________________
ಏಕಾದಶಾಶ್ವಾಸಂ | ೫೫೭ ಚಂ|| ಸುಟೆಯೊಳಗಿರ್ದು ಬೆಟ್ಟು ಪೋಪೊಣುವಿನಂ ಲವಣಾಂಬುರಾಶಿ ಕು
ಕುಲಗುವಿನಲ್ಲಿ ಕುದಿಯ ಮೇಲೆ ಸಿಡಿಗುಳಂತೆ ಕೂಡ ತ | ತಲಗುದಿಯುತ್ತುಮಿರ್ಪ ಕುದಿಯೊಳ್ ಸಿಡಿದಲ್ಲಿಯ ಮುತ್ತುಗಳ್ ಛಟಿಲ್ ಛಟಿಲೆನೆ ಕೊಂಡುವೊರ್ಮೊದಲೆ ರುದ್ರ ಸುರೇಂದ್ರ ವಿಮಾನಪಳ್ಮೆಯಂ Il೧೫೩
ವ|| ಅಂತು ಸಮುದ್ರಕ್ಟೋಭಮುಂ ತ್ಯಲೋಕಕ್ಟೋಭಮುಮೊಡನೊಡನಾಗೆ
ಚಂ|| ತೆಗೆನೆದೂಳಕೊಂಡಿಪೆ ಶಿರಂ ಪರಿದತ್ತ ವಿಯತ್ತಳಂಬರಂ
ನೆಗೆದೊಡೆ ರಾಹು ಬಾಯ್ಸಳದು ನುಂಗಲೆ ಬಂದಪುದೆಂಬ ಶಂಕೆಯಿಂ | ದಗಿದು ದಿನೇಶನಸ್ತಗಿರಿಯಂ ಮತಿಗೊಂಡನಮೋಘಮಂಬ ಮಾ ತುಗಳ ನೆಗಟಿಯಂ ಪಡೆದನಾಹವದೊಳ್ ಪರಸೈನ್ಯಭೈರವಂ || ೧೫೪
ಚoll.
ಬಿರಿದಲರೋಳಿ ಸಗ್ಗದ ಮದಾಳಿಗಳಂ ಗಡಗೊಂಡು ದೇವಸುಂ ದರಿಯರ ಕೆಯ್ಸಳಿಂದಮುಗೆ ತುಂಬುರು ನಾರದರೊಂದು ಗೇಯದಿಂ | ಚರಮೆರ್ದೆಯಂ ಪಳಂಚಲೆಯೆ ವೀರಲತಾಂಗಿಯ ಸೋಂಕು ಮೆಯೊಳಂ ಕುರಿಸೆ ನಿರಾಕುಳಂ ಕಳೆದನಾಜಿ ಪರಿಶ್ರಮಮಂ ಗುಣಾರ್ಣವಂ || ೧೫೫
ಆಕಾಶಪ್ರದೇಶವು ಸುರುಳಿಯಾಗಿ ಸುಕ್ಕಿಹೋಯಿತು. ಭೂಮಿಯು ಒಡೆಯಿತು. ಈಶ್ವರನ ಮನಸ್ಸು ಕದಡಿಹೋಯಿತು. ೧೫೩. ಸಮುದ್ರದ ಸುಳಿಯಲ್ಲಿದ್ದ ಪರ್ವತಗಳು ಹೊರಹೊಮ್ಮುತ್ತಿರಲು ಉಪ್ಪುನೀರಿನ ಸಮುದ್ರವು ಅನ್ನವು ಕುದಿಯುವಂತೆ ಕುದಿಯುವಾಗ ಮೇಲಕ್ಕೆ ಸಿಡಿದ ಅನ್ನದ ಅಗುಳಂತೆ ಕೂಡಲೆ ತಳತಳವೆಂದು ಕುದಿಯುತ್ತಿರುವ ಕುದಿತದಲ್ಲಿ ಆ ಸಮುದ್ರದ ಮುತ್ತುಗಳು ಛಟಿಲ್ ಛಟಿಲ್ ಎಂದು ಆಕಾಶಕ್ಕೆ ಹಾರಿ ಶಿವನ ಮತ್ತು ದೇವೇಂದ್ರನ ವಿಮಾನಗಳ ಸಾಲುಗಳನ್ನು ಒಂದೇಸಲ ಆಕ್ರಮಿಸಿದುವು. ವ|| ಹಾಗೆ ಸಮುದ್ರದ ಕ್ಲೋಭವೂ (ಕಲಕುವಿಕೆಯೂ) ಮೂರು ಲೋಕಗಳ ಕ್ಲೋಭವೂ (ಭಯಕಂಪನಾದಿಗಳೂ) ಜೊತೆಜೊತೆಯಲ್ಲಿಯೇ ಉಂಟಾದವು. ೧೫೨. ಅರ್ಜುನನು ಬಾಣವನ್ನು ದೀರ್ಘವಾಗಿ ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು ಸೈಂಧವನ ತಲೆಯು ಕತ್ತರಿಸಿ ಆಕಾಶದೆಡೆ ಹಾರಲು ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು. (ಮರೆಯಾದನು), ಪರಸೈನ್ಯಭೈರವನಾದ ಅರ್ಜುನನು ಇದರಿಂದ ಯುದ್ದದಲ್ಲಿ ಬೆಲೆಯಿಲ್ಲದ ಶಕ್ತಿಯುಳ್ಳವನು ಎಂಬ ಕೀರ್ತಿಯನ್ನು ಪಡೆದನು. ೧೫೫. ಅರಳಿದ ಪುಷ್ಪಗಳ ಸಮೂಹವು ಸ್ವರ್ಗದ ಮದಾಳಿ (ಮದಿಸಿದ ದುಂಬಿ)ಗಳಿಂದ ಕೂಡಿ ದೇವಸುಂದರಿಯರ ಕೈಗಳಿಂದ ಸುರಿಯುತ್ತಿರಲು (ಪುಷ್ಪವೃಷ್ಟಿಯಾಗುತ್ತಿರಲು). ತುಂಬುರು ನಾರದರ ಗೀತದ ಒಂದು ಇಂಪಾದ ಸ್ವರವು ಎದೆಯನ್ನು ತಾಗಿ,