________________
೫೦ | ಪಂಪಭಾರತಂ
ದುರ್ಯೊಧನನು ಈ ವೃತ್ತಾಂತವನ್ನು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ತಿಳಿದು 'ಪಾಟಿಸುವೆನ್, ಒಯ್ಯನೆ ಮುಳೊಳೆ ಮುಳ್ಳನೆಂದು ತಾನ್ ಈ ನಯದಿಂದೆ ಪೆರ್ಚಿ ಪೊರೆದುಕೊಳಂದೊಡನುಂಡನಲ್ಲವೆ?' ಎಂದು ವಿಷಬೀಜವನ್ನು ಬಿತ್ತಿದನು. ಕರ್ಣನಿಗೆ ಎಂತಹ ಧರ್ಮಸಂಕಟ! ಸ್ವಲ್ಪ ಮನಸ್ಸನ್ನಿಳಿಸಿದ್ದರೆ ಭಾರತದ ಗತಿ ಹೇಗೆ ತಿರುಗುತ್ತಿತ್ತು! ಕರ್ಣನೆಂದಿಗೂ ಜಗ್ಗುವವನಲ್ಲ. ಅವನಲ್ಲಿ ಸಂತೋಷವೂ ದುಃಖವೂ ಏಕಕಾಲದಲ್ಲಿ ತಲೆದೋರಿದುವು. 'ಏಕೆ ಪೇಳ್ವೆರೊ' ಸುಯೋಧನನ್, ಎನಗೊಳಿದ ಕೃತಮಂ ಪೆವಿಗಿಕ್ಕಿ ನೆಗ ಮಾಸೆ ನಣ್ಣಿನ ನೆಪದಿಂದ ಪಾಂಡವರನ್, ಆನ್ ಒಳಪೊಕ್ಕೊಡೆ ನೀಮೆ ಪೇಸಿರೇ?” “ಭೂಪೋತ್ತಮನಂ ಬಿಸುಟ್ಟು ಇರದೆ ನಿಮೊಳೆ ಪೊಕ್ಕೊಡೆ ಬೇಡನಲ್ಲನೇ'? ಎಂದು ಖಡಾಖಂಡಿತವಾಗಿ ತಿಳಿಸಿ ತನ್ನಲ್ಲಿಯೇ 'ಕುರುಪತಿಗಿಲ್ಲ ದೈವಬಲಂ, ಸೋದರರನೆಂತು ಕೊಲ್ವೆಂ? ಅಲ್ಕತೊಳೆನ್ನಂ ಪೊರೆದು ಎಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ? ಎನ್ನೊಡಲಂ ನಾಂ ತವಿಪೆಂ'. ಈ ಇಬ್ಬಗೆಯಾದ ಸಮಸ್ಯೆಯೂ ಈ ಕಠಿಣ ನಿರ್ಧಾರವೂ ಭಾರತದಲ್ಲಿ ಮತ್ತಾರಿಗೂ ಇಲ್ಲ. ದುದ್ಯೋಧನನ ಪಕ್ಷೀಯರಲ್ಲನೇಕರು ಉಪ್ಪಿನ ಋಣಕ್ಕಾಗಿ ಶರೀರವನ್ನು ಒಡೆಯನಿಗೆ ಒತ್ತೆಯಿಟ್ಟು ಹೃದಯವನ್ನು ಪಾಂಡವರಿಗೆ ಧಾರೆಯೆರೆದಿದ್ದರು. ರಾಜನು ಆಕ್ಷೇಪ ಮಾಡಿದಾಗ ಭರದಿಂದ ಕಾದಿದರೂ ಅವರ ಸಹಾಯದಿಂದಲೇ ಪಾಂಡವರು ಜಯಶಾಲಿಗಳಾದರು; ಕರ್ಣನದು ಹಾಗಲ್ಲ. ಸ್ವಾಮಿಭಕ್ತಿಗೂ ಕರ್ತವ್ಯನಿಷ್ಠೆಗೂ ಸೋದರಪ್ರೇಮಕ್ಕೂ ಮಧ್ಯೆ ನಡೆದ ಹೋರಾಟ, ವಿಧಿಯೇ ಉದ್ದೇಶಪೂರ್ವಕವಾಗಿ ಆ ಸ್ಥಿತಿಯನ್ನು ತಂದೊಡ್ಡಿತೆಂದು ಕಾಣುತ್ತದೆ. ಕರ್ಣವಧಾನಂತರ ಪಾಂಡವರು ದುಃಖ ಪಡುವಾಗ ಹೇಳುವಂತೆ ಮೊದಲೇ ಅವರಿಗೆ ಅವನ ಸಂಬಂಧ ತಿಳಿಸಿದ್ದರೆ ಅವನನ್ನೇ ರಾಜನನ್ನಾಗಿ ಮಾಡಿ ತಾವು ಅವನ ಸೇವೆ ಮಾಡಲು ಸಿದ್ದರಾಗಿದ್ದರು. ದುಧನ ನಾದರೋ ಅದಕ್ಕಿಂತಲೂ ಮಿಗಿಲಾಗಿ ಧರಾತಳಮಂ ಅವನಿಗಿತ್ತು ಅವನು ಕೊಟ್ಟಿದ್ದನ್ನು ಪ್ರಸಾದವೆಂದು ಸ್ವೀಕರಿಸಿ ಮನೋಮುದದಿಂದ ಇರಬೇಕೆಂದಿದ್ದ. ವಿಧಿಯು ಅದಕ್ಕೆ ಅವಕಾಶ ಕೊಡಲಿಲ್ಲ. ಇಲ್ಲದ ತೊಡಕುಗಳನ್ನು ತಂದೊಡ್ಡಿ ಅವನನ್ನೇ ಆಹುತಿಯನ್ನಾಗಿ ತೆಗೆದುಕೊಂಡಿತು.
ಕೃಷ್ಣನು ಅಲ್ಲಿಗೇ ಬಿಡಲಿಲ್ಲ. ಕುಂತಿಯನ್ನು ಕರ್ಣನಲ್ಲಿಗೆ ಕಳುಹಿಸಿದ, ಅವಳು ಬಂದು ನಿನ್ನನುಜರ್ ನಿನ್ನಂ ಬೆಸಕೆಯ್ಯ ನೀನೆ ನೆಲನನಾಳ್ವುದು ಕಂದ' ಎಂದು ಬೇಡಿದಳು. ತಂದೆಯಾದ ದಿನಪನು ಬಂದು 'ಅಂದಿನಂತೆ ಇಂದೂ ಮೋಸ ಹೋಗಬೇಡ.' ಎಂದು ಎಚ್ಚರಿಸಿದ. ಕರ್ಣನಾದರೋ ಮುಗುಳಗೆ ನಕ್ಕು
ಪಾಟಿಯನೊಕ್ಕು, ಆಳನ ಗೆಯ್ದ ಸತ್ಯ ತಮುಮಂ ಪಿಂತಿಕ್ಕಿ ಜೋಳಕ್ಕೆ ತ ಪಿಯುಂ, ಇನ್ ಬಾಟ್ಟುದೆ? ಪೂಣ್ಣು ನಿಲ್ಲದಿಕೆಯಂ ಬಾಳ್ವಿಂತು ವಿಖ್ಯಾತ ಕೀ ರ್ತಿಯವೊಲ್, ಈಯೊಡಲ್, ಅಬ್ಬೆ ಪೇಟೆಂ ಎನಗೇಂ ಕಲ್ಪಾಂತರಸ್ಥಾಯಿಯೇ ಮೀಂಗುಲಿಗನಾಗಿಯುಂ, ಅಣಂ, ಆ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ ದಂಗೆನಗೆ ಬಿಸುಡಲಕ್ಕುಮೆ ನೀಂ ಗಳ ಪಂಚಲನೆ ಬಿಸುಡಿಂ, ಇನ್ ಎನ್ನೆಡೆಯೊಳ್