________________
ಕಂ ಕಲಕುಮಾದ ರಥಂಗಳಿ
ನಡೆದರಿಭಟರಿಂ ಸುರುಳ ಮದಗಜಘಟೆಯಿಂ ।
ದ್ವಾದಶಾಶ್ವಾಸಂ | ೬೦೧
ಸು ಸುಳದೊಡವರಿದುದು ಕ
ಊಟಿಯೊಳ್ ಭೋರ್ಗರೆವ ತೊಯವೋಲ್ ರುಧಿರಜಳಂ || ೧೧೩
ಪಿರಿದು ಪೊಗಟೆಸಿದ ಪಾಡಿಸಿ
ದರಿಯರನಾನ ಪಿರಿಯರಂ ಪೂಣಿಗರಂ | ಬಿರುದರನದಟಿನೊಳುಬರ
ಮುರಿವರನಾಯ್ಕರಿಸಿ ಕೊಂಡುವರಿಗನ ಕಣೆಗಳ್ ||
ಕಡ ಕೊಳೆ ಪಟದರಿ ನರಪರ
ಕಣೆಕಾಲ್ಗಳ್ ಬೆರಲ ರತ್ನಮುದ್ರಿಕೆಗಳ ಸಂ 1 ದಣಿಯ ಬೆಳಗುಗಳಿನೆಸೆದುವು ರಣರಂಗದೊಳಯುಪಡೆಯ ನಾಗಂಗಳವೋಲ್ ||
ಆಗ ವಿಜಯನ ವೀರ
ಶ್ರೀಗೆ ಕರಂ ಕಿನಿಸಿ ಕಲಿ ಸುಶರ್ಮಂ ಮೆಯ್ಯೋಳ್ | ತಾಗೆ ಪಗೆ ನೀಗೆ ತಲೆಯಂ
ಪೋಗೆಚ್ಚನದೊಂದು ಪರಶು ದಾರುಣಶರದಿಂ ||
004
हैं
೧೧೫
೧೧೬
ವ| ಅಂತು ಸಂಸಪ್ತಕಬಲಕ್ಕಾಳನಾಗಿರ್ದ ಸುಶರ್ಮನಂ ರಾವಣನಂ ರಾಘವಂ ಕೊಲ್ವಂತ ವಿದ್ವಿಷ್ಟವಿದ್ರಾವಣಂ ಕೊಂದೊಡುಟಿದ ನಾಯಕರೆಲ್ಲರ್ ತಮ್ಮಾಳನ ಸಾವು ಕಂಡು ರಿಪುಕುರಂಗ
ಬೀಳುವ ಹಾಗೆ ಬಿದ್ದರು. ೧೧೩. ಅಸ್ತವ್ಯಸ್ತವಾದ ತೇರುಗಳಿಂದಲೂ ಸತ್ತ ಶತ್ರುವೀರರಿಂದಲೂ ಸುರುಳಿಗೊಂಡು ಬಿದ್ದ ಮದ್ದಾನೆಗಳಿಂದಲೂ ರಕ್ತಪ್ರವಾಹವು ಭೋರೆಂದು ಶಬ್ದ ಮಾಡುತ್ತ ಕಲ್ಲುಗಳಿಂದ ಕೂಡಿರುವ ಪಾತ್ರದಲ್ಲಿ ಹರಿಯುವ ನದಿಯಂತೆ ಸುಳಿಸುಳಿಯಾಗಿ ಜೊತೆಯಲ್ಲಿಯೇ ಹರಿಯಿತು. ೧೧೪, ಹಿರಿದಾಗಿ ಹೊಗಳಿಸಿಕೊಂಡವರು ಹಾಡಿಸಿಕೊಂಡವರು ಎದುರಿಸಲು ಅಸಾಧ್ಯರಾದವರು ಪ್ರತಿಜ್ಞೆ ಮಾಡಿದವರು ಬಿರುದುಳ್ಳವರು ಪರಾಕ್ರಮದಿಂದ ವಿಶೇಷವಾಗಿ ಉರಿಯುತ್ತಿರುವವರು ಮೊದಲಾದವರನ್ನೆಲ್ಲ ಅರ್ಜುನನ ಬಾಣಗಳು ಹುಡುಕಿಕೊಂಡು ಬಂದು ನಾಟಿದುವು. ೧೧೫, ತಗಲಲು ಕತ್ತರಿಸಿಬಿದ್ದಿದ್ದ ಶತ್ರುರಾಜರ ಅಡಿಯ ಕಾಲುಗಳ ಬೆರಳಿನ ರತ್ನದುಂಗುರಗಳ ಬೆಳಗಿನ ಸಮೂಹದಿಂದ ಯುದ್ಧರಂಗದಲ್ಲಿ ಅಯ್ದು ಹೆಡೆಯ ಹಾವುಗಳ ಹಾಗೆ ಪ್ರಕಾಶಿಸಿದುವು. ೧೧೬. ಆಗ ಅರ್ಜುನನ ಶೌರ್ಯದ ಮಹತ್ವಕ್ಕೆ (ವಿಜಯಲಕ್ಷ್ಮಿಗೆ) ವಿಶೇಷವಾಗಿ ಕೋಪಿಸಿಕೊಂಡು ಶೂರನಾದ ಸುಶರ್ಮನು ಶರೀರವನ್ನು ತಾಗಲು (ಮೇಲೆ ಬೀಳಲು) (ಅರ್ಜುನನು) ದ್ವೇಷವು ತೀರುವಂತೆ ಒಂದು ಕೊಡಲಿಯಂತಿರುವ ಕ್ರೂರವಾದ ಬಾಣದಿಂದ ತಲೆಯು ಕತ್ತರಿಸಿ ಹೋಗುವ ಹಾಗೆ ಹೊಡೆದನು. ವ|| ಹಾಗೆ ಸಂಸಪ್ತಕರ ಸೈನ್ಯಕ್ಕೆ ಯಜಮಾನನಾಗಿದ್ದ (ಒಡೆಯನಾಗಿದ್ದ ಸುಶರ್ಮನನ್ನು, ರಾವಣನನ್ನು ರಾಮನು