________________
೬೧೨ / ಪಂಪಭಾರತಂ
ನುಜರಂ ಹೆಸರ್ವೆಸರೊಳೆ ಕರೆದು ಮೂದಲಿಸಿದೊಡೆ ಮುನ್ನೆ ತಮ್ಮೊಡವುಟ್ಟಿದರ್ ಸತ್ತಲೊಳ ನಿಬರುಮೊಂದಾಗಿ ಬಂದು ತಾಗಿದಾಗಳ್
ಮ||
ಮಸಕಂಗುಂದದೆ ಪಾಯ್ಕರಾತಿ ಶರಸಂಘಾತಂಗಳು ಕೂಡ ಖಂ ಡಿಸಿ ಬಿಲ್ಲಂ ಮುಳಯೆಚೊಡಂತನಿಬರುಂ ಬಾಳಿಟ್ಟು ಮೇಲ್ವಾಯೊಡ | ರ್ಬಿಸೆ ತಿಣ್ಣಂ ತೆಗೆದರ್ಧಚಂದ್ರಶರದಿಂ ಸೂಮ್ ಸೂಳೆಚ್ಚಾಗಳ ರ್ಚಿಸಿದಂತಿರ್ದುದುರುಳ ಕೌರವರಃಪದಂಗಳಿಂ ಕೊಳ್ಳುಳಂ || ೧೪೫ ವ|| ಅಂತು ದುರ್ಯೋಧನ ದುಶ್ಯಾಸನರಿರ್ವರುಮುಟಿಯುದ ಕೌರವರೆಲ್ಲರುಮಂ ಜೀರಗೆಯೊಕ್ಕಲ್ಯಾಡಿ ಕೆಡೆದ ಪೆಣಂಗಳನೆಡಗಲಿಸಿ ನಿಂದು
ಮ|| ಚಲದಿಂ ಕೃಷ್ಣಯ ಕೇಶಮಂ ಪಿಡಿದ ನಿನ್ನಿಂದಾದಲ್ ನಿನ್ನುರ ಸ್ಥಲಮಂ ಪೋಲದೆ ಪೋಪುದನಗದೇಕಳ್ಳಿರ್ದ ಬಾಳ್ವೆ ಪಂ ಬಲದೇನಿಂ ನಿನಗುಂಟೆ ನಿನ್ನನುಜರು ಕಂಡಂತುಮನನ್ನ ತೋ
ಜ್ವಲೆಯೊಳ್ ಸಿಲ್ಕಿದೆಯೆಂದು ಮೂದಲಿಪುದುಂ ದುಶ್ಯಾಸನಂ ತಾಗಿದಂ || ೧೪೬
ವ|| ಅಂತು ತಾಗಿದಾಗಳ್
ಕಂ || ಕಲಪಟ್ಟ ಪಗೆಯ ಬೇರ್ವರಿ
ದುಮಿಕೆಯ ಪೊದ ಗಂಡಮಚ್ಚರದೊದವಿಂ ನನನ ಮೂದಲಿಸುತ್ತುಂ
ನೆನನೆ ತೆಗೆದೆಚ್ಚರೊರ್ವರೋರ್ವರನಾಗಳ್ ||
042
ಸೆಳೆದು
ರೊಬ್ಬರನ್ನೂ ಅವರ ಹೆಸರನ್ನು ಹಿಡಿದು ಮೂದಲಿಸಿ ಕರೆದನು. ಈಗಾಗಲೇ ತಮ್ಮ ಸಹೋದರರು ಸತ್ತ ದುಃಖದಿಂದ ದುಃಖಿತರಾದ ಆ ಅಷ್ಟು ಜನವೂ ಒಂದಾಗಿ ಸೇರಿ ತಾಗಿದರು. ೧೪೫, ಕಡಿಮೆಯಾಗದ ವೇಗದಿಂದ ಹಾದುಬರುತ್ತಿರುವ ಬಾಣಸಮೂಹಗಳನ್ನು ತಕ್ಷಣವೇ ಕತ್ತರಿಸಿ ಬಿಲ್ಲನ್ನೂ ಮುರಿದುಹೋಗುವ ಹಾಗೆ ಹೊಡೆದನು. ಅಷ್ಟು ಜನವೂ ಕತ್ತಿಯನ್ನು ಒರೆಯಿಂದ ಹೊರತೆಗೆದು ಮೇಲೆ ನುಗ್ಗಿ ಬಂದರು. ಭೀಮನು ರಭಸದಿಂದ ಅರ್ಧಚಂದ್ರಾಕಾರದ ಬಾಣವನ್ನು ತೆಗೆದು ಸಲಸಲಕ್ಕೂ ಹೊಡೆದಾಗ ಯುದ್ಧಭೂಮಿಯು ಉರುಳಿರುವ ಕೌರವರ ತಲೆಯೆಂಬ ಕಮಲಗಳಿಂದ ಪೂಜಿಸಲ್ಪಟ್ಟಂತೆ ಇದ್ದಿತು. ವ|| ಹಾಗೆ ದುರ್ಯೋಧನ ದುಶ್ಯಾಸನರಿಬ್ಬರನ್ನು ಬಿಟ್ಟು ಉಳಿದ ಕೌರವರೆಲ್ಲರನ್ನೂ ಜೀರಿಗೆಯನ್ನು ಒಕ್ಕುವಂತೆ ಒಕ್ಕಿ ಕೆಡೆದಿರುವ ಹೆಣಗಳನ್ನು ದಾಟಿ ನಿಂತನು. ೧೪೬. 'ಛಲದಿಂದ ದೌಪದಿಯ ಕೂದಲನ್ನು ಹಿಡಿದೆಳೆದ ನಿನ್ನಿಂದಾಗಿರುವ ದುಃಖವು ನಿನ್ನ ಹೃದಯಪ್ರದೇಶವನ್ನು ಸೀಳದೇ ಹೋಗುವುದಿಲ್ಲ. ನನಗೆ ಏತಕ್ಕಾಗಿ ಹೆದರಿದ್ದೀಯೆ ? ನಿನ್ನ ತಮ್ಮಂದಿರಾದುದನ್ನು ನೋಡಿಯೂ ಬದುಕಬೇಕೆಂಬ ಹಂಬಲ ನಿನಗೆ ಇನ್ನೂ ಇದೆಯೇ ? ಹೇಗಾದರೇನು ? ನನ್ನ ತೋಳಿನ ಬಲೆಯಲ್ಲಿ ಸಿಕ್ಕಿದ್ದೀಯೇ' ಎಂದು ಮೂದಲಿಸಲು ದುಶ್ಯಾಸನನು ತಾಗಿದನು. ವ|| ಹಾಗೆ ತಾಗಿದಾಗ ೧೪೭. ಕೆರಳಿರುವ ಅಧಿಕವಾದ ದ್ವೇಷದಿಂದಲೂ ಬೇರುಬಿಟ್ಟಿರುವ ಗರ್ಜನೆಯಿಂದಲೂ, ವ್ಯಾಪ್ತವಾದ ಪೌರುಷ ಮತ್ತು ಮತ್ಸರದ
-