರತಂ
ವ|| ಎಂದು ನುಡಿದು ನೀನುಂ ನಿನ್ನ ಪ್ರತಿಜ್ಞೆಯಂ ನೆಪಿದೆಯಾನುಮನ್ನ ಪ್ರತಿಜ್ಞೆಯಂ ನೆಪುವೆನೆಂದು ಬ್ರೌಪದಿಯಂ ಒಡಿಯನೇಳಸಿ ಬೀಡಿಂಗೆ ಕಳಿಸಿ ರಾಕ್ಷಸಕ್ರೀಡೆಯನಾಡಲ್ ಬಗದು ಹಿಡಿಂಬೆಯಂ ನೆನೆದು ಬರಿಸಿ
ಒಸರ್ವ ಬಿಸುನೆತ್ತರಂ ರ ಕಸನಂದದೆ ಕುಡಿದು ಕುಡಿದು ಕಂಡಂಗಳನ | ರ್ವಿಸೆ ಮಲ್ಲು ಮಲ್ಲು ಕರ್ಬಿನ ರಸಕ್ಕಮಿನಿಸಿಂಪುಗಾಣೆನೆಂದನಿಲಸುತಂ || ಸವಿ ಸವಿದು ಬಿಕ್ಕ ಬಿಕ್ಕನೆ ಸವಿ ನೋಡನ್ನಾಣೆಯಂದು ರಕ್ಕಸಿಗಮದಂ | ಸವಿ ನೆತ್ತರೆಲ್ಲಂ ತವ ಮುಳಿಸಿಂದವನ ಕರುಳ ಹಿಣಿಲಂ ನೋಡದಂ ||
೧೫೮
೧೫೭
ವll ಅಂತು ಕುಡಿದು ನಿಜವಿರೋಧಿ ರುಧಿರಾಸವದೊಳಳವಿಗಳಿಯ ಸೊಕ್ಕಿ ತಾನುಂ ಹಿಡಿಂಬೆಯುವವನ ಬರಿಯ ನರವಿನಡುಗಿನಿಡುವಿನಡೆಯ ಕೆನ್ನೆತ್ತರೋರ್ವರೋರ್ವರಂ * ತಿಳದುಂ ಬೊಬ್ಬಳೆದುಂ ತ್ರಿಪುಂಡ್ರಮಿಟ್ಟುಂ ಕೂಕಿಳದುಂ ತೇಗಿಯುಂ ಪಸಿಗೆವರಿದುಂ ಬವಳಿಮರಿದುಂ ಬಾಸಂಗುಟಿಗೆವುದುಂ ಸೊಲ್ವರಿದುಮಾಡುವಾಗಳುಭಯಬಲಂಗಳ ಬೆಕ್ಕಸಬಟ್ಟು ನೋಡಿಕಂ|| ಆದ ಮುಳಿಸಿಂದಮಲ್ಪಂ
ತೇದುಂ ಕುಡಿಯಕ್ಕೆ ತಕ್ಕ ಪಗೆವನ ರುಧಿರಾ | ಜ್ಯೋದಮನೆ ಕುಡಿದು ಮಾಣ್ಣ ವ್ಯ ಕೋದರನೇನಾವ ತೆಂದೂಳಂ ದೋಷಿಗನೇ ||
೧೫೯ ಹೇಳು.” ವ|| ಎಂದು ಹೇಳಿ ನೀನು ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಿದೆ. ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡುತ್ತೇನೆ ಎಂದು ಬ್ರೌಪದಿಯನ್ನು ಹೆಣ್ಣಾನೆಯ ಮೇಲೆ ಕುಳ್ಳಿರಿಸಿ ಮನೆಗೆ ಕಳುಹಿಸಿ ರಾಕ್ಷಸಕ್ರೀಡೆಯನ್ನು ಆಡಲು ಯೋಚಿಸಿ ಹಿಡಿಂಬೆಯನ್ನು ಜ್ಞಾಪಿಸಿಕೊಂಡು ಬರಮಾಡಿ ೧೫೭. ಸ್ರವಿಸುತ್ತಿರುವ ಬಿಸಿರಕ್ತವನ್ನು ರಾಕ್ಷಸನ ಹಾಗೆ ಕುಡಿದು ಮಾಂಸಖಂಡಗಳನ್ನು ವಿಶೇಷವಾಗಿ ಅಗಿದು ಅಗಿದು ಕಬ್ಬಿನ ರಸದಲ್ಲಿಯೂ ಇಷ್ಟು ರುಚಿಯನ್ನು ಕಾಣೆನೆ ಎಂದು ಭೀಮನು ೧೫೮. ರುಚಿ ನೋಡಿ ನೋಡಿ ಬಿಕ್ಕಬಿಕ್ಕನೆ ರುಚಿನೋಡು ಎನ್ನಾಣೆ ಎಂದು ರಾಕ್ಷಸಿಗೂ ಅದರ ರುಚಿಯನ್ನು ತೋರಿಸಿ ರಕ್ತವೆಲ್ಲವೂ ಮುಗಿದು ಹೋಗಲು ಅವನ ಕರುಳುಗಳ ಕುಚ್ಚನ್ನು ಕೋಪದಿಂದ ಚಪ್ಪರಿಸಿದನು. ವ|| ಹಾಗೆ ಕುಡಿದು ತನ್ನ ಶತ್ರುವಿನ ರಕ್ತವೆಂಬ ಹೆಂಡದಲ್ಲಿ ಅಳತೆಮೀರಿ ಸೊಕ್ಕಿ ಹೋಗಿ ತಾನೂ ಹಿಡಿಂಬೆಯೂ ಅವನ ಪಕ್ಕಗಳ ನರಗಳ ಮಾಂಸಗಳ ಸಂದಿಗಳಲ್ಲಿದ್ದ ಕೆಂಪಾದ ರಕ್ತವನ್ನು ಮೈಗೆ ಬಳಿದುಕೊಂಡು ಹಣೆಯಲ್ಲಿ ಮೂರು ಎಳೆಗಳನ್ನು ಧರಿಸಿ ಘಟ್ಟಿಯಾಗಿ ತೇಗಿ ನೇರವಾಗಿ ಓಡಿ ಸುತ್ತಲೂ ತಿರುಗಿ ನಕ್ಷತ್ರಮಂಡಲಕ್ಕೆ ನೆಗೆದು ಸರದಿಯ ಮೇಲೆ ಆಡುವಾಗ ಎರಡು ಸೈನ್ಯಗಳೂ ಆಶ್ಚರ್ಯಪಟ್ಟು ನೋಡಿದವು. ೧೫೯. ವಿಶೇಷವಾಗಿ ಇವನಿಗೆ ಉಂಟಾದ