________________
ಏಕಾದಶಾಶ್ವಾಸಂ | ೫೪೯ ವll ಅಂತು ವಿನಯಮನೆ ನುಡಿದ ವಿಕ್ರಮಾರ್ಜುನನಂ ಗುರುವನೇಕಾಶೀರ್ವಚನಂಗಳಿಂ ಪರಸುವುದುಂ ಪದುಮನಾಭನ ಚೋದಿಸುವ ರಥವೇಗದಿಂ ಪದ್ಮವ್ಯೂಹಮನೆಯ್ದವಂದು ಸುಯೋಧನನ ಸಾಧನದೊಳ್ ತಾಗಿದಾಗಚಂ ಪೊಸ ಮಸೆಯಂಬು ಕಾರಮವೋಲ್ ಕಳಿಯುತ್ತಿರೆ ನೇರ್ದು ಸೀಳು ಖಂ ಡಿಸಿ ಕಡಿದೊಟ್ಟಿ ಸುಟ್ಟನಿತುಮಂ ನಿಜ ಮಾರ್ಗಣ ಕೋಟಿಯಿಂದರು | ರ್ವಿಸ ತೆಗೆದೆಚ್ಚು ತನ್ನ ಮೊನೆಯಂಬುಗಳಿಂ ಚತುರಂಗಮಯ್ಯ ಕೀ ಲಿಸೆ ಪಡ ಚಿತ್ರದೊಂದೆ ಪಡೆಯಂತವೊಲಾಯಕಳಂಕರಾಮನಿಂ ||
೧೩೫ ಅಡಿ ತೊಡೆ ಫೋರ್ಕುಜಂ ತೆಗಲೆ ಕೈ ಕಣಕಾಲ್ ಕೊರಲೆಂಬಿವುಂ ಬೆರಲ್ ನಡುವುರ ಬೆನ್ ಬಸಿಖ್ ತೊಳಕು ಕರ್ಚರ ಮುಯ್ಯು ಮುಸುಂಬು ಮೂಗು ಪ ರ್ದೊಡ ಕಟ ಮುಂಮಡಂ ಪರಡು ಸಂದಿ ನೊಸಲ್ ಪಹ ಕಣ್ ಕದ೦ಪಿವೆಂ ಬೆಡೆಯನೆ ನಟ್ಟುವುರ್ಚಿದುವು ನೇರ್ದುವು ಸೀಳುವು ಪಾರ್ಥನಂಬುಗಳ್ || ೧೩೬
ವ|| ಅಂತು ಮಾಜಾಂತ ಮಾರ್ಪಡೆಯೆಲ್ಲಮಂ ಜವನೊಕ್ಕಲಿಕ್ಕಿ ತನ್ನೊಳ್ ಪೋಗದ ಪಳದ ಬಾಹೀಕ ಸೋಮದತ್ತ ಭೂರಿಶ್ರವರನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆ ದೆಸೆಗೆ ಸೂಸುವನ್ನೆಗಮೆಂಟ್ಟಿ ಕಾಂಭೋಜ ಸುದಕ್ಷಿಣ ಜಯತ್ತೇನರೆಂಬರಯ್ತರೆ ಮೂವರಕ್ಕೋಹಿಣೀ ಪತಿಗಳೊರಸು ನಾಲ್ಯಾಸಿರ್ವರ್ ಮಕುಟವರ್ಧನಂ ಕೊಂದು ಶಲ್ಯನುರಮಂ ಬಿರಿಯಚ್ಚು
ಬಾಲ್ಯದಿಂದಾದುದು, ಇಂದಾಯಿತೇ? ನಿಮಗೆ ನಾನು ಹೆದರದಿದ್ದರೆ ಯುದ್ಧದಲ್ಲಿ ಮೂರುಲೋಕವನ್ನು ಹೆದರಿಸಲು ಸಮರ್ಥನಾಗುತ್ತೇನೆಯೇ?' ವ|| ಎಂದು ನಮ್ರತೆಯಿಂದಲೇ ಮಾತನಾಡಿದ ವಿಕ್ರಮಾರ್ಜುನನನ್ನು ದ್ರೋಣಾಚಾರ್ಯರು ಅನೇಕ ಆಶೀರ್ವಚನಗಳಿಂದ ಹರಸಿದರು. ಕೃಷ್ಣನು ನಡೆಸಿದ ರಥದ ವೇಗದಿಂದ ಪದ್ಮವ್ಯೂಹದ ಸಮೀಪಕ್ಕೆ ಬಂದು ದುರ್ಯೋಧನನ ಸೈನ್ಯವನ್ನು ತಾಗಿದನು. ೧೩೫. ಹೊಸದಾಗಿ ಮಸೆದಿರುವ ಬಾಣಗಳು ಕಾರ್ಗಾಲದ ಮಳೆಯ ಹಾಗೆ ಸುರಿಯುತ್ತಿರಲು ಅರ್ಜುನನು ಅಷ್ಟನ್ನೂ ತನ್ನ ಬಾಣಗಳ ತುದಿಯಿಂದ ಕತ್ತರಿಸಿ, ಸೀಳಿ, ಮುರಿದು, ತುಂಡಿಸಿ, ರಾಶಿಮಾಡಿ ಸುಟ್ಟು ತನ್ನ ಬಾಣಗಳ ಸಮೂಹದಿಂದ ಚತುರಂಗಸೈನ್ಯವೂ ಹೆದರುವ ಹಾಗೆ ಸೆಳೆದು ಹೊಡೆದು ಚೆನ್ನಾಗಿ ನಾಟಿಸಲು ಸೈನ್ಯವು ಚಿತ್ರದಲ್ಲಿ ಬರೆದ ಸೈನ್ಯದಂತೆ ಆಯಿತು. ೧೩೬. ಪಾದ, ತೊಡೆ, ಹೊಕ್ಕಳು, ಹೆಗ್ಗತ್ತು, ಕೈ, ಕಾಲಿನ ಕೆಳಭಾಗ, ಕೊರಳು ಎಂಬುವುಗಳನ್ನೂ ಬೆರಳು, ನಡು, ಎದೆ, ಬೆನ್ನು, ಹೊಟ್ಟೆ, ತೊಳಕುಸ(?) ಕರ್ಚರೆ, ಹೆಗಲು, ಮೂತಿ, ಹೆರೊಡೆ, ಸೊಂಟ, ಕಾಲ ಹರಡಿನ ಹಿಂಭಾಗ ಮತ್ತು ಮುಂಭಾಗ, ಕಾಲಿನ ಹರಡು, ಕೀಲು, ಹಣೆ, ಕಣ್ಣು, ಕೆನ್ನೆ- ಈ ಎಲ್ಲಾ ಸ್ಥಳಗಳನ್ನೂ ಅರ್ಜುನನ ಬಾಣಗಳು ನಾಟಿದುವು, ಸೀಳಿದವು ಮತ್ತು ಹೊಳು ಮಾಡಿದುವು. ವ|| ಎದುರಿಸಿದ ಪ್ರತಿ ಸೈನ್ಯವೆಲ್ಲವನ್ನೂ ಯಮನ ಒಕ್ಕಲವರನ್ನಾಗಿ ಮಾಡಿದನು. ಹೋಗದೆ ತನ್ನಲ್ಲಿಯೆ ಹೆಣೆದುಕೊಂಡ ಬಾಘೀಕ ಸೋಮದತ್ತ ಭೂರಿಶ್ರವರನ್ನು ಆನೆಯು ತುಳಿದ ಕುಂಟೆಯ ನೀರಿನಂತೆ ದಿಕ್ಕು ದಿಕ್ಕಿಗೂ ಚೆಲ್ಲುವವರೆಗೆ ಎಬ್ಬಿಸಿದನು. ಕಾಂಭೋಜ, ಸುದಕ್ಷಿಣ, ಜಯನರೆಂಬುವರು ಮೂರು ಅಕ್ಟೋಹಿಣೀಪತಿಗಳನ್ನೂ