________________
ಏಕಾದಶಾಶ್ವಾಸಂ | ೫೫೫ ಚಂil ಶರದೊಳಗುರ್ಚಿಪೋಪ ಪೊಳಪಿಂಗೊಳಗಾಗಿ ತಗುಳ್ಳುದೊಂದು ಚೆ
ಕೃರಿಗೆಣೆಯಾದುದೀಯೇಜಗುವಂಬಿನ ಬಲ್ಬರಿಯಂಬಿನಂ ನಿರಂ || ತರದೊಳೆ ಪಾಯ ಕೂರ್ಗಣೆಗಳಂ ತಳೆದೊಟ್ಟಿ ತೆರಳ್ಳಿ ತೂಳಿಕೊಂ
ಡರೆದು ಮುಗುಟ್ಟಿ ಸಣ್ಣಿಸಿದನಾಂತ ಚತುರ್ವಲಮಂ ಗುಣಾರ್ಣವಂ |l೧೪೭ ಮ! ಸll ಕಲಿಗಂ ಬಲ್ಲಾಳಮಂಬೆತ್ತಿದೆನಿದುವೆ ಪದಂ ಮಾರ್ಕೊಳಲ್ ಸಿಂಧುರಾಜಂ
ಗೆಲಲೆಂದಾಂ ಬಂದೆನಿಂ ಕೊಂದಪನೆ ನೆರದು ನಿಂದಾನಿಮಂದಾಂತರಂ | ದಲಿಸುತ್ತೇಚಂ ಪ್ರಚಂಡ ಪ್ರಳಯ ಘನ ಘಟಾರಾವದಿಂದಾರ್ದು ಬಾಣಾ ವಲಿಯಿಂದಂ ಪೂಜತೆ ರೋಬೋವಿವರಮನೊದವಿತ್ತೊಂದು
ಘೋರಾಂಧಕಾರಂ || ೧೪೮ ವ|| ಅಂತಮೋಘಾಸ್ತಧನಂಜಯನೆಚ್ಚ ಶರಸಂಘಾತದಿನೊಗೆದ ರಣಗಲೆಯ ಮೊಲಗತ್ತಲೆಯಂ ಮಾಡೆ ನೇಸಬ್ ಪಟ್ಟತ್ತು ವಿಜಯಂ ಸೋಲ್ಕನೆಂದು ಕೌರವಬಲಮಾರ್ದೊಡೆಚಂil ಜ್ವಳದನಳಾಸದಿಂದಮಿಸೆ ಕತ್ತಲೆ ತೊಟ್ಟು ತೆರಳುದಾಗಳು
ಮಳಿಸಿ ಮಹಾರಥರ್ ಪಳಜಿತ ಸೈಂಧವನನ್ನಳವಿಂಗಮೆನ್ನ ದೋ | ರ್ವಳದಳವಿಂಗಮಿ೦ ಸೆಡೆದಿರಲ್ ದೊರೆಯಲೆನಗೆಂದು ಬಂದಸುಂ ಗೊಳೆ ಪೊಣರ್ದ೦ ಸುರರ್ ಪೊಗಚಿ ತನ್ನಳವಂ ಜಗದೇಕಮಲ್ಲನೊಳ್ ll೧೪೯
ಬೇರೆಯಾಗಿ ಒಬ್ಬೊಬ್ಬರಲ್ಲಿ ಸೇರಿಕೊಂಡು ನಿಂತರು. ೧೪೭. ನಿರಂತರವಾಗಿ ಬೀಳುವ ಬಾಣಗಳ ಮಳೆಯ ನಡುವೆ ನುಸುಳಿಕೊಂಡು ಬಂದು ಪ್ರಕಾಶಿಸುವ ಸೂರ್ಯಕಿರಣವು ಬಾಣದ ಮಳೆಯ ಮಧ್ಯೆ ಸುರಿಯುವ ಬಿಳಿಯ ಕಿರಣಗಳ ಮಳೆಯೆಂಬಂತಾಯಿತು ಎನ್ನುವ ಹಾಗೆ ಎಡಬಿಡದೆ ಹಾದು ಬರುತ್ತಿರುವ ಬಾಣಗಳಿಂದ ಪ್ರತಿಭಟಿಸಿದ ಚತುರಂಗಸೈನ್ಯವನ್ನು ಅರ್ಜುನನು ಕತ್ತರಿಸಿ, ಓಡಿಸಿ ರಾಶಿಮಾಡಿಕೊಂಡು ಅರೆದು ಪುಡಿಮಾಡಿದನು. ೧೪೮. 'ಶೂರರಿಗೂ ಬಲಿಷ್ಠರಾದ ವೀರರಿಗೂ ಸವಾಲು ಮಾಡುತ್ತಿದ್ದೇನೆ. (ಬಾಣಗಳನ್ನು ಎತ್ತಿದ್ದೇನೆ), ಪ್ರತಿಭಟಿಸುವುದಕ್ಕೆ ಇದೇ ಹದವಾದ ಕಾಲ. ಸೈಂಧವನನ್ನು ಗೆಲ್ಲುವುದಕ್ಕಾಗಿ ನಾನು ಬಂದಿದ್ದೇನೆ. ಕೊಲ್ಲುತ್ತೇನೆ. ಗುಂಪಾಗಿ ನಿಂತು ಎದುರಿಸಿ ಎಂದು ಪ್ರತಿಭಟಿಸಿದವರನ್ನು ಮೂದಲಿಸಿದನು (ಅಣಕವಾಡಿದನು). ಪ್ರಚಂಡವಾದ ಪ್ರಳಯಕಾಲದ ಗುಡುಗಿನ ಶಬ್ದದಿಂದ ಆರ್ಭಟಮಾಡಿ ಹೊಡೆದು ಬಾಣಗಳ ಸಮೂಹದಿಂದ ಆಕಾಶಪ್ರದೇಶವನ್ನು ಹೂಳಿದನು. ಅದರಿಂದ ಭಯಂಕರವಾದ ಕತ್ತಲೆಯು ಆವರಿಸಿತು. ವ|| ಹಾಗೆ ಅಮೋಘಾಸ್ತಧನಂಜಯನಾದ ಅರ್ಜುನನು ಹೊಡೆದ ಬಾಣಗಳ ಸಮೂಹದಿಂದುಂಟಾದ ಯುದ್ಧಗತ್ತಲೆಯೇ ಮೊಲಗತ್ತಲೆಯನ್ನು (ಚಂದ್ರನಲ್ಲಿರುವ ಮೊಲಗತ್ತಲೆಯನ್ನು - ರಾತ್ರಿಯ ಭ್ರಮೆಯನ್ನು) ಉಂಟುಮಾಡಲು “ಸೂರ್ಯನು ಮುಳುಗಿದನು-ಅರ್ಜುನನು ಸೋತನು” ಎಂದು ಕೌರವ ಸೈನ್ಯವು ಕೂಗಿಕೊಂಡಿತು. ೧೪೯. ತಕ್ಷಣವೇ ಅರ್ಜುನನು ಪ್ರಕಾಶಮಾನವಾದ ಆಸ್ಟ್ರೇಯಾಸ್ತ್ರವನ್ನು ಪ್ರಯೋಗಿಸಲು ಕತ್ತಲೆ ಹರಿದು ಓಡಿಹೋಯಿತು. ಆಗ ಮಹಾರಥರು ವ್ಯಥೆಪಟ್ಟು ಹೆದರಿದರು. ಸೈಂಧವನು ತನ್ನ ಶಕ್ತಿಗೂ ತನ್ನ ಬಾಹುಬಲದ
3G