________________
ದ್ವಾದಶಾಶ್ವಾಸಂ | ೫೯೯ ಮೆಟ್ಟಿ ಕನಕಸಂವ್ಯಾನಸೂತ್ರನಾಚಮಿಸಿ ಕನಕಕಮಳಂಗಳಿಂ ಕಮಳಾಕರಬಾಂಧವಂಗರ್ಥ್ಯಮ ಪಾಲ್ಗಡಲ ತೆರೆಯ ನೊರೆಯ ದೊರೆಯ ದುಕೂಲಾಂಬರದೊಳಿಂಬಾಗಿ ಚಲ್ಲಣಮನುಟ್ಟು ಪುಡಿಗತ್ತುರಿಯಂ ತಲೆಯೊಳ್ ತೀವೆ ಪೊಯ್ದು ಪಸಿಯ ನೇತ್ರದಸಿಯ ಪಾಳೆಯೊಳ್ ತಲೆನವಿರಂ ಪಚ್ಚುಗಂಟಿಕ್ಕಿ ಮಣಿಮಯಮಕುಟಮಂ ಕವಿದು ತೋರ ನೆಲ್ಲಿಯ ಕಾಯಂ ಪಿರಿಯವಪ್ಪ ಮುತ್ತಿನ ಬ್ರಹ್ಮಸೂತ್ರಮನೇಲಲಿಕ್ಕಿ ಪಸದನಮನೆನಗಿಂದಿನಿತೆ ಎಂಬಂತೆ ನೆಯ ಕೆಯ್ಯು ಬಂದು ಮದ್ರರಾಜಂಗೆ ಪೊಡೆವಟ್ಟು ಸನ್ನಣಂಗಳನೆಲ್ಲಮನಾತಂಗೆ ನೆಯ ತುಡಿಸಿಕಂ| ತಿದಿಯುಗಿದು ಕೊಟ್ಟೆನೊಡವು
ಟೈದ ಕವಚಮನಮರಪತಿಗೆ ಮುನ್ನಿನ್ನೆನಗೊ | , ಹೃದು ಮಜಯನಾಸೆವಡಲೆಂ.
ದದಟನಣಂ ತುಡನೆ ಕವಚಮಂ ರಾಧೇಯಂ || ವ|| ಆಗಳ್ ಮದಗಜ ಕಕ್ಷಧ್ವಜ ವಿರಾಜಿತಮಪ್ಪ ತನ್ನ ಪೊನ್ನ ರಥಮಂ ಮದ್ರರಾಜನ ನೇಅಲ್ಬಟ್ಟು ಮೂಜು ಸೂಯ್ ಬಲವಂದು ಪೊಡೆವಟ್ಟು ತನ್ನ ಸಗಮನೇಲುವುದನನು ಕರಿಸುವಂತೇಟಿ ನೆಲನಂಬರದೆಡೆಗೆ ಬರ್ಪಂತೆ ರಣರಂಗಭೂಮಿಗೆ ವಂದು ಕುರುರಾಜಧ್ವಜಿನಿಯಂ ಪದವೂಹಮನೊಡ್ಡಿದೊಡೆಕoll ಕಂಸಾರಿಸಖಂ ಪರಿವಿ
ಧ್ವಂಸಿತ ರಿಪುನೃಪಸಮೂಹನೊಡ್ಡಿದನಾಗಳ್ || ಹಂಸವೂಹಮನುತುಂ ಗಾಂಸಂ ತಾಂ ವಿಬುಧವನಜವನಕಳಹಂಸಂ ||
೧೧೦
ರೇಷ್ಮೆಯ ಬಟ್ಟೆಯಲ್ಲಿ ಮನೋಹರವಾಗಿ ಕಚ್ಚೆಯನ್ನುಟ್ಟನು. ಕಸ್ತೂರಿಯ ಹುಡಿ ತಲೆಯ ಮೇಲೆ ತುಂಬ ಚೆಲ್ಲಿಕೊಂಡು ಹಸಿರು ಬಣ್ಣದ ನವುರಾದ ಪಟ್ಟಿಯಲ್ಲಿ ತಲೆಗೂದಲನ್ನು ಭಾಗಮಾಡಿ ಗಂಟಿಕ್ಕಿಕೊಂಡನು. ರತ್ನಮಯಕಿರೀಟವನ್ನು ತಲೆಗೆ ಧರಿಸಿಕೊಂಡನು. ದಪ್ಪವಾದ ನೆಲ್ಲಿಯ ಕಾಯಿಗಿಂತಲೂ ದಪ್ಪವಾದ ಮುತ್ತಿನ ಯಜ್ಯೋಪವೀತವನ್ನು ಜೋಲುಬಿಟ್ಟು ಈ ಅಲಂಕಾರ ಈ ದಿನಕ್ಕೆ ಮಾತ್ರ ಎನ್ನುವ ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡನು. ಶಲ್ಯನಿಗೆ ನಮಸ್ಕಾರಮಾಡಿ ಕವಚಗಳನ್ನೆಲ್ಲ ಆತನಿಗೆ ಪೂರ್ಣವಾಗಿ ತೊಡಿಸಿದನು. ೧೦೯. ಜೊತೆಯಲ್ಲಿ ಹುಟ್ಟಿದ ಕವಚವನ್ನು ಚರ್ಮವನ್ನು ಸುಲಿಯುವ ಹಾಗೆ ಮೊದಲು ಇಂದ್ರನಿಗೆ ಸುಲಿದು ಕೊಟ್ಟೆನು. ಇನ್ನು ನನಗೆ ದೇಹಕ್ಕೆ ಮರೆಯಾದ ಕವಚಾದಿಗಳನ್ನು ಅಪೇಕ್ಷೆಪಡುವುದು ಒಪ್ಪುವುದಿಲ್ಲ ಎಂದು ಪರಾಕ್ರಮಶಾಲಿಯಾದ ಕರ್ಣನು ಕವಚವನ್ನು ತೊಡಲಿಲ್ಲವಲ್ಲ! ವll ಆಗ ಮದ್ದಾನೆಯ ಪಾರ್ಶ್ವದಲ್ಲಿ ವಿರಾಜಮಾನವಾಗಿರುವ ತನ್ನ ಸುವರ್ಣರಥವನ್ನು ಶಲ್ಯನನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತಾನು ಸ್ವರ್ಗವನ್ನು ಹತ್ತುವುದನ್ನು ಅನುಕರಿಸುವಂತೆ ಹತ್ತಿದನು. ಭೂಮಿಯು ಆಕಾಶದೆಡೆಗೆ ಬರುವ ಹಾಗೆ ಯುದ್ಧಭೂಮಿಗೆ ಬಂದು ಕೌರವಸೈನ್ಯವನ್ನು ಪದ್ಮವ್ಯೂಹದಾಕಾರದಲ್ಲಿ ರಚಿಸಿ ಮುಂದಕ್ಕೆ ಚಾಚಿದನು. ೧೧೦. ಶತ್ರುರಾಜರ ಸಮೂಹವನ್ನು ಪೂರ್ಣವಾಗಿ