________________
೬೪
ಏಕಾದಶಾಶ್ವಾಸಂ | ೫೨೩ ಅಚಿದ ಬಿಲ್ವಡೆ ಮಾಣದೆ ತಟ್ಟಿದ ರಥಮೆಯ ಬಗಿದ ಪುಣ್ಯಳ ಪೊಜತೆಯಿಂ | ಮೋಬೈದ ಕರಿ ಘಟೆ ಜವನಡು
ವಯನನುಕರಿಸೆ ವೀರ ಭಟ ರಣರಂಗಂ || ವ|| ಆಗಳ್ ದೃಷ್ಟಕೇತು ವೃಷಸೇನನೊಳ್ ಸಾತ್ಯಕಿ ಭಗದತ್ತನೊಳ್ ದ್ರುಪದ ಧೃಷ್ಟದ್ಯುಮ್ಮರಿರ್ವರುಂ ದ್ರೋಣಾಚಾರ್ಯನೊಳ್ ಪ್ರತಿವಿಂಧ್ಯಂ ಸೌಬಲನೊಳ್ ಘಟೋತ್ಕಚಂ ಕರ್ಣನೋಳ್ ಪೆಣೆದು ಕಾದೆಚಂti ಪೊಸಮಸೆಯಂಬುಗಳ್ ದಸೆಗಳಂ ಮಸುಳ್ಳನ್ನೆಗಮೆಮ್ಮೆ ಪಾಯೆ ಪಾ
ಯಿಸುವ ರಥಂಗಳಾ ರಥದ ಕೀಲುಣಿದಾಗಳೆ ಕೆಯ್ಯನಲ್ಲಿ ಕೋ | ದೆಸಗುವ ಸೂತರಂಬು ಕೊಳೆ ಸೂತರುರುಳುಮಿಳಾತಳಕ್ಕೆ ಪಾ
ಯಸಿಯೊಳೆ ತಾಗಿ ತಳಿವ ನಿಚ್ಚಟಗೊಪ್ಪಿದರಾಜಿರಂಗದೊಳ್ || ೬೫
ವ|| ಆಗಳ ಕಳಿಂಗರಾಜನ ಗಜಘಟೆಗಳನಿತುಮೊಂದಾಗಿ ಭೀಮಸೇನನ ರಥಮಂ ವಿಳಯ ಕಾಳ ಜಳಧರಂಗಳೆಲ್ಲದೊಂದಾಗಿ ಕುಲಗಿರಿಯಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ ಮll. ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ ಕೆಯ್ದಾರ್ದುದಗ್ನನನೋ
ರಥಮಿಂದೆಂದು ಕಡಂಗಿ ಮಾಣದೆ ಸಿಡಿಲ್ ಪೊಯ್ಕಂತೆವೋಲ್ ಪೊಯ್ಯುದುಂ | ರಥಯೂಥ ಧ್ವಜ ಶಸ್ತ್ರ ಶಂಖಪುಟದೊಳ್ ಘಂಟಾಸಮೇತಂ ಮಹಾ ರಥನಿಂದಂ ಕುಳಶೈಳದಂತೆ ಕರಿಗಳ್ ಬೀಚಿಂದುವುಗ್ರಾಜಿಯೊಳ್ || ೬೬
ಯುದ್ಧಮಾಡಿದುವು. ೬೯. ವೀರಭಟ ರಣರಂಗವು ನಾಶವಾದ ಬಿಲ್ದಾರರ ಸೈನ್ಯದಿಂದಲೂ ತಪ್ಪದೆ ತಗ್ಗಿದ ರಥದಿಂದಲೂ ಅದರುವ ಹುಣ್ಣುಗಳ ಭಾರದಿಂದಲೂ ಕುಗ್ಗಿದ ಆನೆಗಳ ಸಮೂಹದಿಂದಲೂ ಯಮನು ಅಡುಗೆಮಾಡುವ ಅಡುಗೆಯ ಮನೆಯನ್ನು ಹೋಲುತ್ತಿತ್ತು. ವ|| ಆಗ ಧೃಷ್ಟಕೇತುವು ವೃಷಸೇನನಲ್ಲಿಯೂ ಸಾತ್ಯಕಿಯು ಭಗದತ್ತನಲ್ಲಿಯೂ ದ್ರುಪದ ಧೃಷ್ಟದ್ಯುಮ್ಮರಿಬ್ಬರೂ ದ್ರೋಣಾಚಾರ್ಯನಲ್ಲಿಯೂ ಪ್ರತಿವಿಂದ್ಯನು ಶಕುನಿಯಲ್ಲಿಯೂ ಘಟೋತ್ಕಚನು ಕರ್ಣನಲ್ಲಿಯೂ ಹೆಣೆದುಕೊಂಡು ಕಾದಿದರು. ೬೫. ಹೊಸದಾಗಿ ಮಸೆದ ಬಾಣಗಳೂ, ದಿಕ್ಕುಗಳನ್ನೆಲ್ಲ ಮಲಿನಮಾಡುವ ರೀತಿಯಲ್ಲಿ ವ್ಯಾಪಿಸಲು ಚೋದಿಸುತ್ತಿದ್ದ ರಥಗಳೂ, ಆ ರಥಗಳ ಕೀಲು ಮುರಿದೊಡನೆ ತಮ್ಮ ಕೈಗಳನ್ನೇ ಆ ಕೀಲಿನ ಸ್ಥಾನದಲ್ಲಿ ಪೋಣಿಸಿ ರಥವನ್ನು ನಡೆಸುತ್ತಿದ್ದ ಸಾರಥಿಗಳೂ, ಪ್ರತಿಪಕ್ಷದಿಂದ ಬಂದ ಬಾಣಗಳು ತಮ್ಮ ಶರೀರದಲ್ಲಿ ನಾಟಲು ಸೂತರು ನೆಲಕ್ಕೆ ಉರುಳಿದರೂ ರಥದಿಂದ ನೆಲಕ್ಕೆ ನೆಗೆದು ಕತ್ತಿಯಿಂದ ಘಟ್ಟಿಸಿ (ಪರಸೈನ್ಯವನ್ನು) ಪ್ರತಿಭಟಿಸಿ ಸೈರ್ಯದಿಂದ ಹೋರಾಡುವ ಯೋಧಾಗ್ರೇಸರರೂ ಯುದ್ಧರಂಗದಲ್ಲಿ ಶೋಭಿಸಿದರು. ವ|| ಆಗ ಕಳಿಂಗರಾಜನ ಆನೆಯ ಸಮೂಹವನ್ನೂ ಒಂದಾಗಿ ಭೀಮಸೇನನ ತೇರನ್ನು ಪ್ರಳಯಕಾಲದ ಮೋಡಗಳೆಲ್ಲ ಒಂದಾಗಿ ಕುಲಪರ್ವತವನ್ನು ಮುತ್ತುವಂತೆ ಸುತ್ತಿ ಮುತ್ತಿದುವು. ೬೬. ಭೀಮಸೇನನು ರಥದಿಂದ ಭೂಮಿಗೆ ಹಾರಿ ಗದೆಯನ್ನೆತ್ತಿಕೊಂಡು 'ನನ್ನ ಇಷ್ಟಾರ್ಥ ಈದಿನ ಕೈಗೂಡಿತು' ಎಂದು ಉತ್ಸಾಹಿಸಿ