________________
೫೫೨) ಪಂಪಭಾರತಂ ಬಾಳ ಬಾಯೊಳ್ ಚಕ್ರಾಕೃತಿಯೊಳ್ ತಲೆಯಂ ತಿರುಪುತ್ತುಮಿರ್ದಾಗಳದಂ ಮುರಾಂತಕಂ ಕಂಡು ವಿದ್ವಿಷ್ಟ ವಿದ್ರಾವಣಂಗೆ ತೋಜಿದೊಡೆಕoll ನರನೆಯೊಡೆ ಪಡೆದು, ಕರಂ
ಕರವಾಳೊಡನಮರೆ ಕಾಸಿ ಬೆಚ್ಚಂತ ವಸುಂ | ಧರೆಯೊಳ್ ಬಿತ್ತಿರ್ದುದಂ ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ |
| ဂဂ
ವl ಆಗಲ್ ಸಾತ್ಯಕಿ ಮುಳಿಸಿನೊಳ್ ಕಣ್ಣಾಣದ ಭೂರಿಶ್ರವನ ತಲೆಯನರಿದು ತನ್ನೇಳಂಗೆ ತಾನೆ ಸಿಗ್ಗಾಗಿ ಪೋದನನ್ನೆಗಂ ಯಮನಂದನನ ಬೆಸದೊಳ್ ಫಲ್ಗುಣನಂ ಕಯ್ಯೋಳಲ್ ಬರ್ಪ ಮರುನ್ನಂದನಂಗಾ ದ್ರೋಣರಡ್ಡಂ ಬಂದೊಡೆ ಗುರುಗೆ ಗುರುದಕ್ಷಿಣೆಗುಡುವಂತವರ ರಥಮಂ ಶತಚೂರ್ಣ ಮಾಡಿ ಕಳಿಂಗರಾಜ ಗಜಘಟೆಗಳನೌಂಕಿ ಸೊರ್ಕುತ್ತುಂ ಬರೆ ದುಶ್ಯಾಸನಾದಿಗಳದಿರದಿದಿರ ಬಂದಾಂತೊಡೆ
ಚಂ11 ನಿಡುವಗೆ ಸೈಪಿನಿಂದ ದೊರೆಕೊಂಡುದಿವರ್ ಗಜೆಗೊಂಡನಪ್ರೊಡೀ
ಗಡೆ ಪರೆದಪ್ಪರೆಚ್ಚು ತಲೆ ಕೊಲೊನಿವಂದಿರನೆಂದು ನಚ್ಚಿನ | ಚುಡಿವಿನಮೆಟ್ರೊಡೆಯಿನೆಚ್ಚರುಣಾಂಬು ಕಲಂಕಿ ಪಾಯ ಮು ನ್ನಡಿಯೊಳುರುಳರಂಧನೃಪನಂದನರಂದು ಮರುತ್ತನೂಜನಾ ||
೧೪೨
ಚಕ್ರಾಕೃತಿಯಿಂದ ತಲೆಯನ್ನು ತಿರುಗಿಸುತ್ತಿದ್ದಾಗ ಅದನ್ನು ಕೃಷ್ಣನು ನೋಡಿ ವಿದ್ವಿಷ್ಟ ವಿದ್ರಾವಣನಾದ ಅರ್ಜುನನಿಗೆ ತೋರಿಸಿದನು. ೧೪೧. ಅರ್ಜುನನು (ಭೂರಿಶ್ರವನನ್ನು ಹೊಡೆಯಲು ಅವನ ಕೈ ಕತ್ತರಿಸಿಹೋಗಿ ಕತ್ತಿಯೊಡನೆ ಕಾಯಿಸಿ ಬೆಸೆದ ಹಾಗೆ ಅಂಟಿಕೊಂಡಿದ್ದು ಭೂಮಿಯಲ್ಲಿ ಬಿದ್ದಿತು. ಭೂರಿಶ್ರವನು ಪ್ರತಿಜ್ಞೆಮಾಡಿ ಹಿಡಿದ ಮುಷ್ಟಿಯು ಎಷ್ಟು ಸ್ಥಿರವಾದುದೊ! ವ|| ಆಗ ಸಾತ್ಯಕಿಯು ಕೋಪದಿಂದ ಕುರುಡನಾಗಿ ಭೂರಿಶ್ರವನ ತಲೆಯನ್ನು ಕತ್ತರಿಸಿದನು. ತನ್ನ ಯುದ್ಧಕಾರ್ಯಕ್ಕೆ ತಾನೆ ನಾಚಿಕೊಂಡು ಹೋದನು. ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ ಅರ್ಜುನನಿಗೆ ಸಹಾಯಕನಾಗಿ ಬರುತ್ತಿದ್ದ ಭೀಮನಿಗೆ ದ್ರೋಣಾಚಾರ್ಯರು ಅಡ್ಡಲಾಗಿ ಬರಲು ಭೀಮನು ಗುರುವಿಗೆ ಗುರುದಕ್ಷಿಣೆಯನ್ನು ಕೊಡುವಂತೆ ಅವರ ತೇರನ್ನು ನೂರು ಚೂರುಗಳನ್ನಾಗಿ ಮಾಡಿ ಕಳಿಂಗರಾಜನ ಆನೆಯ ಸಮೂಹವನ್ನು ಒತ್ತಿ ಸೋಕುತ್ತ ಬರಲು ದುಶ್ಯಾಸನನೇ ಮೊದಲಾದವರು ಹೆದರದೆ ಎದುರಾಗಿ ಬಂದು ಪ್ರತಿಭಟಿಸಿದರು. ೧೪೨. ದೀರ್ಘಕಾಲದ ಶತ್ರುಗಳಾದ ಇವರು ಅದೃಷ್ಟದಿಂದ ದೊರೆಕೊಂಡಿದ್ದಾರೆ. ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದುರಿ ಓಡಿಹೋಗುತ್ತಾರೆ. ಇವರನ್ನು ಬಿಲ್ಲಿನಿಂದಲೇ ಪೂರ್ಣವಾಗಿ ಹೊಡೆದು ಕೊಂದುಹಾಕುತ್ತೇನೆ ಎಂದು ತನ್ನ ಆತ್ಮವಿಶ್ವಾಸಕ್ಕೆ ಪಾತ್ರವಾದ ಮುದ್ರೆಯನ್ನು ಒಡೆಯುವ ಹಾಗೆ ಹೊಡೆಯಲು ಆ ಹೊಡೆದ ಕಡೆಯ ಗಾಯದಿಂದ ಹೊರಟ ರಕ್ತವು ಕದಡಿ ಹಾಯಲು