________________
ಏಕಾದಶಾಶ್ವಾಸಂ | ೫೨೧
ಒಡನೆ ನಭಂಬರಂ ಸಿಡಿಲ್ವ ಪಂದಲೆ ಸೂಸುವ ಕಂಡದಿಂಡೆಗಳ ತೊಡರೆ ತೆರಳ ನೆತ್ತರ ಕಡಲ್ ನೆಣದೊಳೆಸಳ್ ಜಿಗಿಲಗು | ವಡರೆ ನಿರಂತರಂ ಪೊಳೆವ ಬಾಳುಡಿ ಸುಯ್ಯ ನವ ಪ್ರಣಂಗಳೊಳ್ ಪೊಡರೆ ಪೊದಟ್ಟುದದ್ಭುತ ಭಯಾನಕಮಾಹವ ರಂಗಭೂಮಿಯೊಳ್ ||೫೮ ವ|| ಆಗಳೆರಡುಂ ಬಲದ ಸೇನಾನಾಯಕರೊಂದೊರ್ವರೊಳ್ ಕಾದುವಾಗಳ್
ಚoll
ಕುಂಭಸಂಭವಂ ಧರ್ಮಪುತ್ರನ ಮೊನೆಯೊಳ್ ಭರಂಗೆಯು ಕಾದುವಾಗ
ವ|| ಧ್ವಜಮಂ ಖಂಡಿಸಿ ಪೂಣ್ಣು ಬಾಣದೊಳೆ ದೃಷ್ಟದ್ಯುಮ್ನನಂ ನೆಟ್ಟನೊ
ಟೂಜೆಯಿಂ ತೂಳ್ಳಿ ಶಿಖಂಡಿಯಂ ದ್ರುಪದನಂ ಕಾಯಿಂದಮೇಸಾಡಿ ಮಿ |' ಕು ಜವಂ ಕೊಲ್ವವೊಲಾತನಿಂ ಕಿಯರಂ ಪನ್ನೊರ್ವರು ಕೊಂದು ಮ 'ಜನಂ ಮಾಣದೆ ಕೊಂದನೊಂದೆ ಶರದಿಂ ನಿಶ್ಯಂಕನಂ ಶಂಕನಂ || ೫೯ ವ|| ಆಗಳ್ ಸಾಲ್ವಲ ದೇಶದರಸಂ ಚೇಕಿಂ ಪ್ರಳಯಕಾಲದ ಮೇಘಘಟೆಗಳೆನಿಸುವ ನೇಕಾನೇಕಪ ಘಟೆಗಳೆರಸರಸನಂ ಪೆರಿಗಿಕ್ಕಿ ಬಂದು ತಾಗಿದಾಗಳ್
ಕಂ।।
ಓರೊಂದ ಪಾರೆಯಂಬಿನೊ
ಊರೊಂದೆ ಗಜೇಂದ್ರಮುರುಳ ತೆಗೆನೆದೆ 1
ಚೋರಣದೊಳ್ ಚೇಕಿತ್ಸನ ನಾರುಮಗುರ್ವಿಸೆ ಘಟೋದ್ಭವಂ ತಟದಾರ್ದಂ ||
೬೦
ಮುರಿದುವು, ತೊಡೆಗಳು ಒಡೆದುವು, ಹುಣ್ಣುಗಳು ಬಿರಿದುವು-೫೮. ಒಡನೆಯೇ ಆಕಾಶದವರೆಗೂ ಸಿಡಿಯುವ ಹಸಿಯ ತಲೆಯೂ ಚೆಲ್ಲುವ ಮಾಂಸಖಂಡದ ಮುದ್ದೆ ಗಳೂ ಸಾಂದ್ರವಾದ ರಕ್ತಸಮುದ್ರದ ಕೊಬ್ಬಿನ ಒಳ್ಳೆಯ ಕೆಸರಿನಲ್ಲಿ ಅಂಟಿಕೊಂಡು ಭಯವನ್ನು ಹೆಚ್ಚಿಸುತ್ತಿರಲು, ಒಂದೇ ಸಮನಾಗಿ ಹೊಳೆಯುತ್ತಿರುವ ಕತ್ತಿಯ ಚೂರುಗಳು ದುಡಿಯುತ್ತಿರುವ ಹೊಸಗಾಯಗಳಲ್ಲಿ ಥಳಥಳಿಸುತ್ತಿರಲು ಯುದ್ಧಭೂಮಿ ಯಲ್ಲಿ ಆಶ್ಚರ್ಯವೂ ಭಯವೂ ವ್ಯಾಪಿಸಿದುವು. ವll ಆಗ ಎರಡು ಸೈನ್ಯದ ಸೇನಾ ನಾಯಕರೂ ಪರಸ್ಪರ ಕಾದುವಾಗ ದ್ರೋಣನು ಧರ್ಮರಾಜನೊಡನೆ ಆರ್ಭಟಮಾಡಿ ಕಾದಿದನು. ೫೯, ಬಾವುಟವನ್ನು ಕತ್ತರಿಸಿ ದೃಷ್ಟದ್ಯುಮ್ನನನ್ನು ಬಾಣಗಳಲ್ಲಿ ಹೂಳಿ ಶಿಖಂಡಿಯನ್ನು ನೇರವಾಗಿ ಪೌರುಷದಿಂದ ತಳ್ಳಿ ದ್ರುಪದನನ್ನು ಕೋಪದಿಂದ ಹೊಡೆದು ಮೀರಿ ಆತನ ತಮ್ಮಂದಿರಾದ ಹನ್ನೊಂದು ಜನರನ್ನೂ ಯಮನು ಕೊಲ್ಲುವ ಹಾಗೆ ಕೊಂದು ವಿರಾಟನ ಮಗನಾದ ಶಂಕಾರಹಿತನಾದ ಶಂಖನನ್ನು ಒಂದೇ ಬಾಣದಿಂದ ಕೊಂದು ಹಾಕಿದನು. ವll ಆಗ ಸಾಲ್ವಲದೇಶದ ಅರಸನಾದ ಚೇಕಿತ್ಸನು ಪ್ರಳಯಕಾಲದ ಮೋಡಗಳೆನಿಸುವ ಅನೇಕ ಆನೆಯ ಗುಂಪುಗಳನ್ನು ಕೂಡಿಕೊಂಡು ರಾಜನನ್ನು ಹಿಂದಿಕ್ಕಿ ಬಂದು ತಗುಲಿದನು. ೬೦. ಒಂದೊಂದು ಪಾರೆಯಂಬಿನಿಂದಲೇ ಒಂದೊಂದು ಆನೆಯುರುಳಲು ಹೆದೆಯನ್ನು ಕಿವಿಯವರೆಗೆ ಸೆಳೆದು ಹೊಡೆದು ಕ್ರಮವಾಗಿ ಎಲ್ಲರೂ ಭಯಪಡುವ ಹಾಗೆ ಚೇಕಿತ್ಸನನ್ನು ದ್ರೋಣನು ಕತ್ತರಿಸಿ ಆರ್ಭಟಮಾಡಿದನು.