________________
೬೧೪) ಪಂಪಭಾರತಂ
ವಗ ಅಂತು ಮುಳಿದ ಪವನಜನ ಕೊಪಾಟೋಪಮಂ ಕಂಡು ಕೌರವಬಲದ ನಾಯಕರೊಳೊರ್ವರಪೊಡಂ ಮಿಟ್ಟೆಂದು ಮಿಡುಕಲಣದಿರೆ ಪವನಾತ್ಮಜಂ ದ್ರುಪದಾತ್ಮಜೆಗೆ ಬಟೆಯನಟ್ಟುವುದುಮಾ ವನಿತೆ ಜಯವನಿತೆ ಬರ್ಪಂತೆ ಬಂದುಮll. ಉಸಿರೊಪ್ರಿಂ ತಿದಿಯಂತಿರೊತ್ತಿದ ಬಸಿಮ್ ಪೋತಂದ ಕಣ್ ಬಿಟ್ಟ ಬಾಯ್
ಮಸಕಂಗುಂದಿದ ಮಯ್ ವಲಂ ಬಡಿವ ಕಾಲ್ ಭೂಭಾಗದೊಳ್ ತಂದು ತಾ| ಟಿಸುತುಂ ಕೋಟಲೆಗೊಳ್ ರತ್ನಮಕುಟದ್ಯೋತೋತ್ತಮಾಂಗಂ ವಿರಾ ಜಿಸುವನ್ನಂ ಪುಡಿಯೊಳ್ ಪೊರಳ್ ಪಗೆಯಂ ಕಾರ್ವಿನಂ ನೋಡಿದಳ lin೫೧ ಕಂ|| ಆಸತ್ತು ತಿರಿದರಾ
ವಾಸದ ಪರಿಭವದ ಕುದಿಪಮಂ ನೀಗಿ ಸುಖಾ | ವಾಸಮನೆಬ್ಬಿಸಿದುದು ದು
ಶ್ಯಾಸನನಿರ್ದಿರವು ಮನದೊಳಾ ದೌಪದಿಯಾ || ವ|| ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ ನಿನ್ನನ್ನ ಪ್ರತಿಜ್ಞೆಯಂ ನೆಪುವಂ ಬಾಯೆಂದು ಕೆಲದೊಳ್ ಕುಳ್ಳಿರಿಸಿ ದೃಢ ಕಠಿನಹೃದಯನಪ್ಪ ಹಿರಣ್ಯಾಕ್ಷನುರಮಂ ಪೋಲ್ವ ನಾರಸಿಂಗನಂತೆಕಂ|| ಡೊಳ್ಳನೆ ಸುರಿಗೆಯೊಳುರಮಂ
ಬಿಕ್ಕನೆ ಬಿರಿಯಿಳಿದು ಬರಿಯನಗಲೂ ಮನಂ | ಕೊಕ್ಕರಿಸದೆ ಬಗಸಿರೆಯಿನ ಕುರ್ಕ್ಕೆಯ ಮೊಗೆಮೊಗೆದು ನೆತ್ತರಂ ಪವನಸುತಂ ||
೧೫೩
ವ|ಹಾಗೆ ಕೋಪಿಸಿಕೊಂಡ ಭೀಮನ ಕೋಪಾಟೋಪವನ್ನು ಕಂಡು ಕೌರವಸೈನ್ಯದ ನಾಯಕರಲ್ಲಿ ಒಬ್ಬರಾದರೂ ಮಿಟ್ಟೆಂದು ಮಿಡುಕಲಾರದವರಾಗಿರಲು ಭೀಮನು ಬ್ರೌಪದಿಗೆ ದೂತರ ಮೂಲಕ ಹೇಳಿಕಳುಹಿಸಲು ಆ ಸ್ತ್ರೀಯು ಜಯಲಕ್ಷ್ಮಿಯು ಬರುವಂತೆ ಬಂದು ೧೫೧. ಉಸಿರಿನ ಒತ್ತಡದಿಂದ ತಿದಿಯ ಹಾಗೆ ಅಮುಕಿದ ಹೊಟ್ಟೆ, ಹೊರಕ್ಕೆ ಹೊರಟಿರುವ ಕಣ್ಣು ಬಿಟ್ಟಿರುವ ಬಾಯಿ, ಕುಂದಿದ ದೇಹ, ಚೆನ್ನಾಗಿ ಬಡಿಯುತ್ತಿರುವ ಕಾಲು, ನೆಲದಮೇಲೆ ಬಡಿಯುತ್ತ ಹಿಂಸೆ ಪಡುತ್ತಿರುವ, ರತ್ನಖಚಿತವಾದ ಕಿರೀಟದಿಂದ ಪ್ರಕಾಶಮಾನವಾಗಿರುವ ತಲೆ ಇವೆಲ್ಲವೂ ವಿರಾಜಿಸುತ್ತಿರಲು ಧೂಳಿನಲ್ಲಿ ಹೊರಳಾಡುತ್ತಿರುವ ಹಗೆಯನ್ನು ಕಣ್ಣುತೃಪ್ತಿ ಪಡುವವರೆಗೂ ಬ್ರೌಪದಿಯು ನೋಡಿದಳು. ೧೫೨. ದುಶ್ಯಾಸನನಿದ್ದ ಸ್ಥಿತಿಯು ಅವಳು ಕಾಡಿನಲ್ಲಿ ಬಳಲಿ ಅಲೆದಾಡಿದ, ವನವಾಸದ ಅವಮಾನವನ್ನೂ ಸಂಕಟವನ್ನೂ ಹೋಗಲಾಡಿಸಿ ಅವಳಿಗೆ ಸುಖದ ನೆಲೆಯನ್ನುಂಟುಮಾಡಿತು. ವl! ಆಗ ಭೀಮನು ತನ್ನ ಪತ್ನಿಯ (ತಳೋದರಿಯ) ಮುಖವನ್ನು ನೋಡಿ ನಿನ್ನ ಮತ್ತು ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡೋಣ ಬಾ ಎಂದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ದೃಢವೂ ಕಠಿಣವೂ ಆದ ಹಿರಣ್ಯಾಕ್ಷನ ಎದೆಯನ್ನು ಸೀಳುವ ನರಸಿಂಹನಂತೆ ೧೫೩. ಕೈಗತ್ತಿಯಿಂದ ಎದೆಯನ್ನು ಡೊಕ್ಕೆಂದು ಬಿರುಬಿರನೆ ಬಿರಿಯುವಂತೆ ತಿವಿದು ಪಕ್ಕವನ್ನು ಅಗಲವಾಗಿ