________________
ಏಕಾದಶಾಶ್ವಾಸಂ | ೫೧೧ ಚಂ|| ಜಗದೊಳವಧನಂ ಗೆಲಲೆಬಾರದದಾದೊಡಮೇಂ ಶಿಖಂಡಿ ತೊ
ಟ್ರಗೆ ಕೊಳೆ ಬಂದು ಮುಂದೆ ನಿಲೆ ಸಾವನಗಪುದು ನಾಳಿನೊಂದು ಕಾ | ಆಗದೂಳಿದಂ ನರಂಗಳಪದೀ ತೆಜದಿಂ ನೆಗಲ್ಯೇ ವೀರ ಲ ೬ ಗೆ ನೆಲೆಯಾಗು ಪೋಗೆನೆ ನೃಪಂ ಪೊಡೆವಟ್ಟು ಮನೋನುರಾಗದಿಂ || ೩೨
ವll ಬಂದು ಮಂದರಧರಂಗೆ ತದ್ವತ್ತಾಂತಮನೆಲ್ಲಮನಳೆಪಿ ನಿಶ್ಚಿಂತಮನನಾಗಿ ಪವಡಿಸಿದಾಗ ಚಂ ಚಲ ಚಲದಾಂತು ಕಾದುವ ಸುಯೋಧನ ಸಾಧನದೊಡ್ಡುಗಳ್ ಕಲ
ಇಲಳೆ ತೆರಳು ತೂಳು ಬಿಜುಡೆ ಗುಣಾರ್ಣವನಿಂದಮಾಜಿಯೊಳ್ | ಕೊಲಿಸಿ ಸಮಸ್ತ ಧಾತ್ರಿಯುಮನಾಳಿಪವೆಂದುಲಿವಂತೆ ಪಕ್ಕಿಗಳ
ಚಿಲಿಮಿಲಿಯೆಂಬ ಪೊಳೆ ಬಂದುದೊಡ್ಡಿದನಂತಕಾತ್ಮಜಂ || ೩೩
ವ|| ಆಗಳ್ ಕುರುಧ್ವಜಿನಿಯುಮನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳಂತಕಾಲಾಂತಕ ವಿಕಟಾಟ್ಟಹಾಸಗಳೆಂಬಂತೆ ಮೊಲಗೆ ಮಲೆದು ಬಂದೊಡ್ಡಿ ನಿಂದಾಗಕಂ!.
ಉಭಯ ಬಲದರಸುಗಳ ರಣ ರಭಸಂಗಳೊರಸು ಮುಳಿದು ಕೆಸೆ ಲಯ | ಕ್ಷುಭಿತ ಜಲನಿಧಿ ನಿನಾದಮ ನಭಿನಯಿಸಿದುದೊಗೆದು ನೆಗೆದ ಸಮರಾರಾವಂ ||
೩೪
೩೨. 'ಲೋಕದಲ್ಲಿ ಕೊಲ್ಲಲಾಗದವನನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ತಾನೆ ಏನು ? ನಾಳೆಯ ದಿನದ ಯುದ್ದದಲ್ಲಿ ಶಿಖಂಡಿಯು ಬೇಗನೆ ಮುಂದೆ ಬಂದು ನಿಂತರೆ ನನಗೆ ಮರಣವಾಗುತ್ತದೆ. ಈ ವಿಷಯವನ್ನು ಅರ್ಜುನನಿಗೆ ತಿಳಿಸದೆ ಮಾಡಿ ವೀರಲಕ್ಕಿಗೆ ಪೂರ್ಣವಾಗಿ ನೆಲೆಯಾಗು ಹೋಗು' ಎಂದನು: ಧರ್ಮರಾಜನು ಮನಸ್ಸಿನ ಸಂತೋಷದಿಂದ ನಮಸ್ಕಾರ ಮಾಡಿ ಹಿಂತಿರುಗಿದನು. ವ|| ಬಂದು ಶ್ರೀಕೃಷ್ಣನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿ ಚಿಂತೆಯಿಲ್ಲದ ಮನಸ್ಸಿನಿಂದ ಮಲಗಿದನು- ೩೩. 'ಹೆಚ್ಚಿನ ಹಠದಿಂದ ಕಾದುತ್ತಿರುವ ದುರ್ಯೊಧನನ ಸೈನ್ಯದ ಗುಂಪುಗಳು ಕೃಶವಾಗಿ ಚೆದರಿ ಒತ್ತರಿಸಲ್ಪಟ್ಟು ಬೆದರಿ ಓಡಿಹೋಗುವಂತೆ ಅರ್ಜುನನಿಂದ ಕೊಲ್ಲಿಸಿ ಸಮಸ್ತ ಭೂಮಂಡಲವನ್ನು ಅವನಿಂದಲೇ ಆಳುವ ಹಾಗೆ ಮಾಡುತ್ತೇವೆ' ಎಂದು ಕೂಗುವ ಹಾಗೆ ಹಕ್ಕಿಗಳು ಚಿಲಿಮಿಲಿಯೆಂದು ಶಬ್ದ ಮಾಡುತ್ತಿರುವ ಹೊತ್ತಿನಲ್ಲಿಯೇ (ಅರುಣೋದಯದಲ್ಲಿಯೇ) ಧರ್ಮರಾಯನು ಬಂದು ಸಾವಕಾಶ ಮಾಡದೆ ಸೈನ್ಯವನ್ನು ಒಡ್ಡಿದನು. ವll ಆಗ ಕೌರವ ಸೈನ್ಯವೂ ಅನೇಕ ಶಂಖ, ಕೊಂಬು, ನಗಾರಿ, ಪಣವ, ಜಲ್ಲರಿ, ಮೃದಂಗವೆಂಬ ವಾದ್ಯಗಳು ಪ್ರಳಯಕಾಲದ ಯಮನ ವಿಕಾರವಾದ ನಗುವಿನಂತೆ ಶಬ್ದಮಾಡಲು ಮದಿಸಿ ಬಂದು ಒಡ್ಡಿ ನಿಂತಿತು. ೩೪. ಎರಡು ಸೈನ್ಯದ ರಾಜರುಗಳೂ ಯುದ್ಧವೇಗದಿಂದ ಕೂಡಿ ಕೋಪದಿಂದ ಕೈಬೀಸಲಾಗಿ ಆಗ ಹುಟ್ಟಿ ಚಿಮ್ಮಿದ ಯುದ್ಧದ ಮೊಳಗು ಪ್ರಳಯಕಾಲದ ಕಲಕಿದ ಸಮುದ್ರಧ್ವನಿಯನ್ನು