________________
೪೯೦) ಪಂಪಭಾರತಂ ಮII ಗಜೆಯಂ ಭೋರೆನೆ ಪರ್ವಿ ಬೀಸಿ ಕಡುಪಿಂದೆಯಂದು ಮಾಜಾಂತ ಸಾ
ಮಜಸಂಘಾತಮನೊಂದುಗೊಳ್ಳೆರಡುಗೊಳ್ಳೆಂದುರ್ವಿ ಪೊಲ್ಲೊಂದು, ಪೊ * ಹೈ ಜವಂಗುಂದಿ ಸಿಡಿಲು ಮುನ್ನಡಿಗುರುಳರ್ಪನ್ನೆಗಂ ಬೀಟ್ ದಿ ಗಜಮಂ ಪೋಲ್ವ ಗಜಂಗಳಂ ಪಲವುಮಂ ಕೊಂದು ಮರುನ್ನಂದನಂ || ೧೦೨ ಕಂ|| ಬಡಿಗೊಳೆ ಬಿದು ಬಿಬ್ಬರ ಬಿರಿ * ದೊಡನುಗೆ ಪೊಸಮುತ್ತು ಕೋಡನೂ ಮದೇಭಂ | ಕೆಡೆದುವು ಕೊಲ್ಲದಿರೆಂದಿರ ದಡಿಗೆಲಗುವ ತೇಜನನಿನಿಸನನುಕರಿಸುವಿನಂ ||
೧೦೩ ವ|| ಅಂತು ಪತ್ತೆಂಟುಸಾಸಿರಮಾನೆಯಂ ಪಡಲ್ವಡಿಸಿಯುಂ ಸೈರಿಸಲಾದ - ಮlು ಪಿಡಿದೊಂದೊಂದ ಗಾತಮಂ ತಿರಿಸಿಕೊಂಡೋಂದೊಂದeಳೊಳ್ ಪೊಯುಮ
ಅಡಗಪನೆಗಮತಿಕೊಂಡಸಗವೊಯೋಯೊಳ್ ತಡಂಬೋಯ್ತುಮು || ಇಡುಗುಂ ನೆತ್ತರುಮಲ್ಕುಮಲ್ಲ ದೆಸೆಗಂ ಜೀಏಟ್ಟು ಪಾಡ್ತೆ ಬ
ಅಡಿಗಂ ಬೀಸಿಯುಮೊಂದು ಕೋಟಿವರೆಗಂ ಕೊಂದಂ ಮದ್ಭಂಗಳಂ loo೪ ಮll ಸಿಡಿಲಂತೂರ್ಮಯ ಪೊಯ್ಯ ಪೊಯ್ಯ ಭರದಿಂದೊಂದಾನೆ ತೋಲ್ ನೆತ್ತರೆ
ಬೃಡಗೊಂದೋಂದಳೊಂದುಮೊಂದದೆ ಗದಾನಿರ್ಘಾತದಿಂ ಮಾಯಮಾ | ದೊಡೆ ಪೋ ತಪ್ಪಿದೆನೆಂದು ಪರದಗುರ್ವಪನ್ನೆಗಂ ಮೀಸೆಯಂ ಕಡಿದಂ ತೋಳ್ವಲದೇ ಮೆಚ್ಚುವನಿತರ್ಕುಗ್ರಾಜಿಯೊಳ್ ಭೀಮನಾ || ೧೦೫
೧೦೨. ಭೀಮನು ಗದೆಯನ್ನು ಭೋರೆಂದು ವಿಸ್ತಾರವಾಗಿ ಬೀಸಿ ಕ್ರೌರ್ಯದಿಂದ ಬಂದು ಪ್ರತಿಭಟಿಸಿದ ಆನೆಗಳ ಸಮೂಹವನ್ನು ಒಂದು ತಕ್ಕೊ, ಎರಡು ತಕ್ಕೋ ಎಂದು ಉಬ್ಬಿ ಹೊಡೆಯುವ ಹೊಡೆತಕ್ಕೆ ಆನೆಗಳು ತಮ್ಮವೇಗವನ್ನು ಕಳೆದುಕೊಂಡು ಸಿಡಿದು ಮೊದಲೇ ಅಡಿಗುರುಳುವ ಹಾಗೆ ಉರುಳಲು ದಿಗ್ಗಜಗಳಂತಿದ್ದ ಅನೇಕ ಆನೆಗಳನ್ನು ಕೊಂದನು. ೧೦೩. ಭೀಮನ ಗದೆಯ ಪೆಟ್ಟಿನಿಂದ ಕುಂಭಸ್ಥಳವು ಸಂಪೂರ್ಣವಾಗಿ ಬಿರಿದುಹೋಯಿತು. ಜೊತೆಯಲ್ಲಿಯೇ (ಕುಂಭಸ್ಥಳದಲ್ಲಿದ್ದ ಹೊಸಮುತ್ತುಗಳು ಚೆಲ್ಲಾಡಿದುವು. ಮದ್ದಾನೆಗಳು ಕೊಂಬನ್ನು ಕೆಳಕ್ಕೆ ಊರಿ 'ನಮ್ಮನ್ನು ಕೊಲ್ಲಬೇಡ' ಎಂದು ಭೀಮನ ಕಾಲಿಗೆ ಬೀಳುವ ರೀತಿಯನ್ನು ಸ್ವಲ್ಪ ಮಟ್ಟಿಗೆ ಅನುಕರಿಸುತ್ತ ಬಿದ್ದುವು. ವ! ಹಾಗೆ ಹತ್ತೆಂಟು ಸಾವಿರ ಆನೆಗಳನ್ನೂ ನಾಶಪಡಿಸಿದರೂ ತೃಪ್ತಿಹೊಂದದೆ ೧೦೪. ಒಂದು ಆನೆಯ ಶರೀರವನ್ನು ಹಿಡಿದುಕೊಂಡು ವೇಗವಾಗಿ ತಿರುಗಿಸಿ ಒಂದರೊಡನೆ ಒಂದನ್ನು ಎಲುಬೂ ಮಾಂಸವೂ ಆಗುವ ಹಾಗೆ ಹೊಡೆದು ಮೇಲಕ್ಕೆತ್ತಿಕೊಂಡು ಅಗಸನು ಒಗೆಯುವ ರೀತಿಯಲ್ಲಿ ಬಿರುಸಾಗಿ ಮೇಲಕ್ಕೆತ್ತಿ ಒಗೆದು ಒಳಗಿದ್ದ ಮಾಂಸವೂ ರಕ್ತವೂ ಎಲುಬುಗಳೂ ಜೀರೆಂದು ಶಬ್ದಮಾಡುತ್ತ ಎದ್ದು ಎಲ್ಲ ದಿಕ್ಕುಗಳಿಗೂ ಹಾರಿ ನೆಗೆಯುವ ಹಾಗೆ ಬೀಸಿ ಪರಾಕ್ರಮಶಾಲಿಯಾದ ಭೀಮನು ಒಂದುಕೋಟಿ ಲೆಕ್ಕದವರೆಗಿನ ಮದ್ದಾನೆಗಳನ್ನು ಕೊಂದನು. - ೧೦೫, ಸಿಡಿಲಿನ ಹಾಗೆ ಒಂದೇ ಸಲ ಹೊಡೆಯಲು ಹೊಡೆದ ವೇಗಕ್ಕೆ ಆನೆಯ ಚರ್ಮ ರಕ್ತ ಎಲುಬು