________________
ದ್ವಾದಶಾಶ್ವಾಸಂ / ೫೬೧ ವll ಕರೆದು ಮಗನೆ ನೀನಿಂದಿರುಳಿನನುವರಮನೆನಗೆ ಗೆಲ್ಲೀಯಲ್ವೇಚ್ಚುಮೆಂದೊಡಿ ದಾವುದರಿದುಂ ಪಿರಿದುಮಾಗಿ ಬೆಸಸಿದಿರಂತೆಗೆಯ್ದನೆನ್ನ ತೋಟ್ಟುವೆಸನನೀ ವಿಶಸನರಂಗದೊಳ್ ತೋರ್ಪನೆಂದುಚಂll ಪರೆದುರಿಗೇಸಮವ್ವಳಿಪ ನಾಲಗೆ ಮಿಂಚುವ ದಾಟೆ ಬಿಟ್ಟ ಕಣ್
ತಿರುಪಿದ ಮೀಸೆ ಕೊಂಕಿದ ಸಟಂ ಕಳದಪ್ಪ ಕದಂಪು ನೀು ತಾ | ಬರದವೊಲಪ್ರೊಡಲ್ ಕಹ ಕಹ ಧ್ವನಿ ಕೌಳಿಕ ನಾದಮಾದಮಾ
ಸುರತರಮಾಗೆ ಬಂದು ಕವಿದತ್ತು ಘಟೋತ್ಕಚ ರೌದ್ರ ಸಾಧನಂ | . ೭
ವ|| ಅಂತು ನಿಶಾಚರ ಬಲಮಜವಳಗಾದ ಕಾಡನಳುರ್ವ ಬೇಗೆಯ ದಳ್ಳುರಿಯಂತೆ ದಳಿಸಿ ಕೊಳ್ಳೆಂದರಾತಿ ಬಲಮನಳುರೆ ಕರಡಿಯ ತೊವಲೋಳ್ ಪುದಿದ ಕರ್ಬೊನ್ನ ರಥಮುಮಾ ರಥದೊಳೊಡಂಬಡೆ ಪೂಡಿದ ನಾಲ್ಕೂಟು ಗೊಂಕುಲುಗಚಿಯಮಂಬರಸ್ಥಲಮನಡರ್ವ ಗಧಧ್ವಜ ಮುಮಂಜನ ಪುಂಜದಂತಾಗಿ ಬ್ರಹ್ಮಾಂಡಮಂ ತಾಗಿದ ವಿಕಟಾಂಗಮುಮಳವಳಿಯನಡಸಿದಂತಪ್ಪ ದಾಡಯುಮಗುರ್ವಾಗೆ ಬಂದು ತಾಗಿದಾಗಳ್ಚಂi ಕುದುರೆಯ ಬಿಲ್ಲ ಬಲ್ಲಣಿಯ ಕೇಣಿಯನಲ್ಲಿ ಕೆಲರ್ ನಿಶಾಟರು
ಣಿದ ಬಿಸುನೆತ್ತರೊಳ್ ಮಿಡಿದು ನುಣ್ಣನೆ ನುಂಗಿದರೆಲ್ಲಿಯುಂ ಕೆಲರ್ | ಕುದುಗುಳಿ ರಕ್ಕಸರ್ ಬಿಸುಕೆಗಳೊರಸುಗ್ರ ಮಹಾಗಜಂಗಳಂ ಚದುರ್ಗಿಡ ನುಂಗಿ ಬಿಕ್ಕಿ ಕುಡಿದ ಬಿಸುನೆತ್ತರ ಕಾಲ್ಪುರಂಗಳಂ || ೮
ಧರ್ಮರಾಯನು ಘಟೋತ್ಕಚನನ್ನು ವ|ಕರೆದು, ಮಗನೆ ನೀನು ಈ ದಿನ ರಾತ್ರಿಯುದ್ದವನ್ನು ನನಗೆ ಗೆದ್ದುಕೊಡಬೇಕು ಎಂದನು. ಅದಕ್ಕೆ ಘಟೋತ್ಕಚನು ಇದೇನಸಾಧ್ಯವೂ ಹಿರಿದೂ ಎನ್ನುವ ಹಾಗೆ ಅಪ್ಪಣೆಕೊಡುತ್ತೀರಿ; ಹಾಗೆಯೇ ಮಾಡುತ್ತೇನೆ; ನನ್ನ ಸೇವಾಕಾರ್ಯವನ್ನು ಯುದ್ಧರಂಗದಲ್ಲಿ ತೋರಿಸುತ್ತೇನೆ ಎಂದನು. ೭. ಉರಿಯಂತೆ ಕೆಂಪಗಿರುವ ಕೆದರಿದ ಕೂದಲು ಮುಂದಕ್ಕೆ ಚಾಚಿಕೊಂಡಿರುವ ನಾಲಿಗೆ, ಮಿಂಚುವ ಕೋರೆಹಲ್ಲು, ತೆರೆದ ಕಣ್ಣು, ಹುರಿಮಾಡಿರುವ ಮೀಸೆ, ವಕ್ರವಾದ ಕೇಸರಗಳು, ಕರಗಿರುವ ಕೆನ್ನೆ, ಉದ್ದವಾದ ತಾಳೆಯ ಮರದಂತಿರುವ ಶರೀರ, ಕಹಕಹವೆಂಬ ಧ್ವನಿ, ಭಯಂಕರವಾದ ಶಬ್ದ-ಇವೆಲ್ಲ ಅತ್ಯಂತ ಭಯಂಕರವಾಗಿರಲು ಘಟೋತ್ಕಚನ ಭಯಂಕರವಾದ ಸೈನ್ಯವು ಬಂದು ಮುತ್ತಿಕೊಂಡಿತು. ವ|| ರಾಕ್ಷಸ ಪಡೆಯು ಚೆನ್ನಾಗಿ ಒಣಗಿರುವ ಕಾಡನ್ನು ಸುಡುವ ಬೇಸಿಗೆಯ ಮಹಾಜ್ವಾಲೆಯಂತೆ ಪ್ರಜ್ವಲಿಸಿ 'ತೆಕೊ' ಎಂದು ಶತ್ರುಸೈನ್ಯವನ್ನು ಸುಡುತ್ತಿರಲು ಕರಡಿಯ ಚರ್ಮದಿಂದ ಆವರಿಸಲ್ಪಟ್ಟ ಕಬ್ಬಿಣದ ತೇರು, ಆ ರಥಕ್ಕೆ ಒಪ್ಪುವ ಹಾಗೆ ಹೂಡಿದ್ದ ಹೇಸರಗತ್ತೆ, ಆಕಾಶ ಪ್ರದೇಶವನ್ನು ಹತ್ತುವ ಹದ್ದಿನ ಬಾವುಟಗಳು, ಕಾಡಿಗೆಯ ರಾಶಿಯಂತಾಗಿ ಬ್ರಹ್ಮಾಂಡವನ್ನೂ ತಾಗಿದ ವಿಕಾರವಾದ ದೇಹ, ಬಾಲಚಂದ್ರನನ್ನು ಜೋಡಿಸಿದ ಹಾಗಿದ್ದ ದಾಡೆ ಇವುಗಳಿಂದ ಭಯಂಕರವಾಗಿ ಬಂದು ತಾಗಿತು. ೮. ಕುದುರೆಗಳನ್ನು ಬಿಲ್ದಾರರನ್ನು ಬಲಿಷ್ಠರಾದ ಕಾಲಾಳುಗಳ ಸಾಲುಗಳನ್ನು ಅಲ್ಲಿ ಕೆಲವು ರಾಕ್ಷಸರು ಚಿಮ್ಮಿದ ಬಿಸಿರಕ್ತದಲ್ಲಿ ಮರ್ದನ ಮಾಡಿ (ಕುಟ್ಟಿ ನವಾಗಿ