________________
ದ್ವಾದಶಾಶ್ವಾಸಂ | ೫೯೭
ಗಲಲರಿದುಂತ ಸೂತಸುತನಂ ರಣರಂಗದೊಳೆಂಬುದೊಂದು ಪಂ ಬಲೆ ಪಿರಿದಂತವರಿಗೊಸೆದು ತರೆಸಮಂ ಗಡ ನಾಳೆ ಶಲ್ಯನೀ | ಕಲಹಮಿದೆಂತು ದಲ್ ಬಿದಿರ ಗಂಟುಗಳಂ ಕಳೆವಂತೆ ಮನ್ಮನಃ ಸಲನೆಯನುಂಟುಮಾಡಿದಪುದಿಲ್ಲಿಗೆ ಕಜ್ಜಮದಾವುದಚ್ಯುತಾ || 309
ವ|| ಎಂಬುದುಂ ನೀನೆಂದಂತೆ ರಥಕಲ್ಪವೆಂಬುದು ಶಲ್ಯಂಗೊಡವುಟ್ಟಿದುದಾದೊಡ ಮವರಿವರ್ಗಮೊರ್ವರೋರ್ವರೊಳ್ ಮೂಗುದುಪಿಸಲಾಗದ ಕಡ್ಡಮವರ್ಗಂತುಮೊಡಂಬಡಾಗದ ದಲ್ಲದೆಯುಂ
Z11
ಚoll
ಕರ್ಣಂಗಂಡ ಕಲ್ಲರ್ ನುಡಿವ ಪಸುಗೆಯಂ ಗಂಡರಾ ಗಂಡವಾತುಂ ಕರ್ಣಂ ಮುಂ ಪುಟ್ಟೆ ಪುಟ್ಟಿತ್ತಳವಮರ್ದೊಡವುಟ್ಟಿತ್ತು ಪೂಣೀವ ಚಾಗಂ | *ಕರ್ಣಂಗೊಡ್ಡಿತ್ತು ದಲ್ ಭಾರತಮನೆ ಜಗದೊಳ್ ಸಂದನೇಂ ಸಂದೊಡಾಂತಾ ಕರ್ಣಾಂತಾಕೃಷ್ಟ ಬಾಣಾವಳಿಯೊಳೆ ಹರಿಗಂ ಕರ್ಣನಂ ನಾಳೆ ಕೋಲ್ಕುಂ | ೧೦೪
ಕಂ||
ಎಂಬನಗಮಾಗಳಾ ಏಕ
ಚಾಂಬುಜಸೌರಭಮನೊಸೆದು ಸೇವಿಸುವಾ ಪ ಣ್ಣುಂಬಿಗಳ ಸರಮನತ್ತಿ ತ
ಅಂಬುತ್ತು ಬಂದುದಾ ಪ್ರಭಾತಸಮೀರಂ ||
008
೧೦೩. ಯುದ್ಧರಂಗದಲ್ಲಿ ಕರ್ಣನನ್ನು ಸುಮ್ಮನೆ (ಯಾರ ಸಹಾಯವಿಲ್ಲದೆ ಏಕಾಕಿಯಾಗಿರುವಾಗಲೇ) ಗೆಲ್ಲಲು ಸಾಧ್ಯವಿಲ್ಲವೆಂಬ ಚಿಂತೆಯೇ ಹಿರಿದಾಗಿದೆ. ಅಂತಹ ಅವನಿಗೆ ನಾಳೆ ಪ್ರೀತಿಯಿಂದ ಶಲ್ಯನು ತೇರನ್ನು ನಡೆಸುತ್ತಾನಂತೆ. ಈ ಯುದ್ಧದಲ್ಲಿ ನಾವು ಹೇಗೆ ಗೆಲ್ಲುವುದು ? ಬಿದಿರಿನ ಗಿಣ್ಣುಗಳನ್ನು ಒಡೆಯುವಂತೆ ನನ್ನ ಮನಸ್ಥೆರ್ಯವನ್ನು ಕದಲಿಸುತ್ತಿದೆ. ಕೃಷ್ಣ, ಈ ಸಮಯದಲ್ಲಿ ಮಾಡಬೇಕಾದ ಕಾರ್ಯವಾವುದು ? ವ| ಎನ್ನಲು ನೀನು ಹೇಳಿದಂತೆ ರಥವಿದ್ಯೆಯೆಂಬುದು ಶಲ್ಯನ ಜೊತೆಯಲ್ಲಿ ಹುಟ್ಟಿದುದಾದರೂ ಅವರಿಬ್ಬರಿಗೂ ಒಬ್ಬೊಬ್ಬರಲ್ಲಿ ಮೂಗುತುರಿಸಿ ಕೊಳ್ಳುವುದಕ್ಕಾಗದ ದ್ವೇಷಾಸೂಯೆಗಳಿವೆ. ಅವರಿಗೆ ಯಾವತ್ತೂ ಒಪ್ಪಿಗೆ ಯೆಂಬುವುದಾಗುವುದಿಲ್ಲ. ಅಲ್ಲದೆಯೂ ೧೦೪, ಶೂರರಾದವರು ಕರ್ಣನನ್ನು ನೋಡಿಯಲ್ಲವೇ ಮಾತನಾಡುವ ವಿವೇಕವನ್ನು ಕಲಿತರು. ಆ ಪೌರುಷಯುಕ್ತವಾದ ಮಾತುಗಳು ಕರ್ಣನು ಹುಟ್ಟಿದ ಮೇಲೆಯೇ ಹುಟ್ಟಿದುವು. ಪ್ರತಾಪಸಹಿತವಾದ ತ್ಯಾಗವೂ ಅವನೊಡನೆಯೇ ಸೇರಿಕೊಂಡು ಹುಟ್ಟಿದುವು. ಭಾರತಯುದ್ಧವೂ ಕರ್ಣನಿಗಾಗಿಯೇ ಒಡ್ಡಿದೆ ಎಂಬ ಜಗತ್ಪಸಿದ್ಧಿಯನ್ನು ಪಡೆದಿದ್ದಾನೆ. ಏನು ಪಡೆದಿದ್ದರೇನು ? ಹರಿಗನಾದ ಅರ್ಜುನನು ನಾಳೆ ಕಿವಿಯವರೆಗೆ ಸೆಳೆದ ತನ್ನ ಬಾಣಸಮೂಹದಿಂದಲೇ ಕರ್ಣನನ್ನು ಕೊಲ್ಲುವನು. ೧೦೫, ಎನ್ನುವಷ್ಟರಲ್ಲಿ ಆ ಅರಳಿದ ಕಮಲದ ಸುವಾಸನೆಯನ್ನು ಸಂತೋಷದಿಂದ ಸೇವಿಸುವ (ಆಘ್ರಾಣಿಸುವ) ಪೆಣ್ಣುಂಬಿಗಳ ಸ್ವರವನ್ನು ಎಬ್ಬಿಸಿ ಅಟ್ಟುತ್ತಾ ಪ್ರಾತಃಕಾಲದ ಮಾರುತವು ಬೀಸಿತು.