________________
೪೯೬) ಪಂಪಭಾರತಂ ಭಟರ ಪಂದಲೆಗಳುಮಗುರ್ವುಮದ್ಭುತ ಭಯಾನಕ ವೀರ ಬೀಭತ್ಸ ರೌದ್ರ ರಸಂಗಳಂ ಪುದುಂಗೊಳಿಸೆ ಗಾಂಗೇಯಂ ನಾಡೆಯುಂ ಪೊತ್ತು ಕಾದೆಮll ಪಟ್ಟಂಗಟ್ಟದಿಳಾಧಿನಾಥರೆ ಪಯಿಂಛಾಸಿರ್ವರೊಳಾನೆಗಳ
ಪಟ್ಟಂಗಟ್ಟಿದುವೊಂದು ಲಕ್ಕ ತುರಗ ಪತ್ತೆಂಟು ಲಕ್ಕಂ ಪಡ | ಊಟ್ಟಯ್ಯಾಡಿದುವೊಂದೆ ಬಲ್ಲೆನೆ ನದೀಪುತ್ರಂಗೆ ಪೇಜಾರ್ ಚಲಂ ಬಟ್ಟುಂ ಮಾರ್ಮಲೆದಂಬುದೊಟ್ಟುಮುಟಿವರ್ ಸಂಗ್ರಾಮರಂಗಾಗ್ರದೊಳ್ ||೧೧೭
ವll ಎಂಬನ್ನೆಗಂ ಶೈತನುಮನವರತ ಶರಾಸಾರದಿಂ ಕುರುಬಲಮಲ್ಲಮನರೆದು ಸಣ್ಣಿಸಿದಂತೆ ಮಾಡಿ ತವ ನೆರವಿಯನೆನಿತಂ ಕೊಂದೊಡಮೇನಂದಪುದೆಂದು ಗಾಂಗೇಯಂಗ ದಿರದಿದಿರಂ ಮಾರ್ಕೊಂಡು ಬಿಲ್ಗೊಯ್ತು ನಿಂದಾಗಳ್ಉll ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪರ್ದಗೊಳ್ಳುದುಂ ನದೀ
ಜಾತನುದಾತ್ತ ಭಕ್ತಿಯೊಳೆ ಕೆಯುಗಿದಾಗಳಿದ್ದಂತೂ ನಿಮ್ಮ ಪ || ರ್ಮಾತಿನ ಬೀರಮೀಯೆಡೆಗೆವಂದುದೆ ಮುಪ್ಪಿನೊಳೆಯ ಲೋಕ ವಿ
ಖ್ಯಾತರಿರಾಗಿ ಕೆಯ್ದುವಿಡಿವಲ್ಲಿಯ ಕಾಲ್ವಿಡಿಯಕ್ಕೆ ತಕ್ಕುದೇ || ೧೧೮ ಚill ಎನಗೆ ರಣಾಗ್ರದೊಳ್ ಪೊಣರ್ವೊಡಂಕದ ಪೂಂಕದ ಸಿಂಧುಪುತ್ರನೂ
ರ್ವನೆ ದೊರೆಯೆಂದು ನಿಮ್ಮೊಳೆ ವಲಂ ತಣಿಸಂದಿಯಲೈ ಪೂಸ್ಟನಾ | ನನಗಿವತ್ತಿಯಂ ಕಿಡಿಸಿ ನಿಮ್ಮಳವಂ ಪಂಗಿಕ್ಕಿ ನೀಮುಮಿಂ ತಿನಿತೆರ್ದೆಗೆಟ್ಟರಿಂ ತುಟಿಲ ಸಂದರನಾರುಮನೆಂತು ನಂಬುವರ್|| ೧೧೯
ಒಟ್ಟುಗೂಡಿಸಿದ್ದಂತೆ ಕಾಣುತ್ತಿತ್ತು. ೧೧೭. ಭೀಷ್ಮನ ಒಂದೇ ಬಿಲ್ಲಿಗೆ ಪಟ್ಟಾಭಿಷಿಕ್ತರಾದ ಹತ್ತು ಸಾವಿರ ಚಕ್ರವರ್ತಿಗಳೂ ಪಟ್ಟಾಭಿಷಿಕ್ತವಾದ ಒಂದು ಲಕ್ಷ ಭದ್ರಗಜಗಳೂ (ಮಂಗಳಕರವಾದ ಆನೆ) ಹತ್ತೆಂಟುಲಕ್ಷ ಕುದುರೆಗಳೂ ಕೆಳಗುರುಳಿ ನಾಶವಾದುವು ಎನ್ನಲು ಯುದ್ಧದಲ್ಲಿ ಪಣದೊಟ್ಟು (ಹಟಮಾಡಿ) ಭೀಷ್ಮನಿಗೆ ಪ್ರತಿಭಟಿಸಿ ಬಾಣಪ್ರಯೋಗಮಾಡಿ ಉಳಿಯುವವರು ಯಾರಿದ್ದಾರೆ? ವ|ಎನ್ನುತ್ತಿರುವಲ್ಲಿ ಶ್ವೇತನೂ ಒಂದೇ ಸಮನಾದ ಬಾಣದ ಮಳೆಯಿಂದ ಕೌರವಸೈನ್ಯವನ್ನೆಲ್ಲ ಅರೆದು ಪುಡಿಮಾಡಿದಂತೆ ಮಾಡಿ ನಾಶಪಡಿಸಿ ಈ ಸಾಮಾನ್ಯ ಸೈನ್ಯವಷ್ಟನ್ನೂ ಕೊಂದರೆ ಏನು ಪ್ರಯೋಜನ ಎಂಬುದಾಗಿ ಭೀಷ್ಮನಿಗೆ ಹೆದರದೆ ಇದಿರಾಗಿ ಪ್ರತಿಭಟಿಸಿ ಬಿಲ್ಲನ್ನು ಸೆಳೆದು ನಿಂತನು - ೧೧೮. ಶ್ವೇತನ ಬಿಲ್ಲಿನಲ್ಲಿದ್ದ ಮಹಾಶಿವನ ಆಕಾರವು ತನ್ನ ಹೃದಯವನ್ನು ಸೂರೆಗೊಂಡಿತು. ಭೀಷ್ಮನು ಅತ್ಯಂತ ಶ್ರೇಷ್ಠವಾದ ಭಕ್ತಿಯಿಂದ ಕೈಮುಗಿದನು. (ಶ್ವೇತನು ಅವರನ್ನು ಕುರಿತು) ಇದೇನಿದು? ನಿಮ್ಮ ಪ್ರಸಿದ್ಧವಾದ ಪರಾಕ್ರಮವು ಮುಪ್ಪಿನಲ್ಲಿ ಈ ಸ್ಥಿತಿಗೆ ಬಂದಿತೇ? ಪೂರ್ಣವಾಗಿ ಲೋಕಪ್ರಸಿದ್ಧವಾಗಿರುವ ನೀವು ಶಸ್ತ್ರಗ್ರಹಣ ಮಾಡಬೇಕಾದ ಕಾಲದಲ್ಲಿ ಶರಣಾಗತರಾಗುವುದು ಯೋಗ್ಯವೇ ? ೧೧೯. ಯುದ್ಧಮುಖದಲ್ಲಿ ಕಾದಬೇಕಾದರೆ ಪ್ರಸಿದ್ಧನೂ ಗರ್ವಿಷ್ಠನೂ ಆದ ಭೀಷ್ಮನೊಬ್ಬನೇ ನನಗೆ ಸಮಾನನಾದವನು ಎಂದು ಪೂರ್ಣವಾಗಿ ನಿಷ್ಕರ್ಷೆ ಮಾಡಿಕೊಂಡು ಯುದ್ಧ ಮಾಡುವುದಕ್ಕೆ ನಾನು ಪ್ರತಿಜ್ಞೆ